ಸಚಿವ ಈಶ್ವರಪ್ಪನವರು ಯಡಿಯೂರಪ್ಪ ನವರ ಎದರೇ ಹೇಳಿದ್ರು ಬಹುದಿನದ ವೈರತ್ವದ ಬಗ್ಗೆ! ಹೇಳಿದ್ದೇನು ಗೊತ್ತಾ!

214

ಶಿವಮೊಗ್ಗ : ನನ್ನ ಹಾಗು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡುವೆ ಯಾವುದೇ ವೈಮನಸ್ಸಿಲ್ಲ. ಆದರೆ ಕೆಲವರು ನಮ್ಮಿಬ್ಬರ ನಡುವೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸಿಎಂ ಬಿಎಸ್ ವೈ ಎದುರಿನಲ್ಲಿಯೇ ಸ್ಪಷ್ಟಪಡಿಸುವ ಮೂಲಕ ಹಳೆಯ ವೈಷ್ಯಮ್ಯಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಶಿವಮೊಗ್ಗದಲ್ಲಿ ಇಂದು ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನನ್ನ ಹಾಗು ಯಡಿಯೂರಪ್ಪ ಅವರನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ತಂತಿ ಮೇಲಿನ ನಡಿಗೆ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ನಿಮಗೆ ಆಗಲಿಲ್ಲ ಅಂದರೆ ರಾಜೀನಾಮೆ ನೀಡಿ ಹೋಗಿ ಎಂದಿದ್ದಾರೆ.

ರಾಜೀನಾಮೆ ಕೇಳಲು ನೀವು ಯಾರು…? ರಾಜೀನಾಮೆ ಕೊಡಿ ಅಂತೀರಲ್ಲಾ ನೀವು ಏನು ಕಡಿದು ಕಟ್ಟೆ ಹಾಕಿದ್ದೀರಾ?ಆಗಲೇ ನೀವು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದೀರಾ ಎಂದು ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ ಕಿಡಿ ಕಾರಿದರು.

ಸಿದ್ದರಾಮಯ್ಯನವರೇ ನೀವು ಮುಖ್ಯಮಂತ್ರಿ ಆಗಿದ್ದ ವೇಳೆ ಬರ ಪರಿಹಾರದ ಹೆಸರಿನಲ್ಲಿ ಎಷ್ಟು ಕೋಟಿ ಹಣ ಲೂಟಿ ಮಾಡಿದ್ದೀರಾ,ಇದನ್ನು ತನಿಖೆ ಮಾಡಿಸಬೇಕಾಗುತ್ತೆ ಎಂದು ಸಚಿವ ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗದ ಪ್ರಸಿದ್ದ ಮೀನಾಕ್ಷಿ‌ ಭವನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನವರು ಸಚಿವ ಈಶ್ವರಪ್ಪ ಹಾಗು ಸಂಸದ ಬಿ.ವೈ ರಾಘವೇಂದ್ರ ರವರೊಂದಿಗೆ ತಿಂಡಿ ಸವಿಯುವ ಮೂಲಕ ಹಳೆ ಗೆಳೆತನ ನೆನೆದರು.
Leave a Reply

Your email address will not be published. Required fields are marked *