ಯಾವಾಗ ಕೇಂದ್ರ ದಿಂದ ಪರಿಹಾರ ಬರುತ್ತೆ ಅಂತ ಹೇಳಿದ್ರು ಬಿ.ವೈ ರಾಘವೇಂದ್ರ!

214

ಶಿವಮೊಗ್ಗ: ನೆರೆ ಸಂತ್ರಸ್ಥರ ಪರಿಹಾರದ ನೆರವಿಗೆ ನಮ್ಮ ಕರ್ತವ್ಯ ಯಾವ ರೀತಿ ಮಾಡಬೇಕು, ಎಲ್ಲಿ ಮಾಡಬೇಕು ಆ ರೀತಿ ರಾಜ್ಯದ ಎಲ್ಲಾ ಸಂಸದರು ಮಾಡಿದ್ದಾರೆ. ಆದರೆ ಸಂಸದರು ಯಾರು ಮಾಧ್ಯಮದ ಮುಂದೆ ಹೋಗಿಲ್ಲ ಅಷ್ಟೇ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ರಾಜ್ಯ ಸಂಸದರ ಮೇಲೆ ಮಾಧ್ಯಮ ದಲ್ಲಿ ಬರುತ್ತಿರುವ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೊಕಿನ ಈಸೂರಿನಲ್ಲಿ ಇಂದು 150 ನೇ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಗಾಂಧಿ ಸಂಕಲ್ಪ ಯಾತ್ರೆ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸಂಸದರು ನೆರೆ ಸಂತ್ರಸ್ತರಿಗೆ ಈಗಾಗಲೇ ತಾತ್ಕಾಲಿಕ ಪರಿಹಾರ ನೀಡಲಾಗಿದೆ.

ಇನ್ನೆರಡು ಮೂರು ದಿನದಲ್ಲಿ ಉಳಿದ ಪರಿಹಾರದ ಹಣ ಬಿಡುಗಡೆಯಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅದರಂತೆ ಪರಿಹಾರ ಬಿಡುಗಡೆಯಾಗಲಿದೆ ಎಂಬ ವಿಶ್ವಾಸ ಸಹ ಇದೆ. ಈಗಾಗಿ ರಾಜ್ಯದ ನೆರೆ ಸಂತ್ರಸ್ಥರು ಯಾವುದೇ ಅನಾಹುತ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ್ ಕೇಂದ್ರದ ಕ್ಯಾಬಿನೆಟ್ ಮೀಟಿಂಗ್ ಇಂದು ನಡೆಯುತ್ತಿದೆ
ರಾಜ್ಯದ ಅಧಿಕಾರಿಗಳನ್ನು ಅಂಕಿ ಅಂಶಗಳ ಸಹಿತ ದೆಹಲಿಗೆ ಬರಲು ಹೇಳಿದ್ದಾರೆ.

ಇಂದು ಅಥವಾ ನಾಳೆ ಪರಿಹಾರ ಬಿಡುಗಡೆಯಾಗಲಿದೆ,
ಕೇಂದ್ರ ಸರಕಾರವನ್ನಾಗಲಿ, ಬಿಜೆಪಿಯನ್ನಾಗಲಿ ಯಾರು ಸಂಶಯದಿಂದ ನೋಡುತ್ತಿಲ್ಲ,ಆದರೂ ರಾಜ್ಯದಲ್ಲಿ ನೆರೆ ಪರಿಹಾರದ ಬಗ್ಗೆ ಚರ್ಚೆ ನಡೆಯುತ್ತಿದೆ.

ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚರ್ಚೆ ಮಾಡಲು ಅವಕಾಶವಿದೆ.

ಪರಿಹಾರ ಬಿಡುಗಡೆ ನಂತರವೂ ಈ ಚರ್ಚೆ ಇರುತ್ತದೆ.
ಕಳೆದ ಐದಾರು ವರ್ಷದಲ್ಲಿ ನರೇಂದ್ರ ಮೋದಿ ಸರಕಾರ ಹಲವು ಅಭಿವೃದ್ಧಿ ಕೆಲಸ ಮಾಡಿದೆ,
ಚಕ್ರವರ್ತಿ ಸೂಲಿಬೆಲೆ ಯಾಕೆ ಹೇಳಿದರು, ಅವರ ಹೇಳಿಕೆ ನಂತರ ಆ್ಯಕ್ಷನ್ ರಿಯಾಕ್ಷನ್ ನಡೆದಿವೆ.

ಸಾಮಾಜಿಕ ಕಾರ್ಯಕರ್ತರ ಮಧ್ಯೆ ಈ ರೀತಿ ಆಗೋದು ಒಳ್ಳೆಯದಲ್ಲ,ಎಲ್ಲರೂ ಸಂಮಯದಿಂದ ವರ್ತಿಸಬೇಕು,ರಾಜ್ಯಕ್ಕೆ ಏನು ಅನುದಾನ ತರಬೇಕು ಅದರ ಬಗ್ಗೆ ಗಮನ ಹರಿಸಬೇಕು ವಾದ ವಿವಾದ ಮಾಡುವುದರಿಂದ ಏನು ಪ್ರಯೋಜನವಿಲ್ಲ ಎಂದರು.
Leave a Reply

Your email address will not be published. Required fields are marked *