BREAKING NEWS
Search

ಮಂಗಗಳ ಉಪಟಳ ತಡೆಯಲು ಮಂಕಿಪಾರ್ಕ ನಿರ್ಮಾಣ! ಹೊಸನಗರದಲ್ಲಿ ಸಿದ್ದವಾಗುತ್ತಿದೆ ಪಾರ್ಕ್! ಹೇಗಿರಲಿದೆ ಗೊತ್ತಾ?

567

ಶಿವಮೊಗ್ಗ:-ರಾಜ್ಯದ ರೈತರು ಒಂದಲ್ಲ ಒಂದು ಕಾರಣದಿಂದ ನಷ್ಟ ಅನುಭವಿಸುತ್ತಲೇ ಇರುತ್ತಾರೆ. ಅದರಂತೆ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಮಂಗಗಳ ಕಾಟಕ್ಕೆ ರೈತ ನಲುಗಿದ್ದಾನೆ. ಮಲೆನಾಡು ಭಾಗದಲ್ಲಿ ಮಂಗಗಳ ಕಾಟಕ್ಕೆ ಬ್ರೇಕ್ ಹಾಕಲು ಈಗಾಗಲೇ ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ಶಿವಮೊಗ್ಗದ ಹೊಸನಗರ ಭಾಗದಲ್ಲಿ ಮಂಕಿ ಪಾರ್ಕ್ ಸ್ಥಾಪನೆಗೆ ಮುಂದಾಗಿದೆ.

ಈಗಾಗಲೇ ಜಿಲ್ಲಾಡಳಿತ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗಿದೆ. ಇದಕ್ಕಾಗಿ 400 ಎಕರೆ ಜಾಗ ಕೂಡ ಗುರುತಿಸಲಾಗಿದೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಈ ಮಂಕಿ ಪಾರ್ಕ್ ನಿರ್ಮಾಣಕ್ಕೆ ಜಿಲ್ಲಾಡಳಿತ ಆಸಕ್ತಿ ತೋರಿದೆ.

ಮಲೆನಾಡು ಭಾಗದಲ್ಲಿ ಮಂಗಗಳ ಕಾಟ ವಿಪರೀತವಾಗಿದ್ದು, ರೈತರಿಗೆ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.

ಮಲೆನಾಡಿನ ತೀರ್ಥಹಳ್ಳಿ ಹಾಗೂ ಹೊಸನಗರ ಭಾಗದ ಅರಣ್ಯದಂಚಿನ ರೈತರಿಗೆ ದಶಕದಿಂದಲೂ ಕಂಡು ಬಂದಿರುವ ಮಂಗಗಳ ಕಾಟ ಕಳೆದೆರೆಡು ವರ್ಷಗಳಿಂದೀಚಿಗೆ ಮಿತಿ ಮೀರಿತ್ತು.

ಮಲೆನಾಡು ಭಾಗದಲ್ಲಿ ಬೆರಳೆಣಿಕೆಯಷ್ಟು ಇದ್ದ ಮಂಗಗಳ ಸಂಖ್ಯೆ ಇಂದು ಹತ್ತಾರು ಪಟ್ಟು ಹೆಚ್ಚಾಗಿದೆ.

ತಂಡೋಪತಂಡವಾಗಿ ಕೃಷಿ ಜಮೀನಿಗೆ ನುಗ್ಗಿ, ಫಸಲನ್ನು ಹಾಳು ಮಾಡುವ ಮಂಗಗಳು, ರೈತರಿಗೆ ದುಸ್ವಪ್ನವಾಗಿ ಕಾಡುತಿದ್ದವು ಇದು ಮಲೆನಾಡಿನ ರೈತರಿಗೆ ನುಂಗಲಾರದ ತುತ್ತಾಗಿತ್ತು.

ಮಂಗಗಳ ಕಾಟದಿಂದ ಲಕ್ಷಾಂತರ ರುಪಾಯಿ ರೈತರಿಗೆ ನಷ್ಟವಾಗುತಿತ್ತು.

ರಾಜ್ಯ ಸರ್ಕಾರ ಮಲೆನಾಡಿನ ರೈತರ ಸಮಸ್ಯೆ ಮನಗಂಡು ಪರಿಹಾರ ಕಂಡು ಕೊಂಡಿದೆ.

ಹಳ್ಳಿಗಳಿಂದ ಮಂಗನನ್ನು ಹಿಡಿದು ಬಿಡುತಿದ್ದವರಿಗೆ ಬಿಗ್ ರಿಲೀಫ್ !

ಸಾಗರ,ತೀರ್ಥಹಳ್ಳಿ, ಹೊಸನಗರ ಭಾಗದ ಅಡಕೆ ,ತೋಟಗಾರಿಕಾ ಬೆಳೆ ಬೆಳೆಯುತಿದ್ದ ರೈತರು ಮಂಗನ ಹಾವಳಿ ತಡೆಗಟ್ಟಲು ತಮ್ಮ ಸ್ವಂತ ಕರ್ಚಿನಿಂದ ಹಣ ವ್ಯಯಿಸಿ ಮಂಗಗಳನ್ನು ಹಿಡಿಸುತಿದ್ದರು.

ಹಿಡಿದ ಮಂಗಗಳನ್ನು ಕಾರ್ಗಲ್ ,ಆಗುಂಬೆ ತೀರ್ಥಹಳ್ಳಿ ಭಾಗದ ಕಾಡಿಗೆ ಬಿಡುತಿದ್ದರು.
ಆದರೇ ಅಲ್ಲೂ ಕೂಡ ಕೃಷಿಕರಿಗೆ ತೊಂದರೆ ಆಗುತಿದ್ದು ಅವರು ಕೂಡ ಮಂಗಗಳನ್ನು ಹಿಡಿಸಿ ಅಲ್ಲಿಯೇ ಸುತ್ತಮುತ್ತ ಬಿಡುತಿದ್ದರು.
ಇದರಿಂದಾಗಿ ಅಲ್ಲಿಂದ ಇಲ್ಲಿಗೆ ,ಇಲ್ಲಿಂದ ಅಲ್ಲಿಗೆ ಮಂಗಗಳು ಷಿಪ್ಟ್ ಆಗುತಿದ್ದವೇ ಹೊರತು ಉಪಟಳ ಕಮ್ಮಿಯಾಗುತ್ತಿರಲಿಲ್ಲ.

ಇನ್ನು ಕೆಲವು ಜನರು ಮಂಗನ ಕಾಟದಿಂದ ಬೇಸತ್ತು ವಿಷ ಹಾಕಿ ಸಾಯಿಸಿದ ಘಟನೆ ಸಹ ಆಗುಂಬೆ ,ತೀರ್ಥಹಳ್ಳಿ ಭಾಗದಲ್ಲಿ ಜರುಗಿದ್ದವು.

ಶಿವಮೊಗ್ಗದ ಹೊಸನಗರ ಬಳಿಯ ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ನಾಗೋಡಿ ಗ್ರಾಮದ ಬಳಿ ಮಂಕಿ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದೆ.

ರೈತರಿಂದ ಮಂಗಗಳನ್ನ ದೂರ ಮಾಡುವುದು ಮತ್ತು ಮಂಗಗಳನ್ನು ಸೇಫ್ ಆಗಿ ಇಡಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ಸುಮಾರು 440 ಎಕರೆ ಜಾಗ ಗುರುತಿಸಲಾಗಿದೆ.

ಪ್ರಾಯೋಗಿಕವಾಗಿ ಸುಮಾರು 150 ಎಕರೆ ಜಾಗದಲ್ಲಿ ಮಂಕಿ ಪಾರ್ಕ್ ಸ್ಥಾಪನೆಗೆ ಜಿಲ್ಲಾಡಳಿತ ಮುಂದಾಗಿದೆ.

ಅಲ್ಲದೇ, ಮಂಗಗಳು ಪಾರ್ಕ್ ನಿಂದ ಹೊರಗೆ ಬಾರದಂತೆ ತಡೆಯಲು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರಕ್ಷಿಸಲು ಕ್ರಮಕ್ಕು ಯೋಜನೆ ಸಿದ್ಧಪಡಿಸಲಾಗುತ್ತಿದೆ.

ಮರದಿಂದ ಮರಕ್ಕೆ ಹಾರುವ ಮೂಲಕ ಪಾರ್ಕ್ ಬಿಟ್ಟು ಹೊರಗೆ ಬಾರದಂತೆ ತಡೆಯಲು ಕೂಡ ಯೋಜನೆ ಸಿದ್ಧಪಡಿಸಲಾಗುತ್ತಿದೆ.

ಸುಮಾರು 5 ರಿಂದ 6 ಕೋಟಿ ರೂ. ವೆಚ್ಚದಲ್ಲಿ ಈ ಪಾರ್ಕ್ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಈಗಾಗಲೇ ಸರ್ವೆ ಕಾರ್ಯ ನಡೆಸಲಾಗುತ್ತಿದೆ.

ಜನವಸತಿ ಪ್ರದೇಶದಿಂದ ದೂರದ ಪ್ರದೇಶವಾಗಿರುವ ನಾಗೋಡಿ ಅರಣ್ಯದಲ್ಲಿ ಈ ಪಾರ್ಕ್ ನಿರ್ಮಾಣಕ್ಕೆ ಜಿಲ್ಲಾಡಳಿತ ಆಸಕ್ತಿ ತೋರಿದೆ.

ಸದ್ಯದರಲ್ಲೇ ಖಾಸಗಿ ಎನ್.ಜಿ.ಓ ಮೂಲಕ ಈ ಪಾರ್ಕ್ ನಿರ್ಮಾಣವಾಗುತಿದ್ದು ರೈತರಿಗೆ ಸಂತಸ ತರುವ ವಿಚಾರವಾಗಿದೆ.




Leave a Reply

Your email address will not be published. Required fields are marked *