BREAKING NEWS
Search

ಕಾಂಗ್ರೆಸ್ ನಿಂದ ಪಾಠ ಕಲಿಯುವ ಅಗತ್ಯವಿಲ್ಲ -ಬಿ.ವೈ.ಆರ್ ,ಕಾಂಗ್ರೆಸ್‌ಗೆ ಬಿಜೆಪಿಯ ದೇಶಭಕ್ತಿಯ ಪ್ರಮಾಣಪತ್ರ ಬೇಕಿಲ್ಲ ಎಂದ್ರು ಬಿವಿ ಶ್ರೀನಿವಾಸ್!

117

ಜಾಯಿರಾತು:-

ಶ್ರೀ ವೈಷ್ಣವಿ ದೇವಿ ಸನ್ಮಾರ್ಗ ಜ್ಯೋತಿಷ್ಯ ದೇಗುಲ.

ಪಂಡಿತ್ . ಶ್ರೀ ಶ್ರೀ ವರ್ಮಾ ಗುರೂಜಿ ಕರ್ನಾಟಕದ ಜನಗಳ ವಿಶ್ವಾಸ ಪಡೆದಿರುವ ಜ್ಯೋತಿಷ್ಯರು. *ಶ್ರೀ ವೈಷ್ಣವಿ ದೇವಿ ಮತ್ತು ಅಂಗಳ ಪರಮೇಶ್ವರಿ ದೇವಿಯ ಆರಾಧಕರಾದ ಇವರು ಕೇರಳ, ಕೊಳ್ಳೇಗಾಲದ ಮತ್ತು ತುಳುನಾಡಿನ ತಂತ್ರ,ಮಂತ್ರಗಳ ನಿಗೂಢ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಿಗೆ ಕೇವಲ 3 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 
M:- 78926 94103 / 944 888 6845

ನಿಮ್ಮ ಜೀವನದ ಸಮಸ್ಯೆಗಳಾದ:-
ಮದುವೆ ಯೋಗ,ಸ್ತ್ರೀ-ಪುರುಷ ವಶಿಕರಣ,ಜನ ವಶಿಕರಣ,ಕೆಲಸದಲ್ಲಿ ಜನಗಳ ತೊಂದರೆ,ಶತ್ರು ವಶಿಕರಣ,ಜಮೀನು ವಿಚಾರ,ಕೋರ್ಟ್ ಕೇಸ,ಸಂತಾನ ಸಮಸ್ಯೆ,ಗಂಡ ಹೆಂಡತಿ ಸಮಸ್ಯ,ಮನೆಯಲ್ಲಿ ಅಶಾಂತಿ ಹೀಗೆ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಕಾರಣರಾಗಿರುವ ಇವರನ್ನು ಒಮ್ಮೆ ಕರೇ ಮಾಡಿ.
ನಂಬಿಕೆಯಿರಲಿ M: 944 888 6845/ 78926 94103

ನಮ್ಮ ವೆಬ್ ಪೇಜ್ ತಾಣಕ್ಕೆ ಭೇಟಿ ನೀಡಿ ಸಂಪರ್ಕಿಸಿ:- 
https://indianbestastrocentre.com

ಶಿವಮೊಗ್ಗ : ಏಕ ಪೌರತ್ವ ಕಾಯ್ದೆ ಜಾರಿ ಸಂಬಂಧ ರಾಷ್ಟ್ರ ಹಾಗು ರಾಜ್ಯದಲ್ಲಿ ಕಳೆದ ಒಂದು ವಾರದಿಂದ ದಾಂಧಲೆ, ಗಲಭೆ ನಡೆಯುತ್ತಿದ್ದು, ಪಟ್ಟಭದ್ರ ಹಿತಾಸಕ್ತಿಗಳು ಗಲಭೆ ನಡೆಸುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು ಪೊಲೀಸ್ ಇಲಾಖೆಯನ್ನು ಗುರಿಯನ್ನಾಗಿಸಿ ದಾಳಿ ನಡೆಸಲಾಗುತ್ತಿದೆ. ಪೌರತ್ವ ವಿಧೇಯಕ ಕಾಯ್ದೆಯಾಗಿ ಹೊರಬಂದ ನಂತರ ಕೆಲ ರಾಜಕೀಯ ಪಕ್ಷಗಳ ಪಿತೂರಿಯಿಂದ ಗಲಭೆಗಳು ನಡೆಯುತ್ತಿವೆ ಎಂದರು.

ಪಾಕಿಸ್ತಾನ, ಬಾಂಗ್ಲಾದೇಶದ ಜನತೆಗೆ ಪೌರತ್ವ ನೀಡುವ ವಿಚಾರದಲ್ಲಿ ಚರ್ಚೆ ನಡೆದು ಈಗಾಗಲೇ, ತೀರ್ಮಾನಕ್ಕೆ ಬರಲಾಗಿದೆ. ಹೀಗಿದ್ದರೂ ಕಾಂಗ್ರೆಸ್ ನ ನಾಯಕರುಗಳು ಮನಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಸಿಖ್ ಧರ್ಮೀಯರ ಮೇಲೆ ಹಲ್ಲೆ ನಡೆಸಿ ಮಾರಣ ಹೋಮ ನಡೆಸಿದ್ದು, ಭೂಪಾಲ್ ಸೇರಿದಂತೆ, ಹಲವು ಗಲಭೆಗಳು ಯಾರ ಅಧಿಕಾರದ ಅವಧಿಯಲ್ಲಿ ನಡೆದಿದೆ ಎಂಬುದು ಪ್ರಪಂಚಕ್ಕೆ ತಿಳಿದಿದೆ ಎಂದು ಕಾಂಗ್ರೆಸ್ ನವರಿಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ನವರಿಂದ ನಾವುಗಳು ಪಾಠ ಕಲಿಯುವ ಅಗತ್ಯವಿಲ್ಲ. ವಿರೋಧ ಪಕ್ಷದ ಮುಖಂಡರುಗಳು ರಾಜ್ಯವನ್ನು ಶಾಂತಿಯಾಗಿಸುವ ನಿಟ್ಟಿನಲ್ಲಿ ಕೈ ಜೋಡಿಸಬೇಕೆಂದು ಹಾಗು ರಾಜಕೀಯ ದುರುದ್ದೇಶದಿಂದ ಕಪ್ಪು ಚುಕ್ಕೆ ಇಡುವ ಕೆಲಸ ಮಾಡದಿರುವಂತೆ ಹಾಗು ಸಾರ್ವಜನಿಕರು ಸಹ ರಾಜಕೀಯ ಪ್ರಚೋದನೆಗೆ ಒಳಗಾಗದಿರುವಂತೆ ಸಂಸದ ರಾಘವೇಂದ್ರ ಮನವಿ ಮಾಡಿದರು.

ಅಲ್ಲದೇ ಪ್ರತಿಭಟನೆ ನಡೆಸುವವರು ಕಾಯ್ದೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಬೀದಿಗಿಳಿದು ಪ್ರತಿಭಟನೆ ನಡೆಸಲಿ ಎಂದಿದ್ದಾರೆ.

ಕಾಂಗ್ರೆಸ್‌ಗೆ ಬಿಜೆಪಿಯ ದೇಶಭಕ್ತಿಯ ಪ್ರಮಾಣಪತ್ರ ಬೇಕಿಲ್ಲ:-ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್

ಶಿವಮೊಗ್ಗ: ದೇಶದ ಯುವಜನರ ಹಾಗೂ ಬಿಜೆಪಿ ವಿರುದ್ಧ ಧ್ವನಿ ಎತ್ತುವವರ ಹತ್ತಿಕ್ಕುವ ಕೆಲಸ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ ಎಂದು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಆರೋಪಿಸಿದರು.

ಆದಿಚುಂಚನಗಿರಿ ಕಲ್ಯಾಣಮಂದಿರದಲ್ಲಿ ಜಿಲ್ಲಾ ಎನ್‌ಎಸ್‌ಯುಐನಿಂದ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದರೆ ದೇಶದ್ರೋಹಿ ಪಟ್ಟ ಕಟ್ಟುವ ಕೆಲಸವೂ ಬಿಜೆಪಿಯಿಂದ ನಡೆಯುತ್ತಿದೆ.

ಹೊಸ ಹೊಸ ಕಾಯ್ದೆ ಕಾನೂನು ರೂಪಿಸುವ ಮುಖಾಂತರ ದೇಶದ ಜನರಿಗೆ ಸಮಸ್ಯೆ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಬಗ್ಗೆ ಪ್ರಶ್ನಿಸಿದರೆ ದೇಶಭಕ್ತಿಯ ಹೆಸರಲ್ಲಿ ದೂಷಿಸುವ ಕೆಲಸ ಮಾಡುತ್ತಾರೆ. ೭೦ ವರ್ಷಗಳಿಂದ ದೇಶದ ಅಭಿವೃದ್ಧಿಗೆ ಆಡಳಿತ ನಡೆಸಿದ ಕಾಂಗ್ರೆಸ್‌ಗೆ ಬಿಜೆಪಿಯ ದೇಶಭಕ್ತಿಯ ಪ್ರಮಾಣಪತ್ರ ಬೇಕಿಲ್ಲ.

ದೇಶದ ಪ್ರಗತಿ ದೃಷ್ಠಿಯಿಂದ ಕೆಲಸ ಮಾಡುವ ದೇಶಭಕ್ತಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಲ್ಲಿ ಅಡಗಿದೆ ಎಂದರು.
ಬಿಜೆಪಿ ನೇತೃತ್ವದ ಪಕ್ಷಗಳಿಗೆ ಎರಡು ಬಾರಿ ದೇಶದ ಜನತೆ ಆಡಳಿತ ನಡೆಸಲು ಅವಕಾಶ ನೀಡಿದರೂ ಭರವಸೆ ಈಡೇರಿಸುವಲ್ಲಿ ವಿಫಲವಾಗಿವೆ. ಬಿಜೆಪಿಯು ನಿಜವಾಗಿ ದೇಶಭಕ್ತಿ ಹೊಂದಿದ್ದರೆ ಆಡಳಿತಕ್ಕೆ ಬರುವ ಮುನ್ನ ನೀಡಿದ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.


ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ನೆಹರು, ಗಾಂಧಿ, ಅಂಬೇಡ್ಕರ್ ವಿರುದ್ಧ ಅಪಪ್ರಚಾರ ನಡೆಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಅಂತಹ ತಪ್ಪು ಸಂಗತಿಗಳ ಬಗ್ಗೆ ಹಾಗೂ ಅದರ ನಿಜ ವಿಷಯಗಳ ಬಗ್ಗೆ ಕಾರ್ಯಕರ್ತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ದೇಶದಲ್ಲಿ ಸೃಷ್ಠಿ ಆಗಿರುವ ಗಲಭೆ ವಾತಾವರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಮಂತ್ರಿ ಅಮಿತ್‌ಷಾ ನೇರ ಕಾರಣ ಆಗಿದ್ದಾರೆ. ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ ಸಮಾಜದ ವ್ಯವಸ್ಥೆ ಹಾಳಾಗಿದೆ. ದೇಶದ ಏಕತೆ ಹಾಗೂ ಸಮಗ್ರತೆ ದೃಷ್ಠಿಯಿಂದ ಬಿಜೆಪಿ ತೊಲಗಿಸಬೇಕಿದೆ ಎಂದು ತಿಳಿಸಿದರು.

ಯುವ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಇತಿಹಾಸ ಅರಿತುಕೊಳ್ಳುವ ಮೂಲಕ ಬಿಜೆಪಿಗೆ ತಕ್ಕ ಉತ್ತರ ನೀಡಬೇಕಿದೆ. ಗಾಂಧಿ, ನೆಹರು ಹಾಗೂ ಅಂಬೇಡ್ಕರ್ ಕುರಿತ ಕೃತಿಗಳನ್ನು ಅಧ್ಯಯನ ನಡೆಸಿದರೆ ಅವರು ದೇಶಕ್ಕೆ ನೀಡಿರುವ ಕೊಡುಗೆ ಅರಿವಾಗುತ್ತದೆ ಎಂದರು.

ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಕೆ.ಚೇತನ್, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಸಿ.ಜಿ.ಮಧುಸೂದನ್, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಬಾಲಾಜಿ, ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಾಲಿಕೆ ಸದಸ್ಯ ಬಿ.ಎ.ರಮೇಶ್ ಹೆಗ್ಡೆ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಕಾಶಿ, ಭದ್ರಾವತಿ ಯುವ ಮುಖಂಡ ಗಣೇಶ್, ಶ್ರೀನಿವಾಸ್ ಕರಿಯಣ್ಣ, ಕಲಗೋಡು ರತ್ನಾಕರ್, ಯಮುನಾ ರಂಗೇಗೌಡ, ಎನ್.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
Leave a Reply

Your email address will not be published. Required fields are marked *