BREAKING NEWS
Search

ಶಿವಮೊಗ್ಗ ದಲ್ಲಿ ಯಡಿಯೂರಪ್ಪ ನವರ ಮನೆಗೆ ಮುತ್ತಿಗೆ ಹಾಕಲು ಹೊರಟ ಕಾಂಗ್ರೆಸ್ ಕಾರ್ತಕರ್ತರ ಬಂಧನ!

74

ಶಿವಮೊಗ್ಗದಲ್ಲಿ ಶಾಸಕ ಸೋಮಶೇಖರ ರೆಡ್ಡಿಯನ್ನು ಬಂಧಿಸುವಂತೆ ಪ್ರತಿಭಟನೆ‌ ನೆಡೆಸುತಿದ್ದ ಕಾಂಗ್ರೆಸ್ ಪಕ್ಷದ ಅಲ್ಪಾಂಖ್ಯಾತ ಘಟಕದ ಕಾರ್ಯಕರ್ತರನ್ನು ಡಿಸಿ ಕಚೇರಿಯ ಬಳಿ ಪೋಲಿಸರು ವಶಕ್ಕೆ ಪಡೆದಿದು ಬಿಡುಗಡೆ ಗೊಳಿಸಿದರು.

ಅಲ್ಪಸಂಖ್ಯಾತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಶಾಂತಿ ಸೌಹಾರ್ದತೆ ಕದಡುತ್ತಿರುವ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿಯನ್ನು ಬಂಧಿಸಬೇಕು ಎಂದು ಘೋಷಣೆ ಕೂಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರ ಮನೆಗೆ ಮುತ್ತಿಗೆ ಹಾಕುವುದಾಗಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತರು ತಿಳಿಸದ್ದರಿಂದ ಪ್ರತಿಭಟನೆ ಮುಗಿಸಿ ಹಿಂತಿರುಗುತಿದ್ದ ಕಾರ್ಯಕರ್ತರನ್ನು ಮುಂಜಾಗ್ರುತ ಕ್ರಮವಾಗಿ ಡಿಸಿ ಕಚೇರಿಯ ಮುಂಭಾಗದಲ್ಲೇ ಪೋಲಿಸರು ವಶಕ್ಕೆ ಪಡೆದರು.

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮಹಮ್ಮದ್ ಆರಿಫ್ ಉಲ್ಲಾ, ನಗರಾಧ್ಯಕ್ಷ ಮಹಮ್ಮದ್ ನಿಹಾಲ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.




Leave a Reply

Your email address will not be published. Required fields are marked *