BREAKING NEWS
Search

ಸೊರಬ ಮೂಗೂರು ಏತ ನೀರಾವರಿ ಯೋಜನೆಗೆ ಸಚಿವರಿಂದ ಸ್ಥಳ ಪರಿಶೀಲನೆ

112

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಬಹು ದಿನದ ಬೇಡಿಕೆಯಾದ ಮೂಗೂರು ಏತ ನೀರಾವರಿ ಯೋಜನಾ ಸ್ಥಳವನ್ನು ಇಂದು ಕಾನೂನು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಪರಿಶೀಲನೆ ನಡೆಸಿದರು.

ಸುಮಾರು 105 ಕೋಟಿ ರೂ ವೆಚ್ಚದ ಏತ ನೀರಾವರಿ ಯೋಜನೆ ಇದಾಗಿದ್ದು, ಈ ಯೋಜನೆಯಿಂದ ಸೊರಬದ ಮಳೆಯಾಶ್ರಿತ ಗ್ರಾಮಗಳಿಗೆ ನೀರಾವರಿ ಕಲ್ಪಿಸಿದಂತೆ ಆಗುತ್ತದೆ.

ತಾಲೂಕಿನ‌ 40 ಕ್ಕೂ ಹೆಚ್ಚು ಗ್ರಾಮಗಳ ಕೆರೆಗಳಿಗೆ ನೀರನ್ನು ತುಂಬಿಸಬಹುದಾಗಿದೆ. ಈ ಯೋಜನೆಗಾಗಿ ಸಾಕಷ್ಟು‌ ರಾಜಕೀಯ ಹೋರಾಟಗಳು ಸಹ ನಡೆದಿದ್ದವು. ಸಣ್ಣ ನೀರಾವರಿ ಸಚಿವರಿಗೆ ಶಾಸಕ ಕುಮಾರ್ ಬಂಗಾರಪ್ಪ ಯೋಜನೆಯ ಕುರಿತು ವಿವರ ನೀಡಿದರು.

ಬ್ಯಾರೇಜ್ ನಿರ್ಮಾಣ ಮಾಡಿದರೆ ಮಳೆಗಾಲದಲ್ಲಿ ನೀರು ಸಂಗ್ರಹವಾದಾಗ ಅದನ್ನು ಏತ ನೀರಾವರಿಯ ಮೂಲಕ ಕೆರೆಗಳಿಗೆ ಹಾಯಿಸುವ ಮೂಲಕ ಕೆರೆಗಳನ್ನು ತುಂಬಿಸಿ, ಈ ಭಾಗದ ರೈತರಿಗೆ ಸಹಾಯ ಮಾಡುವ ಯೋಜನೆ ಇದಾಗಿದೆ ಎಂದು ವಿವರಿಸಿದರು. ಈ ವೇಳೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.
Leave a Reply

Your email address will not be published. Required fields are marked *