ಶಿವಮೊಗ್ಗ:- ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 6 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 129 ಕ್ಕೆ ಏರಿಕೆಯಾಗಿದೆ. ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆಯ ಇಬ್ಬರು ವೈದ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಖ್ಯಾತ ಹೃದಯರೋಗ ತಜ್ಞ ವೈದ್ಯ ಮತ್ತು ಅನಸ್ಥೇಶಿಯಾ ತಜ್ಞ ವೈದ್ಯೆಗೆ ಸೋಂಕು ತಗುಲಿದೆ.
ಕೊರೊನಾ ಸೋಂಕಿತ ಕ್ಯಾನ್ಸರ್ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಿದ್ದ ವೈದ್ಯರಲ್ಲಿ ಸೊಂಕು ಪತ್ತೆಯಾಗಿದೆ.
ಇನ್ನು ಭದ್ರಾವತಿಯ ಲಾರಿ ಚಾಲಕನಿಗು ಸೋಂಕು ಧೃಢಪಟ್ಟಿದೆ.
ಲಾರಿ ಚಾಲಕ ಹಲವಾರು ಕಡೆಗಳಲ್ಲಿ ಸಂಚರಿಸಿದ್ದು
ಈತನ ಪ್ರಾಥಮಿಕ ಸಂಪರ್ಕ ಹೊಂದಿರುವ ಎಂಟು ಜನರಿಗೆ ಕ್ವಾರಂಟೈನ್ ಮಾಡಲಾಗಿದೆ.
ಇನ್ನೂ ಹಲವು ಜನರು ಪ್ರಾಥಮಿಕ ಸಂಪರ್ಕ ಇರುವ ಸಾಧ್ಯತೆ ಯಿದ್ದು ಸಂಪರ್ಕದ ವಿವರ ಪಡೆಯಲಾಗುತ್ತಿದೆ.
ಇದಲ್ಲದೇ ಶಿಕಾರಿಪುರದ ಉಸಿರಾಟ ಮತ್ತು ಹಾರ್ಟ್ ಅಟ್ಯಾಕ್ ಸಮಸ್ಯೆಯಿಂದ ಸಾವನ್ನಪ್ಪಿ ನಂತರ ಸೋಂಕು ಧೃಢಪಟ್ಟಿದ್ದ ವೃದ್ಧೆಯ ಮಗ ಮತ್ತು ಮೊಮ್ಮಗನಿಗೂ ಪಾಸಿಟಿವ್ ಧೃಢವಾಗಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಸಮುದಾಯ ಹಂತದಲ್ಲೂ ಕೊರೊನಾ ವೈರಸ್ ಸೋಂಕು ವ್ಯಾಪಿಸಿದ್ದು ಜನರಲ್ಲಿ ಮತ್ತಷ್ಟು ಭಯ ಮೂಡಿಸಿದೆ.
ಇಂದಿನ ರಾಜ್ಯದ ಸೊಂಕಿತರ ವಿವರ ಈ ಕೆಳಗಿನಂತಿದೆ:-


ಇಂದು ಗುಣಮುಖರಾಗಿ ಬಿಡುಗಡೆಯಾದ ಜಿಲ್ಲಾವಾರು ಕರೋನಾ ಸೊಂಕಿನಿಂದ ಗುಣಮುಖರಾದ ವಿವರ:-
