BREAKING NEWS
Search

ಶಿವಮೊಗ್ಗ-ಈಶ್ವರಪ್ಪನವರಿಗೆ ತಟ್ಟಿದ ಕನ್ನಡ ಪರ ಹೋರಾಟಗಾರರ ಪ್ರತಿಭಟನೆ ಬಿಸಿ!

157

ಶಿವಮೊಗ್ಗ:- ಶಿವಮೊಗ್ಗದಲ್ಲಿ ಇಂದು 64 ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.

ಇದೇ ವೇಳೆ ವಿವಿಧ ಇಲಾಖೆಯ ಸ್ಥಬ್ದಚಿತ್ರ ಚಿತ್ರ ಮೆರವಣಿಗೆ ಹಾಗು ಜಾನಪದ ಕಲಾ ತಂಡಗಳ ಮೆರವಣಿಗೆ ಸಹ ನಡೆಯಿತು.

ಅಲ್ಲದೇ ರಾಜ್ಯೋತ್ಸವ ಸಂದರ್ಭದಲ್ಲಿ ನಾಡ ಧ್ವಜಾರೋಹಣ ನೆರವೇರಿಸದೇ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಕನ್ನಡ ಧ್ವಜದ ಬಗ್ಗೆ ಗೌರವವಿದೆ,ಈ ಹಿಂದಿನಿಂದಲೂ ರಾಷ್ಟ್ರ ಧ್ವಜ ಹಾರಿಸಬೇಕೆಂಬ ನಿಯಮವಿದೆ.

ಅದರಂತೆ ಈ ಬಾರಿಯೂ ರಾಷ್ಟ್ರ ಧ್ವಜ ಹಾರಿಸಲಾಗಿದೆ ಎಂದರು.

ಕರ್ನಾಟಕದ ಏಕೀಕರಣದ ಹೋರಾಟ ಆರಂಭದಿಂದಲೂ ಕನ್ನಡ ರಾಜ್ಯೋತ್ಸವದ ದಿನದಂದು ಕೇವಲ ರಾಷ್ಟ್ರ ಧ್ವಜ ಮಾತ್ರ ಹಾರಿಸಲಾಗುತ್ತಿದೆ.

ಈ ಬಗ್ಗೆ ಈಗ ಗೊಂದಲ ಆರಂಭವಾಗಿದೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದರು. ನಾಡ ಧ್ವಜಕ್ಕೆ ಅಪಮಾನ ಮಾಡಬೇಕು ಎಂಬ ಉದ್ದೇಶವು ಇಲ್ಲ, ಕನ್ನಡದ ಬಗ್ಗೆ ಕನ್ನಡ ಧ್ವಜದ ಬಗ್ಗೆ ಗೌರವ ಇದ್ದೆ ಇದೆ. ಕೆಲವರು ರಾಜ್ಯವನ್ನು ಒಡೆಯಬೇಕು ಎಂಬ ಅಪೇಕ್ಷೆ ಹೊಂದಿದ್ದಾರೆ. ನಾವು ರಾಜ್ಯವನ್ನು ಒಡೆಯಲು ಎಂದಿಗೂ ಬಿಡುವುದಿಲ್ಲ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

ಈಶ್ವರಪ್ಪನವರಿಗೆ ತಟ್ಟಿದ ಕನ್ನಡ ಪರ ಹೋರಾಟಗಾರರ ಪ್ರತಿಭಟನೆ!

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ನಾಡ ಧ್ವಜಾರೋಹಣ ಮಾಡಿಲ್ಲ ಎಂದು ಆಪಾದಿಸಿ ಇಂದು ಕರವೇ ಕಾರ್ಯಕರ್ತರು ಸಚಿವ ಈಶ್ವರಪ್ಪನವರ ಸಮ್ಮುಖದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಶಿವಮೊಗ್ಗದ ಡಿ.ಎ.ಆರ್. ಸಭಾಂಗಣದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಪತ್ರಿಕಾಗೋಷ್ಟಿ ಮುಗಿಸಿ ಉಪಹಾರ ಸೇವಿಸುತ್ತಾ ಕುಳಿತಿದ್ದ ಸಂದರ್ಭದಲ್ಲಿ ಏಕಾಏಕೀ ಸಭಾಂಗಣದೊಳಗೆ ನುಗ್ಗಿದ ಕರವೇ ಕಾರ್ಯಕರ್ತರು ಸಚಿವರ ವಿರುದ್ಧ ದಿಕ್ಕಾರ ಕೂಗಿ ಕನ್ನಡನಾಡ ಧ್ವಜ ಏಕೆ ಹಾರಿಸಿಲ್ಲ ಎಂದು ಪ್ರಶ್ನಿಸಿದರು. ಪ್ರಶ್ನಿಸಿದರು.

ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ತಡೆದರು. ಅಲ್ಲದೇ ಕನ್ನಡ ಧ್ವಜ ಹಾರಿಸದಿರುವುದಕ್ಕೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಶಿವಮೊಗ್ಗದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಂದಿನಂತೆ ಮೊದನಿಲಿಂದಲೂ ನಡೆದುಕೊಂಡ ಬರುತ್ತಿದ್ದ ರೀತಿ ರಾಷ್ಟ್ರಧ್ವಜ ಹಾರಿಸಲಾಗಿತ್ತು. ಕನ್ನಡ ಧ್ವಜಾರೋಹಣವನ್ನು ಸಚಿವರು ಹಾಗೂ ಅಧಿಕಾರಿಗಳು ಮಾಡಿಲ್ಲ ಎಂದು ಕನ್ನಡ ಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ರು.

ಕನ್ನಡ ಧ್ವಜ ಹಾರಿಸದಿದ್ದಕ್ಕೆ ಕರವೇ ಕಾರ್ಯಕರ್ತರು ಈಶ್ರರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಕರವೇ ಕಾರ್ಯಕರ್ತರನ್ನು ಸಭಾಂಗಣದಿಂದ ಪೊಲೀಸರು ಹೊರಗೆ ಕರೆದೊಯ್ದರು. ಸುಮಾರು 12 ಕ್ಕೂ ಹೆಚ್ಚು ಜನ ಇದ್ದ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ್ರು.




Leave a Reply

Your email address will not be published. Required fields are marked *