ಶಿವಮೊಗ್ಗ :- ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಸಾಗರ ಮತ್ತು ಸೊರಬ ತಾಲೂಕಿನ ಕರೋನ ಸೋಂಕಿತರಿಗೆ ಈ ಸೆಂಟರಲ್ಲಿ ಚಿಕಿತ್ಸೆ ಸಿಗಲಿದೆ.
ಹೇಗಿದೆ ಸೆಂಟರ್? ವಿಶೇಷತೆಗಳೇನು?
ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಆರಂಭಿಸಿರುವ ಕೇರ್ ಸೆಂಟರ್ ನಲ್ಲಿ 150 ಹಾಸಿಗೆ ಸಾಮರ್ಥ್ಯವಿದೆ. ಈಗ 100 ಹಾಸಿಗೆ ಸಿದ್ದವಿದೆ. 50 ಹಾಸಿಗೆಗೆ ಆಕ್ಸಿಜನ್ ಸಂಪರ್ಕ ಕಲ್ಪಿಸಲಾಗಿದೆ. ಉಳಿದ 50 ಹಾಸಿಗೆಗೆ ಆಕ್ಸಿಜನ್ ಸಂಪರ್ಕ ಕಲ್ಪಿಸಲಾಗುತ್ತಿದೆ.
ಮೊಬೈಲ್ ಟೀಂ
ಸಾಗರ ಮತ್ತು ಸೊರಬ ತಾಲೂಕಿನಲ್ಲಿ ಸೋಂಕಿತರನ್ನು ಕರೆತರಲು ಮೊಬೈಲ್ ಟೀಮ್ ವ್ಯವಸ್ಥೆ ಮಾಡಲಾಗಿದ್ದು ಈ ಟೀಮ್ ಪಾಸಿಟಿವ್ ವರದಿ ಬಂದ ಸಾಗರ,ಸೊರಬ ಕ್ಷೇತ್ರದ ಜನರನ್ನು ಇಲ್ಲಿಗೆ ಕರೆತರುತ್ತಾರೆ.
ಪರೀಕ್ಷೆ ಹೇಗಿರುತ್ತೆ?
ಕರೋನಾ ಸೋಂಕಿತರಿಗೆ ಡಿಸಿಹೆಚ್ ಸೆಂಟರಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇತರೆ ಕಾಯಿಲೆಗಳು ಇರುವ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ತೀರಾ ಅಗತ್ಯವಿದ್ದರಷ್ಟೇ ಶಿವಮೊಗ್ಗದ ಮೆಗ್ಗನಾ ಆಸ್ಪತ್ರೆಗೆ ಕಳುಹಿಸಲಾಗುತ್ತದೆ.
24 ಗಂಟೆ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದ್ದು ಕೋವಿಡ್ ಕೇರ್ ಸೆಂಟರ್ ನಲ್ಲಿ ನಿರಂತರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು ಉತ್ತಮ ವ್ಯವಸ್ಥೆ ಕಲ್ಪಿಸಿದೆ.