BREAKING NEWS
Search

ಶಿವಮೊಗ್ಗ ಮಳೆ ಅಬ್ಬರ! ತುಂಬು ಹರಿದ ರಸ್ತೆಗಳಲ್ಲಿ ಜನ ಬಿದ್ದೆದ್ದರು!

235

ಶಿವಮೊಗ್ಗ ನಗರದಲ್ಲಿ‌ ಇಂದು ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಶಿವಮೊಗ್ಗ ನಗರದ ಹಲವು ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡಿವೆ.

ಶಿವಮೊಗ್ಗದ ಬಾಪೂಜಿ ನಗರದ ನೂರಕ್ಕೂ ಹೆಚ್ಚು ಮನೆಗಳಿಗೆ ನಿನ್ನೆ ರಾತ್ರಿಯೂ ನೀರು ನುಗ್ಗಿತ್ತು. ಮಧ್ಯಾಹ್ನದ ವೇಳೆಗೆ ಮನೆಯನ್ನು ಶುಚಿಯಾಗಿಸಿಕೊಳ್ಳಲಾಗಿತ್ತು. ಆದರೆ ಇಂದು ಸಂಜೆ ಮತ್ತೆ ಧಾರಾಕಾರ ಮಳೆಯಾಗಿರುವುದರಿಂದ ಬಾಪೂಜಿ ನಗರ ಮತ್ತೆ ಜಲಾವೃತವಾಗಿದೆ.

ಶಿವಮೊಗ್ಗದ ಪ್ರತಿಷ್ಠಿತ ಬಡಾವಣೆಯಾಗಿರುವ ಗೋಪಾಲಗೌಡ ಬಡಾವಣೆಯ ರಸ್ತೆಗಳ ಮೇಲೆ ಮೂರು ಅಡಿಗೂ ಹೆಚ್ಚು ನೀರು ತುಂಬಿಕೊಂಡಿತ್ತು.

ಇನ್ನು ಕಾಂಗ್ರೆಸ್ ಕಚೇರಿ ಎದುರಿನ ‌ರಸ್ತೆ ಮೇಲೆ ಮೂರು ಅಡಿಗೂ ಹೆಚ್ಚು ನೀರ ಹರಿಯುತ್ತಿದ್ದ ಪರಿಣಾಮ ದ್ವಿಚಕ್ರವಾಹನಗಳು ಕೊಚ್ಚಿಕೊಂಡು ಹೋಗಿವೆ.

ಶಿವಮೊಗ್ಗ ಬೈಪಾಸ್ ರಸ್ತೆಯ ಮೇಲೆಯೂ ಬರೋಬ್ಬರಿ ಎರಡು ಅಡಿ ನೀರು ಹರಿಯುತ್ತಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.

ಇನ್ನು ಸಾಗರ-ಶಿವಮೊಗ್ಗ ರಸ್ತೆಯಲ್ಲಿ ಸಹ ನೀರು ನಿಂತು ಜನರು ಪರದಾಡುವಂತಾಯ್ತು. ಆಲ್ಕೋಳ,ಗೋಪಾಲಗೌಡ ಬಡಾವಣೆ ಸೇರಿದಂತೆ ನಗರದ ಪ್ರಮುಖ ಬಡಾವಣೆಯಲ್ಲಿ ರಸ್ತೆಗಳಲ್ಲಿ ನೀರು ನಿಂತು ಪರದಾಡುವಂತಾಗಿದ್ದು ನಗರ ವಿವಿಧ ಭಾಗದಲ್ಲಿ ನಡೆಯುತ್ತಿರುವ ಸ್ಮಾರ್ಟ ಸಿಟಿ ಕಾಮಗಾರಿಗಳಿಂದಾಗಿ ಹಲವು ಭಾಗದಲ್ಲಿ ನೀರು ಹರಿಯದೇ ಜನ ಪರದಾಡುವಂತಾಗಿದ್ದು ವಾಹನ ಸವಾರರು ಬಿದ್ದೇಳುವಂತೆ ಮಾಡಿತು.

ಇನ್ನೂ ಎರಡು ದಿನ ಮಳೆಯಾದಲ್ಲಿ ಜನರು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.




Leave a Reply

Your email address will not be published. Required fields are marked *