BREAKING NEWS
Search

ಶಿವಮೊಗ್ಗ ಜಿಲ್ಲಾ ಬಿಜೆಪಿ‌ ಅಧ್ಯಕ್ಷರಾಗಿ ಸಾಗರದ ಟಿ.ಡಿ.ಮೇಘರಾಜ್ ಆಯ್ಕೆ!

892

ಶಿವಮೊಗ್ಗ : ಯಡಿಯೂರಪ್ಪ ಮತ್ತು ಬಿಜೆಪಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿದ್ದ ಒಂದು ಕಾಲದಲ್ಲಿ ಫೈರ್ ಬ್ರಾಂಡ್ ಎಂದು ಕರೆಸಿಕೊಂಡಿದ್ದ ಸಾಗರದ ಟಿ.ಡಿ. ಮೇಘರಾಜ್ ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು ಸರ್ವಾನುಮತದಿಂದ ಟಿ.ಡಿ. ಮೇಘರಾಜ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಸಾಗರ ನಗರಸಭೆಯಲ್ಲಿ ಹಾಲಿ ಸದಸ್ಯರಾಗಿರುವ ಟಿ.ಡಿ. ಮೇಘರಾಜ್ ಈ ಹಿಂದೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅಲ್ಲದೇ ಸಾಗರ ನಗರಸಭೆಯಲ್ಲಿ ಅಧ್ಯಕ್ಷರು ಕೂಡ ಆಗಿದ್ದರು.

ಪಕ್ಷದಲ್ಲಿ ಸಕ್ರೀಯರಾಗಿ ಹಲವಾರು ವರ್ಷಗಳಿಂದ ಗುರುತಿಸಿಕೊಂಡಿದ್ದ ಮೇಘರಾಜ್ ಅವರನ್ನು ನಿಕಟಪೂರ್ವ ಅಧ್ಯಕ್ಷರಾಗಿರುವ ಹಾಲಿ ಎಂ.ಎಲ್.ಸಿ. ರುದ್ರೆಗೌಡರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಸಂಸದ ಬಿ.ವೈ. ರಾಘವೇಂದ್ರ, ಎಂ.ಎಲ್.ಸಿ. ಆಯನೂರು ಮಂಜುನಾಥ್, ಸೊರಬ ಶಾಸಕ ಕುಮಾರ ಬಂಗಾರಪ್ಪ, ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ, ಸೇರಿದಂತೆ ಇತರರು ಇಂದು ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಮೇಘರಾಜ್ ಅವರಿಗೆ ಶುಭ ಹಾರೈಸಿದರು.
Leave a Reply

Your email address will not be published. Required fields are marked *