ಶಿವಮೊಗ್ಗ :-ಗ್ರೀನ್ ಝೋನ್ ನಲ್ಲಿದ್ದ ಶಿವಮೊಗ್ಗ ಜಿಲ್ಲೆಗೆ ತಬ್ಲಿಘ್ ಗಳಿಂದ ಕರೋನಾ ಅಂಟಿಕೊಂಡು ಜಿಲ್ಲೆಯನ್ನು ಬೆಚ್ಚಿಬೀಳುವಂತೆ ಮಾಡಿದೆ.
ಇದರ ಬೆನ್ನಲ್ಲೆ ಸಾಗರ,ರಿಪ್ಪನಪೇಠೆಯಲ್ಲೂ ಗರ್ಭಿಣಿ ಸ್ತ್ರೀ ಯಲ್ಲಿ ಕರೋನಾ ಸೊಂಕು ಕಾಣಿಸಿಕೊಳ್ಳುವ ಮೂಲಕ ಸಾಗರ ಜನರಿಗೆ ಬರೆ ಎಳೆದಿದೆ.
ಹೀಗಾಗಿ ಹೆಚ್ಚು ಜನರು ಹೇರ್ ಕಟ್ ಮಾಡಿಸಿಕೊಳ್ಳಲು ಬರುವುದರಿಂದ ಇಂದಿನಿಂದಲೇ ಜಾರಿಗೆ ಬರುವಂತೆ ತಾಲ್ಲುಕಿನಲ್ಲಿ ಸಲೂನ್ ಬಂದ್ ಮಾಡಲು ಸವಿತಾ ಸಮಾಜ ತೀರ್ಮಾನಿಸಿದೆ.
ಸಾಗರದಲ್ಲಿ ಹೊಸ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಇಂದಿನಿಂದ ಸಾಗರದಲ್ಲಿ ಸಲೂನ್ಗಳನ್ನು ತೆರೆಯದಂತೆ ಸವಿತಾ ಸಮಾಜದಿಂದ ನಿರ್ಧರಿಸಲಾಗಿದೆ ಎಂದು ಸಮಾಜದ ಅಧ್ಯಕ್ಷರಾದ ರಾಜು ಭಂಡಾರಿ ತ್ಯಾಗರ್ತಿ ತಿಳಿಸಿದ್ದು ಇಂದಿನಿಂದ ಸಾಗರ ತಾಲೂಕಿನಾಧ್ಯಾಂತ ಸೆಲುನ್ ಗಳು ಬಂದ್ ಇರಲಿದೆ.