BREAKING NEWS
Search

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳು

100

ಶಿವಮೊಗ್ಗ ರೈಲಿಗಾಗಿ ಯಡಿಯೂರಪ್ಪ ಚರ್ಚೆ

ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗ‌ ಜಿಲ್ಲೆಯ. ವಿವಿಧ ರೈಲ್ವೇ ಯೋಜನಗೆಳು ಮತ್ತು ಬೆಂಗಳೂರು ಸಬರ್ಬನ್ ರೈಲು ಹಾಗು ಮೆಟ್ರೋ ರೈಲುಗಳ ಕಾಮಗಾರಿ ಮತ್ತು ಯೋಜನೆಗಳ ಬಗ್ಗೆ ಕೇಂದ್ರ ಮಂತ್ರಿ ಸುರೇಶ್ ಅಂಗಡಿ ಹಾಗು ಇತರೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಸಭೆಯ ಮುಖ್ಯಾಂಶಗಳು:

ಶಿವಮೊಗ್ಗ ಔಟರ್ ರಿಂಗ್ ರಸ್ತೆ ಸಮೀಪ ರಸ್ತೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಜಾಗ ನೀಡಲು ಒಪ್ಪಿಗೆ

ಶಿವಮೊಗ್ಗ – ಶಿಕಾರಿಪುರ – ರಾಣೆ ಬೆನ್ನೂರು ಹೊಸ ರೈಲ್ವೆ ಮಾರ್ಗದ ಆರಂಭಿಕ ಕೆಲಸಕ್ಕೆ ಒಪ್ಪಿಗೆ

ಶಿವಮೊಗ್ಗ – ಯಶವಂತಪುರ ಇಂಟರ್ ಸಿಟಿ ರೈಲು ಸಂಚಾರ ಚೆನ್ನೈವರೆಗೆ ವಿಸ್ತರಣೆಗೆ ತಾತ್ವಿಕ ಒಪ್ಪಿಗೆ

ಶಿವಮೊಗ್ಗ – ತಿರುಪತಿ ರೈಲು ಬೀರೂರು, ಚಿತ್ರದುರ್ಗ, ಬಳ್ಳಾರಿ ಮಾರ್ಗದಲ್ಲಿ ಸಂಚರಿಸಲು ತಾತ್ವಿಕ ಒಪ್ಪಿಗೆ

ಶಿವಮೊಗ್ಗ ಮತ್ರು ಯಶವಂತಪುರ ನಡುವೆ ಸಂಚಾರ ಮಾಡುವ ಶತಾಬ್ದಿ ರೈಲಿನ ಸಮಯ ಬದಲಾವಣೆ ಕುರಿತು ಚರ್ಚಿಸಲಾಯಿತು.

ಬೀರೂರು – ಶಿವಮೊಗ್ಗ ರೈಲು ಮಾರ್ಗದ ಡಬ್ಲಿಂಗ್ ಕಾಮಗಾರಿ ಸಧ್ಯದಲ್ಲೇ ಆರಂಭಿಸಲು ಸೂಚನೆ

ಬೆಂಗಳೂರು ಸಬರ್ಬನ್ ರೈಲು ಯೋಜನೆ ಬಗ್ಗೆ ಚರ್ಚೆ ನಡೆಸಲಾಯಿತು

ಮೆಟ್ರೋ ಕಾಮಗಾರಿಗಳಿಗೆ ರೈಲ್ವೆ ಇಲಾಖೆಯು ಸಹಕರಿಸುವಂತೆ ಮನವಿ ಮಾಡಲಾಯಿತು.

ಹುಡುಗಿ ಚುಡಾಯಿಸಿದವನಿಗೆ ಹಲ್ಲೆ:ಭದ್ರಾವತಿ ಯಲ್ಲಿ ಘಟನೆ!

ಹುಡಗಿಯನ್ನ ಚುಡಾಯಿಸಿದಕ್ಕೆ ಯುವಕರ ದಾರಿಯನ್ನ ಅಡ್ಡಕಟ್ಟಿ ಮಾರಣಾಂತಿಕ ಹಲ್ಲೆ ನಡೆದ ಘಟನೆ ಭದ್ರಾವತಿಯ ಭದ್ರಾಕಾಲೋನಿಯಲ್ಲಿ ನಡೆದಿದೆ.
ಯುವತಿಯೋರ್ವಳನ್ನ ಚುಡಾಯಿಸಿದ ಕಾರಣಕ್ಕೆ ವಿದ್ಯಾರಾಜ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಲಾಗಿದೆ. ಜಗಳ ಬಿಡಿಸಲು ಹೋದ ಮಣಿ ಮೇಲೂ ಹಲ್ಲೆ ನಡೆದಿದೆ. ವಿದ್ಯಾರಾಜ್ ಸ್ಥಿತಿ ಗಂಭೀರವಾಗಿದ್ದು ಆತನನ್ನ ಮಣಿಪಾಲ್ ಗೆ ಕಳುಹಿಸಲಾಗಿದೆ.
ಚಂದ್ರಶೇಖರ್ ಹಲ್ಲೆ ನಡೆಸಿರುವ ಆರೋಪಿ ಎಂದು ತಿಳಿದುಬಂದಿದೆ. ಪ್ರಕರಣ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿ.ವೈ ರಾಘವೇಂದ್ರ ರಿಂದ ಭಾಗಿ‌ನ ಅರ್ಪಣೆ

ಲೋಕಸಭಾ ಸದಸ್ಯರಾದ ಶ್ರೀ .ಬಿ.ವೈ.ರಾಘವೇಂದ್ರ ಅವರು ಮತ್ತು ವಿಧಾನ ಪರಿಷತ್ ಶಾಸಕರು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಎಸ್ ರುದ್ರೇಗೌಡ್ರು,ಶಾಸಕರಾದ ಶ್ರೀ ಅಶೋಕ್ ನಾಯ್ಕ ಅವರೊ.ದಿಗೆ ಇಂದು ಬೆಳಿಗ್ಗೆ ಭದ್ರಾ ನದಿಗೆ ಬಾಗಿನ ಅರ್ಪಿಸಿದರು.
Leave a Reply

Your email address will not be published. Required fields are marked *