BREAKING NEWS
Search

ಶಿವಮೊಗ್ಗ ದಲ್ಲಿ 9ಕ್ಕೆ ಏರಿಕೆಯಾದ ಕರೋನಾ!ತೀರ್ಥಹಳ್ಳಿಯ ನಾಲ್ಕು ಗ್ರಾಮಗಳು ಸೀಲ್ ಡೌನ್!ಯಾಕೆ ಗೊತ್ತಾ?

1750

ಶಿವಮೊಗ್ಗ : ಶಿವಮೊಗ್ಗ ದಲ್ಲಿ ತಬ್ಲಿಘಿಗಳಿಂದಾಗಿ ಒಂಬತ್ತು ಕರೋನಾ ಪಾಸಿಟಿವ್ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಕರೋನಾ ಸಂಖ್ಯೆ ಅಧಿಕವಾಗಿತ್ತಿದೆ.

ತೀರ್ಥಹಳ್ಳಿಯಲ್ಲಿ ಸೀಲ್ ಡೌನ್!

ಮುಂಬೈನಿಂದ ಬಂದಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಾಲ್ಕು ಗ್ರಾಮಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.

ಮೇ 11 ರಂದು‌ ಮುಂಬೈನಿಂದ ಹಳ್ಳಿಬೈಲು ಗ್ರಾಮಕ್ಕೆ ವ್ಯಕ್ತಿಯೋರ್ವ ನಡೆದುಕೊಂಡೇ ಆಗಮಿಸಿದ್ದ.

ಮುಂಬೈನಲ್ಲಿ ಹೋಟೆಲ್ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ಈ ವ್ಯಕ್ತಿಗೆ ನಿನ್ನೆ ಮಧ್ಯಾಹ್ನ ದಿಂದ ಜ್ವರ ಕಾಣಿಸಿ ಕೊಂಡಿತ್ತು. ತಕ್ಷಣವೇ ಆತನನ್ನು ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ನಿನ್ನೆ ರಾತ್ರಿ ಆ ವ್ಯಕ್ತಿಯಲ್ಲಿ ಉಸಿರಾಟದ ಸಮಸ್ಯೆ ಪ್ರಾರಂಭವಾದ ಕಾರಣ ಆತನನ್ನು ಶಿವಮೊಗ್ಗದ ಕೋವಿಡ್ 19 ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಈತನಿಗೆ ಸೊಂಕು ದೃಡಪಟ್ಟಿದೆ.

ಸೀಲ್ ಡೌನ್ ಆದ ಗ್ರಾಮದ ದೃಶ್ಯ.

ಇನ್ನು ಈತ ಗ್ರಾಮದಲ್ಲಿ ಎಲ್ಲಾ ಕಡೆ ಸುತ್ತಾಡಿದ್ದ ಎಂಬ ಶಂಕೆಯ ಮೇಲೆ ಮುಳಬಾಗಿಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಬೈಲು, ರಂಜದಕಟ್ಟೆ, ಭೀಮನಕಟ್ಟೆ ಹಾಗೂ ಮುಳಬಾಗಿಲು ಗ್ರಾಮಗಳನ್ನು ಸಂಪೂರ್ಣವಾಗಿ ಇಂದು ಬೆಳಗ್ಗೆಯಿಂದ ಸೀಲ್ ಡೌನ್ ಮಾಡಲಾಗಿದೆ.

ಜ್ವರ ಬಂದ ವ್ಯಕ್ತಿಯ ಜೊತೆ ಬಂದಿದ್ದವರನ್ನು ಸಹ ಮೆಗ್ಗಾನ್ ಆಸ್ಪತ್ರೆಗೆ ತಪಾಸಣೆಗೆ ಕಳುಹಿಸಲಾಗಿದೆ.

ಇನ್ನು ಆತನ ಮನೆಯವರನ್ನು ಪ್ರತ್ಯೇಕವಾಗಿ ತಾಲೂಕು ಆಡಳಿತ ಕ್ವಾರಂಟೈನ್ ಮಾಡಿದೆ.

ಗ್ರಾಮಗಳಲ್ಲಿ ಯಾರೊಬ್ಬರು ಮನೆಯಿಂದ ಹೊರ ಬರಬಾರದು ಎಂದು ಮೈಕ್ ಮೂಲಕ ಪ್ರಚಾರ ಮಾಡಲಾಗುತ್ತಿದೆ.

ತೀರ್ಥಹಳ್ಳಿ ತಹಶೀಲ್ದಾರ್ ಶ್ರೀಪಾದ್ ರವರು, ಅಧಿಕಾರಿಗಳೂಂದಿಗೆ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಇದರಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಭಯದ ವಾತಾವರಣ ಉಂಟಾಗಿದೆ. ಅಲ್ಲದೇ ಅಧಿಕಾರಿಗಳು ಹಾಗೂ ಪೊಲೀಸರು ಮುಂಬೈನಿಂದ ಬಂದ ವ್ಯಕ್ತಿಯ ಟ್ರ್ಯಾವೆಲ್ ಹಿಸ್ಟರಿ ಕಲೆ ಹಾಕುತಿದ್ದಾರೆ.

ಶಿವಮೊಗ್ಗ ದಲ್ಲಿ 9 ಕ್ಕೇರಿದ ಕೊರೋನಾ ಪಾಸಿಟಿವ್ – ಜಿಲ್ಲಾಧಿಕಾರಿ ಸ್ಪಷ್ಟನೆ

ಇತ್ತ ಹಸಿರು ಜ್ಹೋನ್ ನಲ್ಲಿದ್ದ ಮಲೆನಾಡಿನ ಜಿಲ್ಲೆ ಶಿವಮೊಗ್ಗದಲ್ಲಿ ಇಂದು ಮತ್ತೊದು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.‌ ಹೀಗಾಗಿ ಜಿಲ್ಲೆಯಲ್ಲಿ‌ ಕೊರೋನಾ ಪಾಸಿಟಿವ್ ಪ್ರಕರಣ 9 ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾಹಿತಿ ನೀಡಿದರು.

ಶಿವಮೊಗ್ಗ ಜಿಲ್ಲೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡ ಆರಂಭದ ದಿನದಿಂದಲೂ ಒಂದೇ ಒಂದು ಪಾಸಿಟಿವ್ ಪತ್ತೆಯಾಗಿರಲಿಲ್ಲ ಈಗಾಗಿ ಜಿಲ್ಲೆ ಗ್ರೀನ್ ಜ್ಹೋನ್ ನಲ್ಲಿತ್ತು. ಆದರೆ ಜಿಲ್ಲೆಗೆ ಹೊರಗಿನಿಂದ ಬಂದವರಿಗೆ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಇದೀಗ ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲೆಯ ಜನರಿಗೆ ತಲೆ ನೋವಾಗಿ ಪರಿಣಮಿಸಿದೆ.

ಕಳೆದ ಐದು ದಿ‌ನದ ಹಿಂದೆ ಗುಜರಾತ್ ನ ಅಹಮದಾಬಾದ್ ನಿಂದ ಜಿಲ್ಲೆಗೆ ಆಗಮಿಸಿದ್ದ 8 ಮಂದಿ ತಬ್ಲಿಘಿಗಳಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿತ್ತು.

ಆದರೆ ಇಂದು ಮುಂಬೈನಿಂದ ತೀರ್ಥಹಳ್ಳಿ ತಾಲೂಕಿನ ಗ್ರಾಮಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಮುಂಬೈನಿಂದ ಬಂದಿದ್ದ ವ್ಯಕ್ತಿಗೆ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಗೆ ಇಡಲಾಗಿತ್ತು. ಆದರೆ ನಿನ್ನೆ ರಾತ್ರಿ ವ್ಯಕ್ತಿಗೆ ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಪರಿಣಾಮ ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಕಳುಹಿಸಿ, ಕೊರೋನಾ ತಪಾಸಣೆ ನಡೆಸಲಾಯಿತು. ನಂತರ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ.

ಇನ್ನು ಪಾಸಿಟಿವ್ ಪತ್ತೆಯಾಗಿರುವ ವ್ಯಕ್ತಿ ಅವರ ಕುಟುಂಬಸ್ಥರ ಜೊತೆ ಹಲವು ಮಂದಿ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಅಲ್ಲದೇ ಮುಂಬೈನಿಂದ ಬಂದ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಲು ಪೊಲೀಸರು ಹಾಗೂ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಒಟ್ಟಾರೆ ಒಂದೇ ಒಂದು ಪಾಸಿಟಿವ್ ಇರದಿದ್ದ ಮಲೆನಾಡಿನ‌ ಜಿಲ್ಲೆಗೆ ಹೊರಗಿನಿಂದ ಬಂದವರಿಗೆ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿರುವುದು ತಲೆ ನೋವಾಗಿ ಪರಿಣಮಿಸಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ