ಶಿವಮೊಗ್ಗದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕೊರೋನ ಪಾಸಿಟಿವ್ ಬಾಧಿಸುತ್ತಿದ್ದು ಇಂದು ಸಹ ಜಿಲ್ಲೆಯಲ್ಲಿ 4 ಕೊರೋನ ಪಾಸಿಟಿವ್ ಕಾಣಿಸಿಕೊಂಡಿದೆ.
ಮೂರು ಕೊರೋನ ಪಾಸಿಟಿವ್ ಪ್ರಕರಣ ಬೆಂಗಳೂರಿನ ಬಂದೋಬಸ್ತ್ ಗಾಗಿ ತೆರಳಿದ್ದ ಶಿವಮೊಗ್ಗದ ಕೆಎಸ್ ಆರ್ ಪಿ ಪೊಲೀಸರಲ್ಲಿ ಕಾಣಿಸಿಕೊಂಡಿದೆ. ಹಾಗೂ ಹೊಸನಗರದ ಓರ್ವ ಯುವಕನಲ್ಲಿ ಪಾಸಿಟಿವ್ ಕಂಡುಬಂದಿದೆ.
ಕೆಎಸ್ ಆರ್ ಪಿಯ ಪೊಲೀಸರು 15 ದಿನಗಳ ಹಿಂದೆ ಬಂದವರಿಗೆ ಈಗ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಹೊಸನಗರದ ಓರ್ವ ಯುವಕ ಮಹಾರಾಷ್ಟ್ರದಿಂದ ಬಂದಿದ್ದು ಆತನಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.
ಕೆಎಸ್ ಆರ್ ಪಿಯವರು ಕ್ವಾರಂಟೈನ್ ನಲ್ಲಿದ್ದವರಲ್ಲೇ ಕಾಣಿಸಿಕೊಂಡಿದೆ.
ಈ ನಾಲ್ವರಲ್ಲಿ ಕಾಣಿಸಿಕೊಂಡ ಕೊರೋನ ಪಾಸಿಟಿವ್ ಶಿವಮೊಗ್ಗದಲ್ಲಿ 73 ಕ್ಕೇರಿದೆ.
ನಿನ್ನೆ ಪತ್ತೆಯಾಗಿರುವ ಕೊರೋನ ಪಾಸಿಟಿವ್ ವ್ಯಕ್ತಿಗಳನ್ನ ಪಿ-5824, ಪಿ-5825, ಪಿ-5826, ಪಿ-5827 ಎಂದು ಗುರುತಿಸಲಾಗಿದೆ. ಇವರನ್ನೆಲ್ಲಾ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.