191

ಶಿವಮೊಗ್ಗ :- ಇಂದು ಅಕಾಲಿಕೆ ಮಳೆಗೆ ಶಿವಮೊಗ್ಗ ಜನತೆ ಹೈರಾಣರಾಗಿದ್ದಾರೆ. ಒಂದೆಡೆ ಸ್ಮಾರ್ಟ್ ಸಿಟಿ ಕಾಮಗಾರಿ ಯಿಂದ ರಸ್ತೆಗಳಲ್ಲಿ ಗುಂಡಿ ನಿರ್ಮಾಣಗೊಂಡಿದ್ದರಿಂದ ಮಳೆಯಿಂದ ರಸ್ತೆಗಳು ನೀರು ತುಂಬಿ ಜನಜೀವನವನ್ನು ಅಸ್ತವ್ಯಸ್ತ ಗೊಳಿಸಿತು.

ಇಂದು ಶಿವಮೊಗ್ಗ ನಗರದಲ್ಲಿ ಸುರಿದ ಮಳೆಗೆ ಬಾಲರಾಜ್ ರಸ್ತೆಯಿಂದ ರಾಘವೇಂದ್ರ ಸ್ವಾಮಿ ಮಠಕ್ಕೆ ಹೋಗುವ ರಸ್ತೆ ಮೇಲೆ ನೀರು ನಿಂತಿದೆ. ರಾಜಾಕಾಲುವೆಯಲ್ಲಿ ಅಧಿಕ ಮಳೆ ನೀರು ಹರಿದು ಬಂದು ರಸ್ತೆಯ ಮೇಲೆ ಹರಿದಿದೆ. ಕಾಂಗ್ರೆಸ್ ಕಚೇರಿಯ ಬಳಿ ಇರುವ ಭೋವಿ ಸಮುದಾಯದ ಕಾಂಪ್ಲೆಕ್ಸ್ ಅಂಗಡಿಯ ಮುಂದೆ ನಿಂತಿದ್ದ ದ್ವಿಚಕ್ರ ವಾಹನಗಳು ನೀರಿನಲ್ಲಿ ಬಹುತೇಕ ಮುಳುಗಿಹೋಗಿದ್ದವು.

ಆರ್ ಎಂ ಎಲ್ ನಗರದಲ್ಲಿ ಮಳೆ ನೀರು ಹರಿದುಬಂದಿದ್ದು ತಗ್ಗಿನ ಪ್ರದೇಶದಲ್ಲಿ ನೀರು ನಿಂತು ರಸ್ತೆ ಸಂಚಾರಕ್ಕೆ ತೊಡಕಾಯಿತು.

ಜಿಲ್ಲೆಯಲ್ಲಿ ಶಿವಮೊಗ್ಗ,ಭದ್ರಾವತಿ,ಸಾಗರ ಸೇರಿದಂತೆ ಹಲವು ಭಾಗದಲ್ಲಿ ವರುಣನ ಸಿಂಚನವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ