BREAKING NEWS
Search

ಶಿವಮೊಗ್ಗದಲ್ಲಿ ಬಾಲಿವುಡ್ ನಟಿ‌ ಜಾಕ್ವೆಲಿನ್ ಫರ್ನಾಂಡೀಸ್.!

971

ಶಿವಮೊಗ್ಗ : ಬಾಲಿವುಡ್ ನ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಶಿವಮೊಗ್ಗದಲ್ಲಿ ಗಪ್ ಚುಪ್ ಆಗಿ ಬಂದು ಮಲೆನಾಡಿನ ಸಿನಿ ಪ್ರಿಯರನ್ನು ಅಚ್ಚರಿ ಮೂಡಿಸಿದ್ದಾರೆ.

ಮೂಲತಹಾ ಶ್ರೀಲಂಕಾ ಮೂಲದ ಈ ಸುಂದರಿ
ಎರಡು ದಿನಗಳ ಕಾಲ ಶಿವಮೊಗ್ಗದಲ್ಲಿ ವಾಸ್ಯವ್ಯ ಮಾಡಿದ್ದು ನಿನ್ನೆ ಮುಂಬೈ ಗೆ ಮರಳಿದ್ದಾರೆ.

ಸ್ನೇಹಿತರ ಜೊತೆ ವೀಕೆಂಡ್ ಎಂಜಾಯ್ ಮಾಡಲು ಜಾಕ್ವೆಲಿನ್ ಈ ಬಾರಿ ಮಲೆನಾಡಿನ ಶಿವಮೊಗ್ಗ ವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

https://www.instagram.com/p/CKLWpZtH9zg/?igshid=13prqywu6agdp

ಶಿವಮೊಗ್ಗದಲ್ಲಿ ನೂತನವಾಗಿ ಆರಂಭವಾಗಿರುವ ಕಿಮ್ಮನೆ ಗಾಲ್ಫ್ ರೆಸಾರ್ಟ್ ನಲ್ಲಿ ಜಾಕ್ವೆಲಿನ್ ತಂಗಿದ್ದರು.

ಸ್ನೇಹಿತರ ಜೊತೆ ಆಗಮಿಸಿದ್ದ ಜಾಕ್ವೆಲಿನ್ ಸುಂದರ ಪ್ರಕೃತಿಯ ನಡುವೆ ವೀಕೆಂಡ್ ಎಂಜಾಯ್ ಮಾಡಿದ ಜೊತೆಗೆ ಸ್ನೇಹಿತರ ಜೊತೆ ಗಾಲ್ಫ್ ಆಡಿ ಸಂಭ್ರಮಿಸಿದ್ದಾರೆ.

ಈ ಕುರಿತು ತಮ್ಮ ಇನ್ಸ್ಟ್ರಾಗ್ರಾಮ್ ನಲ್ಲಿ ಗಾಲ್ಫ್ ಆಡುತ್ತಿರುವ ಫೋಟೋ ಹಾಗೂ ವೀಡಿಯೋ ಹಂಚಿಕೊಂಡ ಅವರು ಬೆಸ್ಟ್ ವೀಕೆಂಡ್ ಎವರ್ ಎಂದು ಬರೆದುಕೊಂಡಿದ್ದಾರೆ.

ಸುದೀಪ್ ಚಿತ್ರಕ್ಕಾಗಿ ಸಿದ್ದತೆ.

ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾದಲ್ಲಿ ಹಾಡೊಂದಕ್ಕೆ ಜಾಕ್ವೆಲಿನ್ ಹೆಜ್ಜೆ ಹಾಕಲಿದ್ದು ಏಪ್ರಿಲ್ ನಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ.

ಜಾಕ್ವೆಲಿನ್ ಏಪ್ರಿಲ್ ನಲ್ಲಿ ಪ್ಯಾಂಟಮ್ ತಂಡದೊಂದಿಗೆ ಕಾರ್ಯ ನಿರ್ವಹಿಸಲಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!