BREAKING NEWS
Search

ಸಾಗರ-ಚಾಟಿ ಬೀಸಿ ಮರ ಗುರುತಿಸಿದ ಪೋತರಾಜ! ಹೊಸ ವರ್ಷದಂದು ಮಾರಿ ಜಾತ್ರೆಗೆ ಕ್ಷಣಗಣನೆ

2103

ಶಿವಮೊಗ್ಗ:-

ಸಾಗರದ ಸುಪ್ರಸಿದ್ಧ ಜಾಗೃತ ಪೀಠದಲ್ಲೊಂದಾದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಕ್ಷಣ ಗಣನೆ ಪ್ರಾರಂಭವಾಗಿದೆ.

ರಾಜ್ಯದಲ್ಲೇ ಅತಿದೊಡ್ಡ ಜಾತ್ರೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಜಾತ್ರೆಯೂ ಒಂದು.

18 ಪೆಬ್ರವರಿ 2020 ರಂದು ಜಾತ್ರೆ ಪ್ರಾರಂಭವಾಗಲಿದೆ.

ಇಂದು ಶ್ರೀ ಮಾರಿಕಾಂಬ ದೇವಿಯ ಜಾತ್ರೆಗೆ ಮರ ಕಡಿಯುವ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಜಾತ್ರೆಯ ಕಾರ್ಯಕ್ರಮದ ವಿವರ.

ಚಾಟಿ ಬೀಸಿ ಮರ ಗುರುತಿಸಿದ ಪೋತರಾಜ

ಪೋತರಾಜನನ್ನು ಮನೆಯಿಂದ ಕರೆದು ತಂದು ಬೃಹತ್ ಮೆರವಣಿಗೆ ಮೂಲಕ ಮಾರಮ್ಮನ ತವರು ಮನೆ ಮುಂದೆ ಚಾಟಿ ಸೇವೆ ಮತ್ತು ಮರ ಕಡಿಯುವ ಉಪಕರಣಗಳ ಪೂಜೆ ನೆರವೇರಿಸಿದ ನಂತರ ಪೋತರಾಜನು ಚಾಟಿ ಬೀಸುವ ಮೂಲಕ ಸಾಗರದ ಚಾಮರಾಜಪೇಟೆ ಮೂಲಕ ಬಂದು ಪೋಸ್ಟ್ ಆಫೀಸ್ ರಸ್ತೆಯ ಮೂಲಕ ನೆಹರು ಮೈದಾನದಲ್ಲಿ ಹಾದುಹೋಗಿ ಬಿ.ಹೆಚ್ ರಸ್ತೆಯ ಪೊಲೀಸ್ ಉಪ ಅಧೀಕ್ಷಕರ ಮನೆಯಲ್ಲಿರುವ ಹಲಸಿನ ಮರವನ್ನು ಚಾಟಿ ಬೀಸಿ ಗುರುತಿಸಿದ್ದಾನೆ.

ಈ ಮೂಲಕ ಮರ ಕಡಿಯುವ ಶಾಸ್ತ್ರವನ್ನು ಧಾರ್ಮಿಕ ವಿಧಿ ಮೂಲಕ ಆಚರಿಸಲಾಯಿತು.
ಇದರ ನಂತರ ಅಂಕೆ ಹಾಕುವ ಶಾಸ್ತ್ರ ನಡೆಯಲಿದ್ದು ನಂತರ ಜಾತ್ರೆ ಪ್ರಾರಂಭವಾಗುತ್ತದೆ.
One thought on “ಸಾಗರ-ಚಾಟಿ ಬೀಸಿ ಮರ ಗುರುತಿಸಿದ ಪೋತರಾಜ! ಹೊಸ ವರ್ಷದಂದು ಮಾರಿ ಜಾತ್ರೆಗೆ ಕ್ಷಣಗಣನೆ

Leave a Reply

Your email address will not be published. Required fields are marked *