BREAKING NEWS
Search

ಸಾಗರದಲ್ಲಿ 25ಕೆಜಿ ಶ್ರೀಗಂಧ ಕಳ್ಳತನ-ಕೊಲೆಯಾಗಿ ಪತ್ತೆಯಾದ ಕಾವಲುಗಾರ!

463

ಶಿವಮೊಗ್ಗ :- ಅರಣ್ಯ ಇಲಾಖೆ ಕಚೇರಿಯ ಬೀಗ ಒಡೆದು ಕಳ್ಳತನ ನಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಅರಣ್ಯ ಇಲಾಖೆ ಕಚೇರಿಯಲ್ಲಿ ನಡೆದಿದೆ.

ಕಚೇರಿಯ ಉಗ್ರಾಣದಲ್ಲಿ ಸಂಗ್ರಹಿಸಿ ಇಟ್ಟಿದ್ದ ಸುಮಾರು 25 ಕೆ.ಜಿ. ಶ್ರೀಗಂಧ ನಾಪತ್ತೆಯಾಗಿದೆ.

ನಿನ್ನೆ ಮಧ್ಯ ರಾತ್ರಿ ಈ ಘಟನೆ ನಡೆದಿದ್ದು, ಘಟನೆ ಬಳಿಕ ಕಚೇರಿಯ ಕಾವಲುಗಾರ ನಾಗರಾಜ್ ನಾಪತ್ತೆಯಾಗಿದ್ದ.

ಪೊಲೀಸರು ಅರಣ್ಯ ಸಿಬ್ಬಂದಿಯ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು.

ಆದರೆ ಇದೀಗ ಕಾವಲುಗಾರ ನಾಗರಾಜ್ ಶವ ಸಾಗರ ತಾಲೊಕಿನ ಐಗಿನ್ ಬೈಲ್ ನ ನೆದರವಳ್ಳಿ ಬಸ್ ನಿಲ್ದಾಣದ ಬಳಿ ಪತ್ತೆಯಾಗಿದೆ.

ಇದೀಗ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದ್ದು ಅರಣ್ಯ ಇಲಾಖೆಯಲ್ಲಿ ಶ್ರೀಗಂಧ ಕಳ್ಳತನ ನಡೆಸಿರುವ ಕಳ್ಳರು, ಶ್ರೀಗಂಧ ಕಳವು ಮಾಡಿ ಕಾವಲುಗಾರನನ್ನು ಕೊಲೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಘಟನೆ ಕುರಿತು ಸಾಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೇಟಿನೀಡಿ ಪರಿಶೀಲನೆ ನಡೆಸಿದ್ದು
ಶೀಘ್ರದಲ್ಲಿ ಕೊಲೆ ಹಾಗೂ ಶ್ರೀಗಂಧ ಕದ್ದ ಆರೋಪಿ ಯನ್ನು ಹಿಡಿಯುವುದಾಗಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *