ತೀರ್ಥಹಳ್ಳಿ ರಂಜದಕಟ್ಟೆ ಸೇತುವೆ ಕುಸಿತ- ಹೆದ್ದಾರಿ ಸಂಚಾರ ಬಂದ್.

417

ಶಿವಮೊಗ್ಗ :ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಬಳಿಯ ಸೇತುವೆಯ ಬಲ ಭಾಗದಲ್ಲಿ ಕುಸಿತವಾಗಿದೆ. ಸೇತುವೆ ಕುಸಿತಗೊಂಡ ಪರಿಣಾಮ ಜಿಲ್ಲಾಡಳಿತ ಈ ಭಾಗದ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ.

ಶಿವಮೊಗ್ಗ ಹಾಗೂ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ಎ ಮುಖ್ಯ ರಸ್ತೆಯಾಗಿದ್ದು ಈಗಾಗಲೇ ಈ ಭಾಗದಲ್ಲಿ ರಸ್ತೆ ಉನ್ನತೀಕರಣ ನಡೆಯುತ್ತಿದೆ. ಆದರೆ ಸೇತುವೆ ನಿರ್ಮಾಣ ಮಾಡುವಲ್ಲಿ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯದ ಪರಿಣಾಮ ರಸ್ತೆ ಸಂಚಾರ ಬಂದ್ ಆಗಿದೆ.

ಸೇತುವೆ ಕೆಳಭಾಗ ಕುಸಿದಿರುವುದು.

ಇನ್ನು ಸೇತುವೆ ಶಿಥಿಲಗೊಂಡ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎನ್.ಎಚ್. ಅಧಿಕಾರಿಗಳು ಈ ಭಾಗದಲ್ಲಿ ಮಳೆ ಸುರಿಯುತ್ತಿರುವುದು ಹಾಗೂ ಸೇತುವೆ 100 ವರ್ಷ ಹಳೆಯದಾಗಿರುವುದರಿಂದ ಹಾಗೂ ಸೇತುವೆಯನ್ನು ಇಟ್ಟಿಗೆಯಲ್ಲಿ ಕಟ್ಟಿರುವುದರಿಂದ ಕುಸಿತಕ್ಕೆ ಕಾರಣವಾಗಿದೆ. ಇನ್ನು ಎರಡು ದಿನಗಳಲ್ಲಿ ಸೇತುವೆ ದುರಸ್ಥಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ