BREAKING NEWS
Search

ಎಲ್.ಬಿ ಕಾಲೇಜಿಗೆ ನಾಲ್ಕು ರ್ಯಾಂಕ್

642

ಶಿವಮೊಗ್ಗ :-ಕೆ.ಎಚ್.ಶ್ರೀನಿವಾಸ ಸ್ನಾತಕೋತ್ತರ ಸಂಸ್ಥೆ, ಲಾಲ್ ಬಹದ್ದೂರ್ ಕಲಾ ವಿಜ್ಞಾನ ಮತ್ತು ಎಸ್.ಬಿ. ಸೊಲಬಣ್ಣ ಶೆಟ್ಟಿ ವಾಣಿಜ್ಯ ಕಾಲೇಜು ಇದರ ಅಡಿಯಲ್ಲಿ 2019ನೇ ಮೇ ನಲ್ಲಿ ನಡೆದ ಕುವೆಂಪು ವಿಶ್ವವಿದ್ಯಾನಿಲಯದ ಪರೀಕ್ಷೆಗಳಲ್ಲಿ ಸಂಸ್ಥೆಯ 4 ವಿದ್ಯಾರ್ಥಿಗಳು ರ್ಯಾಂಕ್ ಗಳಿಸಿರುತ್ತಾರೆ.

ಸ್ನಾತಕೋತ್ತರ ಅರ್ಥಶಾಸ್ತ್ರ(ಎಂ.ಎ) ವಿಭಾಗದಲ್ಲಿ ಕು. ಮಿಥಿಲಾ ಕೆ ಎಸ್. ದ್ವಿತೀಯ ರ್ಯಾಂಕ್ ಕು. ವಂದನಾ ಕೆ. ಐದನೇ ರ್ಯಾಂಕ್ ಮತ್ತು ಕು. ಮಂಜುಳಾ ಕೆ ಜೆ ಆರನೇ ರ್ಯಾಂಕ್ ಪಡೆದಿರುತ್ತಾರೆ.

ಸ್ನಾತಕೋತ್ತರ ವಾಣಿಜ್ಯಶಾಸ್ತ್ರ (ಎಂ.ಕಾಮ್) ವಿಭಾಗದ ವಿದ್ಯಾರ್ಥಿನಿ ಕು. ಮಂಜುಶ್ರೀ. ಒಂಭತ್ತನೆ ರ್ಯಾಂಕ್ ಪಡೆದಿರುತ್ತಾರೆ.

ಇವರಿಗೆ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಕೆ.ಎಚ್.ಶ್ರೀನಿವಾಸ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಕಾಲೇಜಿನ ಪ್ರಾಚಾರ್ಯರಾದ ಡಾ. ಲಕ್ಷ್ಮೀಶ್ ಎ. ಎಸ್ ರವರು ಅಭಿನಂದನೆ ಸಲ್ಲಿಸಿರುತ್ತಾರೆ.




Leave a Reply

Your email address will not be published. Required fields are marked *