BREAKING NEWS
Search

ಈಡಿಗ ಸಮುದಾಯದಿಂದ ಸಿಎಂಗೆ ಪತ್ರ ಚಳುವಳಿ ! ಕಾರಣವೇನು ಗೊತ್ತಾ!

188

ಸೊರಬ: ಈಡಿಗ ಸಮಾಜ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ವತಿಯಿಂದ ಮಂಗಳವಾರ ಪಟ್ಟಣದ ಪ್ರಧಾನ ಅಂಚೆ ಕಚೇರಿ ಮುಂಭಾಗ ಪತ್ರ ಚಳುವಳಿ ನಡೆಸಲಾಯಿತು.

ಸೊರಬ ಪಟ್ಟಣದ ಪ್ರಧಾನ ಅಂಚೆ ಕಚೇರಿ ಮುಂಭಾಗ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ವತಿಯಿಂದ ಈಡಿಗ ಸಮಾಜ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿ ಪತ್ರ ಚಳುವಳಿ ನಡೆಸಲಾಯಿತು.

ಚಳುವಳಿಯ ನೇತೃತ್ವ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇಇಡಗೋಡು, ರಾಜ್ಯದಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ, ಆಯಾ ಸಮಾಜದ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಆಂತೆಯೇ ಈಡಿಗ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದ್ದು, ೨೬ ಒಳಪಂಗಡಗಳನ್ನು ಹೊಂದಿದೆ.

ಈ ನಿಟ್ಟಿನಲ್ಲಿ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಜೊತೆಗೆ ಒಂದು ಸಾವಿರ ಕೋಟಿ ರೂ., ಮೀಸಲಿಡಬೇಕು. ರಾಜ್ಯಕ್ಕೆ ಬೆಳಕು ನೀಡಲು ನಿರ್ಮಿಸಿದ ಲಿಂಗನಮುಕ್ಕಿ ಆಣೆಕಟ್ಟೆಯ ಹಿನ್ನೀರಿನ ಸಂತ್ರಸ್ಥರ ಬದುಕು ಈಗ ಕತ್ತಲಾಗಿದೆ. ತಮ್ಮ ಸರ್ವಸ್ವವನ್ನೇ ಕಳೆದುಕೊಂಡ ಅನೇಕ ಈಡಿಗ ಸಮುದಾಯದವರು ಇಂದಿಗೂ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಈ ನಿಟ್ಟಿನಲ್ಲಿ ಅಭಿವೃದ್ಧಿ ನಿಗಮ ಸ್ಥಾಪನೆ ಅನಿವಾರ್ಯವಾಗಿದೆ ಎಂದು ಆಗ್ರಹಿಸಿದರು.

ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ ಬಿಳವಗೋಡು ಮಾತನಾಡಿ, ಈಡಿಗ ಸಮುದಾಯ ಅನಾಧಿ ಕಾಲದಿಂದ ಸಮಾಜದ ಅವಕೃಪೆಗೆ ಒಳಗಾಗುತ್ತಾ ಬಂದಿದೆ. ಆದರೂ, ನಮ್ಮ ಸಮುದಾಯದಲ್ಲಿ ಜನಿಸಿದ ನಾರಾಯಣಗುರುಗಳು ಎಲ್ಲ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದರು.

ಪ್ರಸ್ತುತ ದಿನಗಳಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳಲ್ಲೊಂದಾಗ ಈಡಿಗ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿದರೆ, ಸಮಾಜಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ಪ್ರತ್ಯೇಕ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಬೇಡಿಕೆಗಳನ್ನೊಳಗೊಂಡ ಪತ್ರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರವಾನಿಸಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜೆ. ಶಿವಾನಂದಪ್ಪ, ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ನಾಗೇಶ್ ರಾಜೀವನಗರ, ಉಪಾಧ್ಯಕ್ಷ ತ್ಯಾಗರಾಜ ಹುಲ್ತಿಕೊಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ನೆಹರು ಕೊಡಕಣಿ, ಸದಸ್ಯರಾದ ಸದಾಶಿವ ಕೊಡಕಣಿ, ಶಿವಕುಮಾರ ಸಾರೇಮರೂರು, ಪ್ರಮುಖರಾದ ಪಂಡಲೀಕಪ್ಪ ಜಿರಲೇಕೊಪ್ಪ, ರಜನಿ ನಾಯ್ಕ್, ಉಮೇಶ ಕೈಸೋಡಿ, ತ್ಯಾಗರಾಜ ಹಾಲಗಳಲೆ, ರಾಘವೇಂದ್ರ ನಡಹಳ್ಳಿ, ಗಣಪತಿ ಹಾಲಗಳಲೆ, ಎಸ್.ಬಿ. ಹುಚ್ಚರಾಯಪ್ಪ ಹಿರೇಶಕುನ, ಗಣಪತಿ ಕೆರೆಹಳ್ಳಿ, ಚಂದ್ರಶೇಖರ ದೇವತಿಕೊಪ್ಪ ಇತರರಿದ್ದರು.





Leave a Reply

Your email address will not be published. Required fields are marked *