BREAKING NEWS
Search

ಮುಖ್ಯಮಂತ್ರಿ ಮಗನ ಎದುರೇ ನಾನು ಮುಖ್ಯಮಂತ್ರಿ ಆಗಬೇಕು ಎಂದ್ರು ಆಯುನೂರು! ಮುಂದೆ ಆಗಿದ್ದೇನು?

346

ಶಿವಮೊಗ್ಗ:- ಬಿಎಸ್ ವೈ ಹೋರಿ, ರಾಘವೇಂದ್ರ ಕರು,
ಜಿಲ್ಲೆಯಲ್ಲಿ ಇಬ್ಬರು ಉತ್ತಮ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ,ಯಡಿಯೂರಪ್ಪ ಅವರನ್ನು‌ ನೆಮ್ಮದಿಯಾಗಿ ಆಡಳಿತ ಮಾಡಲು ಬಿಟ್ಟರೆ ಶಿವಮೊಗ್ಗ ಅಲ್ಲದೇ,ರಾಜ್ಯದ ಚಿತ್ರಣವನ್ನೆ ಬದಲಾವಣೆ ಮಾಡಲಿದ್ದಾರೆ.

ರಾಘವೇಂದ್ರ ಸಂಸದರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ,ರಾಘವೇಂದ್ರ ಶಾಶ್ವತ ಸಂಸದರಾಗಿ ಇರಬೇಕು,ಅವರು ಮತ್ತೆ ರಾಜ್ಯ ರಾಜಕಾರಣಕ್ಕೆ ವಾಪಸ್ ಬರಬಾರದು,ದೆಹಲಿಯಲ್ಲಿಯೇ ಶಾಶ್ವತವಾಗಿ ಇರಲಿ,ಯಾಕಂದ್ರೆ ಮುಂದಿನ ಸಿಎಂ ನಾನಾಗಬೇಕು ಅಂತ ಇದ್ದೇನೆ,ಇದರಿಂದ ರಾಘವೇಂದ್ರ ದೆಹಲಿಗೆ ಹೋಗಲಿ ಎಂದು ಆಯನೂರು ಮಂಜುನಾಥ್ ಸಂಸದ ರಾಘವೇಂದ್ರ ಎದುರೇ ಹಾಸ್ಯ ಭರಿತವಾಗಿ ಚಾಟಿ ಬೀಸಿದ್ರು.

#ಬಿಎಸ್ ವೈ ಹೋರಿ, ರಾಘವೇಂದ್ರ ಕರು,ಜಿಲ್ಲೆಯಲ್ಲಿ ಇಬ್ಬರು ಉತ್ತಮ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ.ಯಡಿಯೂರಪ್ಪ ಅವರನ್ನು‌ ನೆಮ್ಮದಿಯಾಗಿ ಆಡಳಿತ ಮಾಡಲು ಬಿಟ್ಟರೆ ಶಿವಮೊಗ್ಗ ಅಲ್ಲದೇ ರಾಜ್ಯದ ಚಿತ್ರಣವನ್ನೆ ಬದಲಾವಣೆ ಮಾಡಲಿದ್ದಾರೆ. ರಾಘವೇಂದ್ರ ಸಂಸದರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆರಾಘವೇಂದ್ರ ಶಾಶ್ವತ ಸಂಸದರಾಗಿ ಇರಬೇಕು.ಅವರು ಮತ್ತೆ ರಾಜ್ಯ ರಾಜಕಾರಣಕ್ಕೆ ವಾಪಸ್ ಬರಬಾರದುಯಾಕಂದ್ರೆ ಮುಂದಿನ ಸಿಎಂ ನಾನಾಗಬೇಕು ಅಂತ ಇದ್ದೇನೆ ಇದರಿಂದ ರಾಘವೇಂದ್ರ ದೆಹಲಿಗೆ ಹೋಗಲಿ ಎಂದು ನಗೆ ಚಾಟಕಿ ಹಾರಿಸಿ ಆಯನೂರು ವೀಡಿಯೋ ನೊಡಿ.#ayanur Manjunath #shivamogga #karnataka

Posted by Kannadavani on Sunday, November 10, 2019
ಆಯುನೂರು ಮಂಜುನಾಥ್ ಮಾತನಾಡಿದ ವೀಡಿಯೋ ನೋಡಲು ಮೇಲಿನ ಲಿಂಕ್ ಬಳಸಿ

ವೇದಿಕೆಯಲ್ಲೇ ಇದ್ದು ಈ ಮಾತನ್ನು ಕೇಳಿದ ಬಿ.ಎಸ್.ವೈ ಪುತ್ರ ರಾಘವೇಂದ್ರ ಮುಗುಳುನಕ್ಕರು. ಜೊತೆಗೆ ಯಾವಾಗಲೂ ಹಾಸ್ಯ ಬರಿತವಾಗಿಯೇ ಮಾತನಾಡುವ ಆಯನೂರು ಮಾತುಗಳನ್ನು ಕೇಳಿದ ನೆರೆದ ಜನ ಕೂಡ ಚಪ್ಪಾಳೆ ತಟ್ಟಿ ನಕ್ಕರು.

ಶಿವಮೊಗ್ಗದಲ್ಲಿ ಇಂದು ನೂತನ ಮೂರು ರೈಲುಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು,ಈ ಸಂದರ್ಭದಲ್ಲಿ ಮಾತನಾಡಿದ ಪರಿಷತ್ ಸದಸ್ಯ ಆಯುನೂರು ಯಡಿಯೂರಪ್ಪ ಹಾಗೂ ರಾಘವೇಂದ್ರ ರವರು ಮಾಡಿರುವ ಸಾಧನೆ ಕುರಿತು ಹೆಮ್ಮೆ ವ್ಯಕ್ತಪಡಿಸಿದರು.

ಸಂಸದ ರಾಘವೇಂದ್ರ ರವರಿಂದ ಚಾಲನೆಗೊಂಡ ಹೊಸ ರೈಲುಗಳು ಶಿವಮೊಗ್ಗದಿಂದ ಚೆನ್ನೈ, ಶಿವಮೊಗ್ಗದಿಂದ ತಿರುಪತಿ ಹಾಗು ಶಿವಮೊಗ್ಗದಿಂದ ಮೈಸೂರಿಗೆ ಹೊಸದಾಗಿ ಸಂಚರಿಸಲಿದೆ.

ಎಲ್ಲೆಲ್ಲಿಗೆ ಸಂಚರಿಸುವ ಸಮಯವೆಷ್ಟು?

ಈ ರೈಲುಗಳು ವಾರಕ್ಕೊಮ್ಮೆ ಸಂಚರಿಸಲಿದ್ದು, ಶಿವಮೊಗ್ಗ ಟೌನ್ – ತಿರುಪತಿ ವೀಕ್ಲಿ ಸ್ಪೆಷಲ್ ಎಕ್ಸ್ ಪ್ರೆಸ್ ರೈಲು ಪ್ರತಿ ಬುಧವಾರ ಬೆಳಗ್ಗೆ 6.15 ಕ್ಕೆ ಶಿವಮೊಗ್ಗ ಬಿಟ್ಟು ಅದೇ ದಿನ ರಾತ್ರಿ 8.05 ಕ್ಕೆ ತಿರುಪತಿ ತಲುಪಲಿದೆ.

ಶಿವಮೊಗ್ಗ ಟೌನ್ – ಚೆನ್ನೈ ವೀಕ್ಲಿ ಸ್ಪೆಷಲ್ ರೈಲು ಪ್ರತಿ ಸೋಮವಾರ ರಾತ್ರಿ 11.55 ಕ್ಕೆ ಶಿವಮೊಗ್ಗ ಬಿಟ್ಟು ಮಂಗಳವಾರ ಬೆಳಗ್ಗೆ 11.15 ಕ್ಕೆ ಚೆನ್ನೈ ತಲುಪಲಿದೆ.

ಮೈಸೂರು – ಶಿವಮೊಗ್ಗ ಜನಸಾಧಾರಣ್ ವೀಕ್ಲಿ ಎಕ್ಸ್‌ಪ್ರೆಸ್‌ ಟ್ರೈನ್ ಪ್ರತಿ ಸೋಮವಾರ ಸಂಜೆ 4.40 ಕ್ಕೆ ಮೈಸೂರಿನಿಂದ ಹೊರಟು ರಾತ್ರಿ 10.30 ಕ್ಕೆ ಶಿವಮೊಗ್ಗ ತಲುಪಲಿದೆ.

ಇದುವರೆಗೆ ಕೇವಲ ಶಿವಮೊಗ್ಗದಿಂದ ಬೆಂಗಳೂರುರಿಗೆ ಮಾತ್ರ ರೈಲು ಸೇವೆ ಇತ್ತು. ಆದರೆ ಇನ್ನು‌ ಮುಂದೆ ಶಿವಮೊಗ್ಗದಿಂದ ಹೊರ ರಾಜ್ಯಗಳಿಗು ರೈಲು ಸೇವೆ ವಿಸ್ತರಣೆ ಆಗಿರುವುದು ಪ್ರಯಾಣಿಕರಿಗೆ ಸಂತಸ ಮೂಡಿಸಿದೆ.




Leave a Reply

Your email address will not be published. Required fields are marked *