ರಾಜ್ಯ ಸರ್ಕಾರವನ್ನು ಅಸ್ಥಿರ ಗೊಳಿಸಲು ಹೊರಟಿರುವ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳಲಿ:ಈಶ್ವರಪ್ಪ ಸವಾಲ್!

58

ಶಿವಮೊಗ್ಗ: ನಾನೇ ಮುಂದಿನ ಸಿಎಂ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಶಿಸ್ತುಕ್ರಮ ಜರುಗಿಸಲಿ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯ ಹಾಗೂ ಅವರ ಮೂರ್ನಾಲ್ಕು ಬೆಂಬಲಿಗರು ಸಿಎಂ ಬದಲಾವಣೆ ಮಾತನ್ನಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ತಾಕತ್ತಿದ್ದರೆ ಅವರೆಲ್ಲರನ್ನೂ ಪಕ್ಷದಿಂದ ಸಸ್ಪೆಂಡ್ ಮಾಡಲಿ ಎಂದು ಇಂದು ಶಿವಮೊಗ್ಗ ದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾಂಗ್ರೆಸ್ನಲ್ಲಿ ಎರಡು ಗುಂಪುಗಳಿವೆ. ಸಿದ್ದರಾಮಯ್ಯ ನಾನೇ ಮುಂದಿನ ಸಿಎಂ ಎಂದು ಟವೆಲ್ ಹಾಕಿದ್ದಾರೆ. ಅದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ತಾವೂ ಸಿಎಂ ಸ್ಥಾನದ ಆಕಾಂಕ್ಷಿಗಳು ಎಂದಿದ್ದಾರೆ. ಇವರೆಲ್ಲರಿಗೂ ನೋಟಿಸ್ ನೀಡುವ ಶಕ್ತಿ ಕೆಪಿಸಿಸಿ ಅಧ್ಯಕ್ಷರಿಗಿಲ್ಲ ಎಂದು ವ್ಯಂಗ್ಯವಾಡಿದರು.

ಬಟ್ಟೆ ಹಾವುಗಳು!
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಡಿಸಿಎಂ ಡಾ. ಜಿ.ಪರಮೇಶ್ವರ್ ಬಟ್ಟೆ ಹಾವುಗಳಿದ್ದಂತೆ. ಅವರ ಮಾತನ್ನು ಯಾರೂ ಕೇಳುತ್ತಿಲ್ಲ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗದವರು ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದೆಯೆಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲಿ ಎಂದು ಕಾಂಗ್ರೆಸ್ ನಾಯಕರು ತೀರ್ಮಾನ ಮಾಡಲಿ. ಅದನ್ನು ಬಿಟ್ಟು ಸರ್ಕಾರದಲ್ಲಿ ಗೊಂದಲ ಮೂಡಿಸುವ ಮೂಲಕ ರಾಜ್ಯ ರಾಜಕಾರಣಕ್ಕೆ ಅಪಮಾನ ಮಾಡುವುದು ಬೇಡ ,
104 ಸ್ಥಾನ ಪಡೆದ ಬಿಜೆಪಿ ಸರ್ಕಾರ ರಚನೆ ಮಾಡುವ ಅಥವಾ ಯಡಿಯೂರಪ್ಪ ಸಿಎಂ ಸ್ಥಾನದ ಕನಸು ಕಾಣುವುದರಲ್ಲಿ ಅರ್ಥವಿದೆ. ಆದರೆ ಸಿದ್ದರಾಮಯ್ಯ ಸಿಎಂ ಸ್ಥಾನದ ಹಗಲು ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಅರುಣ್, ಎಸ್.ಎನ್.ಚನ್ನಬಸಪ್ಪ, ಕಾರ್ಯದರ್ಶಿ ಮಧುಸೂದನ್, ಪ್ರಮುಖರಾದ ಹಿರಣ್ಣಯ್ಯ, ರತ್ನಾಕರ ಶೆಣೈ ಸುದ್ದಿಗೋಷ್ಠಿಯಲ್ಲಿದ್ದರು.

ಶಿವಮೊಗ್ಗ ದಲ್ಲಿ ಡಿಕೆಶಿಗೆ ಮುಖಭಂಗ!
ಮೇ.23ರವರೆಗೆ ಕಾದು ನೋಡಿ, ಬರೆದಿಟ್ಟುಕೊಳ್ಳಿ. ಡಿ.ಕೆ.ಶಿವಕುಮಾರ್ಗೆ ಶಿವಮೊಗ್ಗದಲ್ಲಿ ಮುಖಭಂಗವಾಗಲಿದೆ ಎಂದು ಹೇಳಿದ ಕೆ.ಎಸ್.ಈಶ್ವರಪ್ಪ, ಹಣದಿಂದ ಉಪಚುನಾವಣೆ ಮಾಡಲು ಶಿವಕುಮಾರ್ ಯತ್ನಿಸುತ್ತಿದ್ದಾರೆ. ಅವರ ಆಟ ನಡೆಯುವುದಿಲ್ಲ. ಕುಂದಗೋಳ ಹಾಗೂ ಚಿಂಚೋಳಿಯಲ್ಲಿ ಬಿಜೆಪಿ ಗೆಲ್ಲಲಿದೆ. ಜನ ಹಣ ಪಡೆಯುತ್ತಾರೆಯೇ ಹೊರತು ಕಾಂಗ್ರೆಸ್ಗೆ ಮತ ನೀಡುವುದಿಲ್ಲ ಎಂದರು.
Leave a Reply

Your email address will not be published. Required fields are marked *

error: Content is protected !!