BREAKING NEWS
Search

ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಎಲ್ ಬಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಪ್ರೊಫೆಸರ್ ಬಿ.ಪಿ. ವೀರಭದ್ರಪ್ಪನವರು ಕುಲಪತಿಯಾಗಿ ನೇಮಕ

610

ಶಿವಮೊಗ್ಗ :- ಪ್ರೂ. ಬಿ.ಪಿ. ವೀರಭದ್ರಪ್ಪನವರು ಸಾಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ಲಾಲ್ ಬಹದ್ದೂರ್ ಕಲಾ, ವಿಜ್ಞಾನ ಮತ್ತು ಎಸ್ ಬಿ ಸೊಲಬಣ್ಣ ಶೆಟ್ಟಿ ಮಹಾವಿದ್ಯಾಲಯದ 1977-78ಸಾಲಿನ ಕಲಾ ನಿಕಾಯದಲ್ಲಿ ವಿಶ್ವವಿದ್ಯಾನಿಲಯಕ್ಕೆ 3ನೇ ರ‍್ಯಾಂಕ್‌ ಗಳಿಸುವುದರ ಮೂಲಕ ಕಾಲೇಜಿನ ರ‍್ಯಾಂಕ್‌ ಪಟ್ಟಿಯನ್ನು ಪ್ರಥಮವಾಗಿ ಆರಂಭಿಸಿದ ಕೀರ್ತಿ ಇವರದ್ದು.

ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಎಲ್ ಬಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಪ್ರೊಫೆಸರ್ ಬಿ.ಪಿ. ವೀರಭದ್ರಪ್ಪನವರು ಕುಲಪತಿಯಾಗಿ ನೇಮಕ

ನಂತರ ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಡೆದರು. ಕುಲಪತಿಯಾಗಿ ನೇಮಕವಾಗುವ ಮುನ್ನ ದಾವಣಗೆರೆ ವಿವಿಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಪ್ರೊ. ವೀರಭದ್ರಪ್ಪನವರ ಈ ಸಾಧನೆಯು ಸಾಗರಕ್ಕೆ ಮತ್ತು ಎಲ್ ಬಿ ಕಾಲೇಜಿನ ಹಿರಿಮೆಗೆ ಮತ್ತೊಂದು ಗರಿಯಾಗಿದೆ.
Leave a Reply

Your email address will not be published. Required fields are marked *