ಶಿವಮೊಗ್ಗ ಜಿಲ್ಲೆಯಲ್ಲಿ 143 ಕರೋನಾ ಪಾಸಿಟಿವ್! ಯಾವ ತಾಲೂಕಿನಲ್ಲಿ ಎಷ್ಟು ವಿವರ ಇಲ್ಲಿದೆ.

625

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನ ಸೋಂಕಿನ ಸಂಖ್ಯೆ 100 ಗಡಿ ದಾಟಿದ್ದು ಇಂದು 124 ಕೊರೋನ ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ ಎಂದು ಜಿಲ್ಲಾ ಹೆಲ್ತ್ ಬುಲಿಟಿನ್ ಪ್ರಕಟಿಸಿದ್ದು ರಾಜ್ಯ ಬುಲಟಿನ್ ನಲ್ಲಿ 143 ಸೊಂಕಿತರ ಸಂಖ್ಯೆ ಪ್ರಕಟವಾಗಿದೆ.

ರಾಜ್ಯದ ಹೆಲ್ತ ್ ಬುಲಟಿನ್ :-

ಜಿಲ್ಲೆಯ ಬುಲಟಿನ್ ಪ್ರಕಾರ ಇಂದು ಕಾಣಿಸಿಕೊಂಡ 124 ಕೊರೋನ ಸೋಂಕಿತರ ಸಂಖ್ಯೆಯಿಂದಾಗಿ ಸೋಂಕಿತರ ಒಟ್ಟು ಸಂಖ್ಯೆ 1727 ಕ್ಕೇರಿದೆ. ಆದರೆ ಇಂದು ಕೊರೋನ ಸೋಂಕಿನಿಂದ 91 ಜನರು ಇಂದು ಗುಣಮುಖರಾಗಿ ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಒಟ್ಟು 925 ಎಂದು ಜಿಲ್ಲಾ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.

ಶಿವಮೊಗ್ಗ ಜಿಲ್ಲೆಯ ಹೆಲ್ತ್ ಬುಲಟಿನ್ :-

ಸೋಂಕಿನಿಂದ ಜಿಲ್ಲೆಯಲ್ಲಿ 3 ಜನರು ಬಲಿಯಾಗಿದ್ದಾರೆ. ಇದರಿಂದಾಗಿ ಸೋಂಕಿಗೆ ಬಲಿಯಾದವರ ಸಂಖ್ಯೆ 31 ಕ್ಕೇರಿದೆ. 27029 ಜನರಿಗೆ ಸೋಂಕಿನ ಪರೀಕ್ಷೆಗೆ ಒಳಪಡಿಸಿದ್ದು, 24899 ಜನರಿಗೆ ಕೊರೋನ ನೆಗೆಟಿವ್ ಎಂದು ವರದಿ ಬಂದಿದೆ. 1727 ಜನರಿಗೆ ಕೊರೋನ ಪಾಸಿಟಿವ್ ಎಂದು ವರದಿ ಬಂದಿದೆ. 403 ಜನರ ವರದಿ ಇನ್ನೂ ಕೈ ಸೇರಬೇಕಿದೆ.

ಸೋಂಕಿನಿಂದಾಗಿ ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 233 ಆಗಿದ್ದು, ಕೋವಿಡ್ ಕೇರ್ ಸೆಂಟರ್ ನಲ್ಲಿ 436 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 37 ಜನರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 65 ಜನರಿಗೆ ಅವರ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇವೆಲ್ಲದರ ಒಟ್ಟು ಸೋಂಕಿತರ ಸಂಖ್ಯೆ 771 ಎಂದು ಜಿಲ್ಲಾ ಹೆಲ್ತ್ ಬುಲಿಟಿನ್ ತಿಳಿಸಿದೆ.

ಚಿಕಿತ್ಸೆ ಪಡೆಯುತ್ತಿರುವವರ 771 ಸೋಂಕಿತರು ಮತ್ತು ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 925 ಹಾಗೂ 31 ಜನರು ಸೋಂಕಿನಿಂದ ಸಾವನ್ನಪ್ಪಿರುವ ಸಂಖ್ಯೆ ಸೇರಿಸಿಕೊಂಡರೆ ಜಿಲ್ಲೆಯಲ್ಲಿ ಈ ಮೊದಲೇ ಹೇಳಿದ ಹಾಗೆ 1727 ಜನರಿಗೆ ಪಾಸಿಟಿವ್ ಸಂಖ್ಯೆ ಬಂದಿದೆ ಎಂದು ಬುಲಿಟಿನ್ ತಿಳಿಸಿದೆ.

ತಾಲೂಕ ವಾರು ಹೀಗಿದೆ.:-

ಶಿವಮೊಗ್ಗ ದಲ್ಲಿ 71 ಜನರಿಗೆ ಸೋಂಕು ಈ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಭದ್ರಾವತಿ-14, ಸೊರಬ-01, ಶಿಕಾರಿಪುರ-20, ತೀರ್ಥಹಳ್ಳಿ-08, ಸಾಗರ-05, ಹೊಸನಗರ-03, ಬೇರೆ ಜಿಲ್ಲೆಯ 02 ರಲ್ಲಿ ಸೋಂಕು ಪತ್ತೆಯಾಗಿದ್ದು ಇದರಿಂದ 124 ಪಾಸಿಟಿವ್ ಕೇಸ್ ಗಳು ಜಿಲ್ಲೆಯಲ್ಲಿ ಪತ್ತೆಯಾಗಿವೆ.

ಸಾಗರ ನಗರದಲ್ಲಿ ಭಾಗವತ್ ನರ್ಸಿಂಗ್ ಹೋಮ್ ನ ಸಿಬ್ಬಂದಿಗೆ ಕರೋನಾ ಕಾಣಿಸಿಕೊಂಡಿದ್ದರಿಂದ ಈ ಭಾಗದ ರಸ್ತೆ ಹಾಗೂ ಆಸ್ಪತ್ರೆ ಸೀಲ್ ಡೌನ್ ಮಾಡಲಾಗಿದೆ.

ಅಕ್ರಮವಾಗಿ ಹಣ ಸಂಪಾದಿಸುವ ಉದ್ದೇಶದಿಂದ, 15 ದಿನಗಳ ಒಂದು ಗಂಡು ಮಗುವನ್ನು ಮಾರಾಟ ಮಾಡಲು ಯತ್ನಿಸಿದ ನಾಲ್ಕು ಜನ ಆರೋಪಿತರ ಬಂಧನ!

ಇಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಪ್ಪುನಗರದ ಗಣಪತಿ ದೇವಸ್ಥಾನದ ಹತ್ತಿರ ಮನೆಯೊಂದರಲ್ಲಿ ಒಂದು ಗಂಡುಮಗುವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಖಚಿತ ಮಾಹಿತಿ ಬಂದ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿವಮೊಗ್ಗ ಹಾಗೂ ತುಂಗಾನಗರ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಕಾನೂನು ಬಾಹಿರವಾಗಿ ಹಣವನ್ನು ಸಂಪಾದನೆ ಮಾಡುವ ಉದ್ದೇಶದಿಂದ, 15 ದಿನಗಳ ಗಂಡು ಮಗುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿತರಾಧ ಶಿವಮೊಗ್ಗ ಟಿಪ್ಪುನಗರ ವಾಸಿಗಳಾದ
1) ಷಣ್ಮುಖ 34 ವರ್ಷ,
2) ಸುಮಾ 29 ವರ್ಷ,
3) ತುಳಸಿ 25 ವರ್ಷ ಮತ್ತು
4) ಶೈಲ 32 ವರ್ಷ
ಒಟ್ಟು 04 ಜನ ಆರೋಪಿತರನ್ನು ದಸ್ತಗಿರಿ ಮಾಡಿದ್ದು, 15 ದಿನಗಳ ಒಂದು ಗಂಡು ಮಗುವನ್ನು ಇವರಿಂದ ರಕ್ಷಿಸಲಾಗಿದೆ.

ಮಟ್ಕಾ ಜೂಜಾಟ ಆರೋಪಿತರ ಬಂಧನ!

ದಿನಾಂಕ 28-07-2020 ರಂದು ಶಿವಮೊಗ್ಗ, ಶಿಕಾರಿಪುರ ಹಾಗೂ ಸಾಗರ ಉಪ ವಿಭಾಗ ವ್ಯಾಪ್ತಿಗಳಲ್ಲಿ ಆರೋಪಿತರು ಕಾನೂನು ಬಾಹಿರವಾಗಿ ಮಟ್ಕಾ ಜೂಜಾಟ ಬರೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಂಬಂಧಪಟ್ಟ ಪೊಲೀಸ್ ಠಾಣೆಗಳ ಪಿಎಸ್ಐಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿ ಒಟ್ಟು 04 ಜನ ಆರೋಪಿತರನ್ನು ವಶಕ್ಕೆ ಪಡೆದು ಒಟ್ಟು
ರೂ 3,830/- (ರೂಪಾಯಿ ಮೂರು ಸಾವಿರದ ಎಂಟು ನೂರ ಮುವತ್ತು) ನಗದು ಅಮಾನತ್ತು ಪಡಿಸಿಕೊಂಡು ಪ್ರತ್ಯೇಕ 04 ಪ್ರಕರಣಗಳನ್ನು ದಾಖಲಿಸಿ ಆರೋಪಿತರನ್ನು ದಸ್ತಗಿರಿ ಮಾಡಿ ಕ್ರಮ ಕೈಗೊಂಡಿದೆ.

ಕುಂಸಿ ಪೊಲೀಸ್ ಠಾಣೆ:-

ಕಲ್ ಕೊಪ್ಪ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಆರೋಪಿ- ಮುರುಳಿಧರ್ 39 ವರ್ಷ ವಾಸ ಕಲ್ ಕೊಪ್ಪ ಗ್ರಾಮ ಕುಂಸಿ
ವಶಪಡಿಸಿಕೊಂಡ ಮಾಲು- ರೂ 1,200/- (ರೂಪಾಯಿ ಒಂದು ಸಾವಿರದ ಎರಡು ನೂರು) ನಗದು ಹಾಗೂ ಓ.ಸಿ ಗೆ ಸಂಬಂಧಿಸಿದ ದಾಖಲೆಗಳು

ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ :-

ಪುಣೇದಹಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಆರೋಪಿ- ಜಬೀವುಲ್ಲಾ 38 ವರ್ಷ ವಾಸ ಶಿಕಾರಿಪುರ ಟೌನ್.
ವಶಪಡಿಸಿಕೊಂಡ ಮಾಲು- ರೂ 520/- (ರೂಪಾಯಿ ಐದು ನೂರ ಇಪ್ಪತ್ತು) ನಗದು ಹಾಗೂ ಓ.ಸಿ ಗೆ ಸಂಬಂಧಿಸಿದ ದಾಖಲೆಗಳು

ಸಾಗರ ಗ್ರಾಮಾಂತರ ಪೊಲೀಸ್ ಠಾಣೆ:-

ತ್ಯಾಗರ್ತಿ ಗ್ರಾಮದ ಮಾರಿಕಾಂಬ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ- ದಿನೇಶ 39 ವರ್ಷ ವಾಸ ತ್ಯಾಗರ್ತಿ ಗ್ರಾಮ ಸಾಗರ .
ವಶಪಡಿಸಿಕೊಂಡ ಮಾಲು- ರೂ 1,130/- (ರೂಪಾಯಿ ಒಂದು ಸಾವಿರದ ಒಂದು ನೂರ ಮೂವತ್ತು) ನಗದು ಹಾಗೂ ಓ.ಸಿ ಗೆ ಸಂಬಂಧಿಸಿದ ದಾಖಲೆಗಳು

ಸಾಗರ ಗ್ರಾಮಾಂತರ ಪೊಲೀಸ್ ಠಾಣೆ :-

ಗಡಿಕಟ್ಟೆ ಗ್ರಾಮದ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ- ಶ್ರೀಧರ 36 ವರ್ಷ ವಾಸ ಗಡಿಕಟ್ಟೆ ಗ್ರಾಮ ಸಾಗರ.
ವಶಪಡಿಸಿಕೊಂಡ ಮಾಲು- ರೂ 980/- (ರೂಪಾಯಿ ಒಂಬತ್ತು ನೂರ ಎಂಬತ್ತು) ನಗದು ಹಾಗೂ ಓ.ಸಿ ಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ