BREAKING NEWS
Search

ಟಿಪ್ಪು ಹೆಸರು ಕೇಳಿದ್ರೆ ಬಿಜೆಪಿಗರ ಚಡ್ಡಿ ಒದ್ದೆಯಾಗುತ್ತೆ ಅಂದ್ರು ಪೊಲೀಸ್ ಅಧಿಕಾರಿ!

1137

ಶಿವಮೊಗ್ಗ: ಟಿಪ್ಪು ಜಯಂತಿ ವಿವಾದದ ಬುಗಿಲೆದ್ದಿರುವ ಹಿಂದೆಯೇ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ಬಿಜೆಪಿಗರನ್ನು ಹೀಯಾಳಿಸಿ ಹಾಕಿಕೊಂಡ ಸ್ಟೇಟಸ್ ಭಾರೀ ಚರ್ಚೆಗೆ ಕಾರಣವಾಗಿದ್ದು ಭಾರಿ ವಿರೋಧ ವ್ಯಕ್ತವಾಗಿದೆ.

ಏನಾಯ್ತು ಘಟನೆ!?

ಸೊರಬ ಪಟ್ಟಣ ಪೊಲೀಸ್ ಠಾಣೆಯ ಎಎಸ್‌ಐ ಶಬ್ಬೀರ್ ಖಾನ್, ಟಿಪ್ಪು ಸುಲ್ತಾನ್ ಪರವಾಗಿ ವಾಟ್ಸಪ್ ಸ್ಟೇಟಸ್ ಹಾಕಿಕೊಂಡು ವಿರೋಧಕ್ಕೊಳಗಾದ ಅಧಿಕಾರಿ.

ವಿವಾದಕ್ಕೆ ಕಾರಣವಾದ ಎ.ಎಸ್.ಐ.

ಸದ್ಯ ರಾಜ್ಯದಲ್ಲಿ ಟಿಪ್ಪು ಜಯಂತಿ ವಿಚಾರ ಭಾರೀ ಚರ್ಚೆಯಾಗುತ್ತಿದೆ. ಒಂದೆಡೆ ಕಾಂಗ್ರೆಸ್ ಟಿಪ್ಪು ಜಯಂತಿ ಮಾಡಿ ಎನ್ನುತ್ತಿದ್ದರೆ, ಬಿಜೆಪಿ ನಾವು ಮಾತ್ರ ಟಿಪ್ಪು ಜಯಂತಿ ಮಾಡಲ್ಲ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದು ಪರ ವಿರೋಧದ ಘರ್ಷಣೆ ತಾರಕಕ್ಕೇರಿದೆ.

ಈ ನಡುವೆ ಎಎಸ್‌ಐ ಶಬ್ಬೀರ್ ಖಾನ್ ಅವರು ಟಿಪ್ಪು ಪರವಾಗಿ ಸ್ಟೇಟಸ್ ಹಾಕಿಕೊಂಡು ಬಿಜೆಪಿಗರನ್ನು ಹೀಗೆಳೆದಿದ್ದಾರೆ.

ಬ್ರಿಟಿಷರು ಮತ್ತು ಬಿಜೆಪಿಯವರು ಟಿಪ್ಪು ಹೆಸರು ಕೇಳಿದಾಕ್ಷಣ ಚಡ್ಡಿ ಒದ್ದೆ ಮಾಡಿಕೊಳ್ಳುತ್ತಾರೆ ಎಂದು ಸ್ಟೇಟಸ್‌ನಲ್ಲಿ ಬರೆದುಕೊಂಡು ಬಿಜೆಪಿಯನ್ನು ಟೀಕಿಸಿದ್ದಾರೆ.

ಈ ಹಿನ್ನೆಲೆ ಅಧಿಕಾರಿ ವಿರುದ್ಧ ಬಿಜೆಪಿ ವಲಯದಲ್ಲಿ ಆಕ್ರೋಶ ಭುಗಿಲೆದ್ದಿದ್ದು ಇವರ ವಿರುದ್ಧ ಕ್ರಮಕ್ಕೆ ಒತ್ತಾಯ ಪಡಿಸಿದ್ದಾರೆ.

ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿ ಒಂದು ವರ್ಗದ ಪರ ನಡವಳಿಕೆ ಮೆರೆದಿದ್ದಾರೆ. ಇದು ತಪ್ಪು ಯಾವುದೇ ಅಧಿಕಾರಿಯೂ ಒಂದು ಧರ್ಮದ ಪರ ವಿರಬಾರದು ಸಮಾಜಮುಖಿಯಾಗಿರಬೇಕು ಆದರೇ ಇವರು ಈ ರೀತಿಯ ವರ್ತನೆ ಖಂಡಿಸಬೇಕಿದ್ದು ಇಂತವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
Leave a Reply

Your email address will not be published. Required fields are marked *