BREAKING NEWS
Search

ಶಿವಮೊಗ್ಗ ಜಿಲ್ಲಾ ಸಮಗ್ರ ಮಾಹಿತಿ-ಎಲ್ಲಿ ಏನು?

196

ಶಿವಮೊಗ್ಗ ಜಿಲ್ಲೆಯ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

ಸೆಪ್ಟಂಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 164.16 ಮಿಮಿ ಇದ್ದು, ಇದುವರೆಗೆ ಸರಾಸರಿ 347.25 ಮಿಮಿ ಮಳೆ ದಾಖಲಾಗಿದೆ.

ಲಿಂಗನಮಕ್ಕಿ: 1819 (ಗರಿಷ್ಠ), 1813.70 (ಇಂದಿನ ಮಟ), 31529.00 (ಒಳಹರಿವು), 1680.20 (ಹೊರಹರಿವು). ಭದ್ರಾ: 186 (ಗರಿಷ್ಠ), 185.30 (ಇಂದಿನ ಮಟ್ಟ), 10986.00 (ಒಳಹರಿವು), 11600.00 (ಹೊರಹರಿವು). ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 20578.00 (ಒಳಹರಿವು), 20578.00 (ಹೊರಹರಿವು).

ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), 588.56 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 2524 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ).

ಪಿಕ್‍ಅಪ್: 563.88 (ಎಂಎಸ್‍ಎಲ್‍ಗಳಲ್ಲಿ), 562.90 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 1489 (ಒಳಹರಿವು), 0.00(ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ).

ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), 572.84 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 1047.00 (ಒಳಹರಿವು), 752 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ).

ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 576.72 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 905.00 (ಒಳಹರಿವು), 1191.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ).

ಟುಲಿಪ್ ಯೋಜನೆಗೆ ಆನ್‍ಲೈನ್ ಅರ್ಜಿ ಆಹ್ವಾನ

ಶಿವಮೊಗ್ಗ, ಸೆಪ್ಟಂಬರ್-24 (ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಹಾಗೂ ಮಾನವ ಸಂಪನ್ಮೂಲ ಇಲಾಖೆಯ ಮಾರ್ಗಸೂಚಿಯಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷನ ಸಮಿತಿಯ ಜಂಟಿ ಸಹಯೋಗದೊಂದಿಗೆ ಶಿವಮೊಗ್ಗ ಸ್ಮಾರ್ಟ್‍ಸಿಟಿ ಲಿ.ವತಿಯಿಂದ ತಾಂತ್ರಿಕ ಶಿಕ್ಷಣ ಹಿನ್ನೆಲೆಯೂ ಸೇರಿದಂತೆ 18 ತಿಂಗಳಿನ ಒಳಗೆ ತೇರ್ಗಡೆಯಾದ ಹೊಸ ಪದವೀಧರರಿಗೆ ರೂ. 5000/- ಸ್ಟೈಪೆಂಡ್‍ನೊಂದಿಗೆ ಒಂದು ವರ್ಷದ ಅವಧಿಗೆ ಹಾಗೂ ಸ್ಟೈಪಂಡ್ ರಹಿತವಾಗಿ ಎರಡು ತಿಂಗಳ ಅವಧಿಗೆ ಇಂಜಿನಿಯರಿಂಗ್, ನಗರ ಯೋಜನೆ, ಹಣಕಾಸು, ಪರಿಸರ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಪ್ರಾಯೋಗಿಕ ತರಬೇತಿ ಪಡೆಯಲು ಅನುವಾಗುವ ಇಂಟರ್ನ್‍ಶಿಪ್ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದ್ದು,  ಅರ್ಹ ಪದವೀಧರ ಅಭ್ಯರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.

ಈ ಯೋಜನೆಯಲ್ಲಿ ಯುವಕರುಗಳ ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳಲು ಅವಕಾಶವಾಗುವುದಲ್ಲೇ, ಹಲವು ಪ್ರಾಕಾರಗಳ ಉದ್ಯೋಗಾವಕಾಶಕ್ಕೂ ಅರ್ಹತೆ ಪಡೆಯಬಹುದಾಗಿದೆ.

ಅಸಕ್ತರು http://internship.aict-indi.org ರಲ್ಲಿ ಅಕ್ಟೋಬರ್ 15ರೊಳಗಾಗಿ ಅರ್ಜಿ ಸಲ್ಲಿಸುವಂತೆ ಶಿ.ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರ ಚಿದಾನಂದ ಎಸ್. ವಟಾರೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಸ್ಮಾರ್ಟ್‍ಸಿಟಿ ಜಾಲತಾಣದಲ್ಲಿ ಅಥವಾ ಶಿವಮೊಗ್ಗ ಸ್ಮಾರ್ಟ್‍ಸಿಟಿ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬಹುದಾಗಿದೆ.

ಸಾಗರದಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಸಾಗರ:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಾಗರ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿನ ಅರ್ಕಳ, ಬಳ್ಳಿಬೈಲು (ಮಿನಿ), ಶ್ರೀಧರಪುರ (ಮಿನಿ), ಕಪ್ಪದೂರು (ಮಿನಿ), ಮತ್ತು ನರಗುಂ(ಮಿನಿ) ಅಂಗನವಾಡಿ ಕೇಂದ್ರಗಳ 5 ಕಾರ್ಯಕರ್ತೆಯರ ಹುದ್ದೆಗೆ ಗಿಳಾಲಗುಂಡಿ, ಲಕ್ಕವಳ್ಳಿ, ಕಂಬಳಿಕೊಪ್ಪ, ಹೊಂಕೇರಿ, ಕಾರ್ಗಲ್-1, ಬೆಳ್ಳೆಣ್ಣೆ, ಇಡುವಾಣಿ, ಕುಡಿಗೆರೆ ಮತ್ತು ಕಾರೆಹೊಂಡ ಅಂಗನವಾಡಿ ಕೇಂದ್ರಗಳಲ್ಲಿನ ಅಂಗನವಾಡಿ ಸಹಾಯಕಿಯರ 09ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಹಾಗೂ ವಯೋಮಿತಿಯೊಳಗಿನ ಸ್ಥಳೀಯ ಅರ್ಹ ಮಹಿಳಾ ಅಭ್ಯರ್ಥಿಗಳು ಸೆಪ್ಟಂಬರ್ 30 ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸಬಹುದಾಗಿದೆ.

ಅರ್ಭರ್ಥಿಗಳು ಹೊಂದಿರುವ ವಿದ್ಯಾರ್ಹತೆ ಹಾಗೂ ಮೀಸಲಾತಿಯನ್ವಯ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅರ್ಜಿ ಸಲ್ಲಿಸಲು ಹಾಗೂ ಮಾಹಿತಿಗಾಗಿ ಜಾಲತಾಣ www.anganavadirecruit.kar.nic.inನ್ನು ಸಂಪರ್ಕಿಸುವಂತೆ ಸಾಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದಾಯ ತೆರಿಗೆ ತಿದ್ದುಪಡಿ ಕುರಿತು ಕಾರ್ಯಾಗಾರ

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಸೆ. 25 ರಂದು ಸಂಜೆ 5.00ಕ್ಕೆ ಆದಾಯ ತೆರಿಗೆ ಕಾಯೆಯಲ್ಲಿನ ಇತ್ತೀಚಿನ ತಿದ್ದುಪಡಿಗೆ ಸಂಬಂಧಿಸಿದಂತೆ ಪ್ರಮುಖವಾಗಿ ಹಿಂದಿನ ಆರ್ಥಿಕ ವರ್ಷದಲ್ಲಿ 10 ಕೋಟಿಗೂ ಮಿಕ್ಕಿ ವಹಿವಾಟು ನಡೆಸಿದವರಿಗೆ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ.

ಸಂಬಂಧಪಟ್ಟ ವರ್ತಕರು ಹಾಗೂ ಸದಸ್ಯರು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಸದುಪಯೋಗವನ್ನು ಪಡೆದುಕೊಳ್ಳುವಂತೆ ತೆರಿಗೆ ಸಲಹಾ ಸಮಿತಿ ಅಧ್ಯಕ್ಷ ಜಿಎಸ್‍ಟಿಪಿ ಯು ಮಧುಸೂದನ ಐತಾಳ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಹವಾಮಾನ ವೈಪರೀತ್ಯದಿಂದ ಶುಂಠಿಯಲ್ಲಿ ಕೊಳೆ ರೋಗ -ರಕ್ಷಣೆ ವಿಧಾನ ಹೀಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 5,460 ಹೆಕ್ಟೇರುಗಳಲ್ಲಿ ಶುಂಠಿ ಬೆಳೆಯನ್ನು ಅಡಿಕೆಯ ಅಂತರ ಬೆಳೆಯಾಗಿ ಮತ್ತು ಏಕಬೆಳೆಯಾಗಿ ಬೆಳೆಯುತ್ತಿದ್ದು, ಅಡಿಕೆಯಷ್ಟೇ ಆದಾಯವನ್ನು ತಂದುಕೊಡುವ ಬೆಳೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಶುಂಠಿ ಬೆಳೆಗೆ ಗಡ್ಡೆಕೊಳೆ ರೋಗವು ಕಂಡುಬಂದಿರುತ್ತದೆ. ಶುಂಠಿ ಗಡ್ಡೆ ಕೊಳೆರೋಗವು “ಪೈಥಿಯಂ ಆಫಿನಿರ್ಡಮೆಟಂ” ಎಂಬ ಶಿಲೀಂಧ್ರದಿಂದ ಬರುತ್ತದೆ. ಬೆಳೆಯು ಈ ರೋಗಕ್ಕೆ ತುತ್ತಾದ್ದಲ್ಲಿ ಗಿಡ ಸಂಪೂರ್ಣವಾಗಿ ಒಣಗಿ ಸಾಯಿವುದರಿಂದ ಅಧಿಕ ನಷ್ಟವನ್ನುಂಟುಮಡುತ್ತದೆ. ಈ ರೋಗವು ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ, ಇದರ ಹೊರತಾಗಿ ಬ್ಯಾಕ್ಟೀರಿಯಾದಿಂದ ಬರುವ ಗಡ್ಡೆ ಕೊಳೆರೋಗ ಅಥವಾ ಹಸಿರು ಕೊಳೆ ರೋಗವು ಕೆಲವು ಕಡೆ ಬಂದಿರುತ್ತದೆ. ಬಿಸಿಲು ಮತ್ತು ಮಳೆಯ ವಾತಾವರಣ ಈ ಹಸಿರು ಕೊಳೆ ರೋಗವು ಉಲ್ಬಣವಾಗಲು ಮುಖ್ಯ ಕಾರಣವಾಗಿರುತ್ತದೆ. ರೋಗದ ಸಮಗ್ರ ನಿರ್ವಹಣೆ ಅತಿ ಅವಶ್ಯವಾಗಿರುತ್ತದೆ, ಆದ್ದರಿಂದ ಶುಂಠಿ ಬೆಳೆ ಬೆಳೆಯುತ್ತಿರುವಂತಹ ರೈತರುಗಳು ರೋಗದ ನಿಯಂತ್ರಣಕ್ಕೆ, ಈ ಕೆಳಕಂಡಂತೆ ನಿರ್ವಹಣಾ ಕ್ರಮಗಳನ್ನು ಅನುಸರಿಸಿಸಲು ತೊಟಗಾರಿಕೆ ಇಲಾಖೆ ಕೋರಿದೆ.

ಶುಂಠಿ ಮಡಿಗಳಲ್ಲಿ ನೀರು ನಿಲ್ಲದ ಹಾಗೆ ಬಸಿಗಲುವೆಗಳನ್ನು ಸರಿಪಡಿಸುವುದು. ಶುಂಠಿ ಮಡಿಗಳಲ್ಲಿ ಮಣ್ಣು ಕೊಚ್ಚಿ ಹೊಗಿದ್ದಲ್ಲಿ ಮಡಿಗಳಿಗೆ ಮಣ್ಣನ್ನು ಏರಿಸುವುದು. ತಾಕುಗಳಲ್ಲಿ ರೊಗದ ಮುನ್ಸೂಚನೆ ಕಂಡುಬಂದಲ್ಲಿ ಶೇ. 1 ರ ಬೋರ್ಡೋ ದ್ರಾವಣ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು. ಈಗಾಗಲೇ ತೀವ್ರವಾಗಿ ರೋಗಕ್ಕೆ ತುತ್ತಾಗಿರುವ ತಾಕುಗಳಲ್ಲಿ ಭಾದಿತ ಗಿಡಗಳನ್ನು ಗಡ್ಡೆಗಳ ಸಮೇತ ತೆಗೆದು ಹಾಕಿ, ನಂತರ 1 ಗ್ರಾಂ ಮೆಟಲಾಕ್ಸಿ;ಲ್ + 2 ಗ್ರಾಂ ಮ್ಯಾಂಕೊಜೆಬ್( ರೆಡೊಮಿಲ್ ಎಂ.ಝಡ್) ಅಥವಾ 2 ಗ್ರಾಂ ಸೈಮಕ್ಸಿನ್+ 2 ಗ್ರಾಂ ಮ್ಯಾಂಕೊಜೆಬ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿದ ದ್ರಾವಣವನ್ನು ರೋಗ ಬಂದಂತಹ ಮಡಿಗೆ ಹಾಗೂ ಸುತ್ತಮುತ್ತಲಿನ ಮಡಿಗಳಿಗೆ ಸಂಪೂರ್ಣವಾಗಿ ನೆನೆಯುವಂತೆ ಹಾಕುವುದು ಹಾಗೂ ಸಂಪೂರ್ಣ ಬೆಳೆಗೆ ಸಿಂಪರಣೆ ಮಾಡುವುದು.

“ರಾಲಸ್ಟೊನಿಯಾ ಸೊಲನೇಸಿಯಾರಂ ಬ್ಯಾಕ್ಟೀರಿಯಾದಿಂದ” ಬರುವ ಕೊಳೆ ರೋಗಕ್ಕೆ (ಹಸಿರು ಕೊಳೆ ರೋಗ) ತುತ್ತಾದ ಗಿಡದ ಎಲೆಗಳು ಹಸಿರಿರುವಾಗಲೇ ಸುರುಳಿ ಸುತ್ತಿಕೊಂಡು ಬಾಡುತ್ತವೆ, ನಂತರ ಕೆಳಗಿನಿಂದ ಎಲೆಗಳು ಹಳದಿಯಾಗುತ್ತವೆ 4-5 ದಿನಗಳಲ್ಲೇ ಬಾಡಿ ಸಾಯುತ್ತವೆ. ಈ ರೋಗ ತಗುಲಿದ ಗಿಡಗಳು ಕೆಲವೇ ದಿನಗಳಲ್ಲಿ ಸಾಯುವುದರಿಂದ ಒಮ್ಮೆ ರೋಗ ತಗುಲಿದ ಗಿಡಗಳನ್ನು ಬದುಕಿಸಿವುದು ಕಷ್ಟ ಆದ್ದರಿಂದ ಶುಂಠಿಯಲ್ಲಿ ಹಸಿರು ಕೊಳೆಯನ್ನು ನಿಯಂತ್ರಿಸಲು ಸ್ಟ್ರೆಪ್ಟೊಸೈಕ್ಲಿನ್ 0.5 ಗ್ರಾಂ ಮತ್ತು ಕಾಪರ್ ಆಕ್ಸಿ ಕ್ಲೋರೈಡ್ 3 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿದ ದ್ರಾವಣವನ್ನು ಗಿಡದ ಬುಡ ನೆನೆಯುವಂತೆ ಹಾಕಬೇಕು. ತೋಟದಲ್ಲಿ ರೋಗ ಪೀಡಿತ ಗಿಡಗಳನ್ನು ಕಿತ್ತು ಆ ಜಾಗಕ್ಕೆ ಸುಣ್ಣವನ್ನು ಹಾಕಬೇಕು ಮತ್ತು ಆ ಜಾಗದ ನೀರು ಉಳಿದ ಪ್ರದೇಶಕ್ಕೆ ಹರಿದು ಹೊಗದಂತೆ ಎಚ್ಚರ ವಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ವಿಷಯ ತಜ್ಞರನ್ನು ಸಂಪರ್ಕಿಸಲು ತಿಳಿಸಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ