BREAKING NEWS
Search

ಶಿವಮೊಗ್ಗದಲ್ಲಿ ನಾಲ್ವರು ಕೊರೊನಾ ಸೋಂಕಿತರು ಗುಣಮುಖ ಇಂದು ಬಿಡುಗಡೆ

1034

ಶಿವಮೊಗ್ಗ : ಕೊರೋನ ಸೊಂಕಿನಿಂದ ಗುಣಮುಖರಾದ ನಾಲ್ವರಿಗೆ ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಗ್ರೀನ್ ಜೋನ್ ನಲ್ಲಿದ್ದ ಶಿವಮೊಗ್ಗದಲ್ಲಿ ಕೊರೋನ ಪಾಸಿಟಿವ್ ತಂದಿದ್ದ ಎಂಟು ಮಂದಿ ತಬ್ಲಿಘಿಗಳಲ್ಲಿ ಕಳೆದ 24 ಗಂಟೆಯಲ್ಲಿ ನಡೆಸಲಾದ ಗಂಟಲು ದ್ರವ ಪರೀಕ್ಷೆಯಲ್ಲಿ ನಾಲ್ವರಿಗೆ ನೆಗೆಟಿವ್ ಬಂದಿದ್ದು, ಇವರನ್ನು ತಮ್ಮ ಮನೆಗಳಿಗೆ
ವಾಪಾಸ್ ಕಳುಹಿಸಲಾಗಿದೆ.

ಮೇ. 9 ರಂದು ಗುಜರಾತ್ ನ ಅಹಮದಾಬಾದ್ ನಿಂದ ಶಿವಮೊಗ್ಗಕ್ಕೆ ಬಂದಿದ್ದ ಇವರಿಗೆ ಶಿವಮೊಗ್ಗದ ಬಾರ್ಡರ್ ನಲ್ಲಿಯೇ ಗುರುತಿಸಿ ಮೆಗ್ಗಾನ್ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದೀಗ ಇವರು ಸಂಪೂರ್ಣವಾಗಿ ಗುಣಮುಖರಾಗಿ ಚೇತರಿಸಿಕೊಂಡಿದ್ದು, ಇಂದು ಮೆಗ್ಗಾನ್ ಆಸ್ಪತ್ರೆಯಿಂದ ಶಿಕಾರಿಪುರದ ತಮ್ಮ‌ ನಿವಾಸಗಳಿಗೆ ಕಳಿಸಲಾಯಿತು.

ಈ ನಾಲ್ವರನ್ನು ಇನ್ನು 14 ದಿನಗಳ ಕಾಲ ತಮ್ಮ ತಮ್ಮ ಮನೆಯಲ್ಲಿಯೇ ಕ್ವಾರಂಟೈನ್ ಮಾಡಲು ಸೂಚಿಸಲಾಗಿದ್ದು,ಪಿ-808, ಪಿ-809, ಪಿ-813, ಪಿ-815 ನಂ. ಗುಣಮುಖರಾದ ಈ ನಾಲ್ವರಿಗೆ ಬಿಡುಗಡೆ ಭಾಗ್ಯ ದೊರೆತಂತಾಗಿದೆ.

ಈ ಮೂಲಕ ಜಿಲ್ಲೆಯಲ್ಲಿ 34 ಮಂದಿಯಿದ್ದ ಸೋಂಕಿತರ ಸಂಖ್ಯೆ 30 ಕ್ಕೆ ಇಳಿಕೆಯಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ