BREAKING NEWS
Search

ಶಾಲಾ ಶಿಕ್ಷಕರ ಗಸ್ತಿನಿಂದ ಬದಲಾದ್ರು ಪೊಷಕರು-ರಾಜ್ಯಕ್ಕೆ ಮಾದರಿಯಾದ್ರು ಸರ್ಕಾರಿ ಶಿಕ್ಷಕರು!

1157

ಶಿವಮೊಗ್ಗ :- ಸರ್ಕಾರಿ ಶಾಲೆಯೆಂದರೆ ಬಹುತೇಕ ಜನರು ಮೂಗು ಮುರಿಯುವವರೇ ಹೆಚ್ಚು. ಆದರೇ ಸರ್ಕಾರಿ ಶಾಲೆಯೂ ಸಹ ಶಿಕ್ಷಕರು ಪ್ರಯತ್ನ ಪಟ್ಟರೆ ಇಡೀ ರಾಜ್ಯಕ್ಕೆ ಮಾದರಿಯಾಗಿ ನಿಲ್ಲುತ್ತದೆ ಎನ್ನುವುದಕ್ಕೆ ಶಿವಮೊಗ್ಗ ತಾಲೂಕಿನ ಪಿಳ್ಳಂಗಿರಿ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕರು ತೋರಿಸಿಕೊಟ್ಟಿದ್ದಾರೆ‌.

ಅರೇ ಅಂತದ್ದೇನು ತೋರಿಸಿಕೊಟ್ರು ಏನು ಮಾದರಿ ಅಂತ ನೀವು ಕೇಳಬಹುದು. ಹಾಗಿದ್ರೆ ಈ ಸ್ಟೋರಿ ಓದಲೇ ಬೇಕು‌.

ಪಿಳ್ಳಂಗಿರಿ ಶಾಲೆಯಲ್ಲಿ 270 ಜನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದಾರೆ.ಇದರಲ್ಲಿ ನೂರು ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಓದುತಿದ್ದಾರೆ.
ಹೀಗಾಗಿ ಈ ಶಾಲೆಯ ಶಿಕ್ಷಕರು ಈ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಶಾಲಾ ಸಮಯ ಹೊರತಾಗಿಯೂ ಶಾಲೆಯ ಪ್ರಾರಂಭಕ್ಕೂ ಮೊದಲು ಹಾಗೂ ನಂತರ ರಾತ್ರಿ ವೇಳೆ ಮಕ್ಕಳ ಮನೆಗೆ ಭೇಟಿ ನೀಡಿ ಅವರು ಓದಿಕೊಳ್ಳುತಿದ್ದಾರೋ ಅಥವಾ ಟಿ.ವಿ ,ಮೊಬೈಲ್ ನೋಡಿಕೊಂಡು ಕಾಲಹರಣ ಮಾಡುತಿದ್ದಾರೋ ಎಂದು ಗಸ್ತು ತಿರುಗುವ ಮೂಲಕ ಮನೆಗೆ ಭೇಟಿ ನೀಡಿ ವಿಚಾರಿಸುತ್ತಾರೆ‌.


ಯಾವ ಮಕ್ಕಳು ಯಾವ ವಿಷಯದಲ್ಲಿ ವೀಕ್ ಇದ್ದಾರೆ ,ಏನಾದ್ರು ಸಮಸ್ಯೆ ಇದ್ರೆ ಅವರ ಮನೆಗೆ ತೆರಳಿ ಓದಿನ ಸಮಸ್ಯೆ ಬಗೆಹರಿಸುತ್ತಾರೆ.
ಪ್ರತಿ ಶಿಕ್ಷಕರು ಪ್ರತ್ತೇಕ ತಂಡ ಕಟ್ಟಿಕೊಂಡು ಪ್ರತಿ ದಿನ ರಾತ್ರಿ ಈ ಹಳ್ಳಿಯ ವಿಧ್ಯಾರ್ಥಿಗಳ ಮನೆಗೆ ತೆರಳುತ್ತಾರೆ. ಮಕ್ಕಳ ಜೊತೆ ಸ್ಪಲ್ಪ ಹೊತ್ತು ಕಾಲ ಕಳೆದು ಅವರಿಗೆ ಪರಿಕ್ಷೆಗೆ ತಯಾರಿ ಹೇಗೆ ಆಗಬೇಕು ಏನಾದ್ರು ಸಮಸ್ಯೆ ಇದ್ರೆ ಅದನ್ನು ಬಗೆಹರಿಸುವ ಮೂಲಕ ವಿಧ್ಯಾರ್ಥಿಗಳಲ್ಲಿ ಮನೋ ಬಲ ಹೆಚ್ಚಿಸುತಿದ್ದು ಮನೆಯ ವಾತಾವರಣ ಅವರಿಗೆ ಪೂರಕವಾಗಿರುವಂತೆ ಪೋಷಕರಿಗೂ ತಿಳಿಹೇಳುವ ಮೂಲಕ ಮಕ್ಕಳ ಓದಿಗೆ ಸಹಕರಿಸುತಿದ್ದಾರೆ.

ಬದಲಾಯ್ತು ವಿದ್ಯಾರ್ಥಿಗಳ ಮನೆ ವಾತಾವರಣ!

ಶಿಕ್ಷಕರು ಮನೆಗೆ ಭೇಟಿ ಕೊಡುವ ಮೊದಲು ಹಲವು ಪೊಷಕರ ಮನೆಯಲ್ಲಿ ಮದ್ಯಪಾನ ತೆಜಿಸಿದ್ದಾರೆ,ಗಂಡ ಹೆಂಡತಿ ಜಗಳ ಬಂದ್ ಆಗಿದೆ,ಮನೆಯಲ್ಲಿ ಶುಚಿತ್ವ ಮನೆಮಾಡಿದೆ.
ಇನ್ನು ಕೆಲವು ಬಡಪೊಷಕರ ಮನೆಯಲ್ಲಿ ಡಿಮ್ಮಾದ ಬಲ್ಪುಗಳು,ಕತ್ತಲು ತುಂಬಿದ ವಿದ್ಯಾರ್ಥಿಯ ಕೋಣೆ ಅವರ ಮನಸ್ಸು ಓದಿನತ್ತ ಇರದಂತೆ ಮಾಡುತಿತ್ತು. ಇದಕ್ಕಾಗಿ ತಮ್ಮ ಹಣ ಕರ್ಚು ಮಾಡುವ ಜೊತೆಗೆ ಹೆಸ್ಕಾಂ ಸಹಾಯದಿಂದ ಮನೆಗೆ ಉತ್ತಮ ದೀಪ ಕಲ್ಪಿಸಿದ್ದಾರೆ.ಇನ್ನು ಕೆಲವರ ಮನೆಯ ಕರೆಂಟ್ ಬಿಲ್ ಸಹ. ಹಾಗಾಗಿ ಪೊಷಕರು ಕೂಡ ಬದಲಾಗಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಡುತಿದ್ದಾರೆ.

ಓದು ಬರಹದ ವಿಚಾರದಲ್ಲಿ ಮಕ್ಕಳ ಸ್ಥಾನದಲ್ಲಿ ನಿಂತು ನೋಡಬೇಕು. ಹಾಗಾಗಿಯೇ ಮಕ್ಕಳ ಮನೆಗೆ ಭೇಟಿ ಕೊಡುತಿದ್ದೇವೆ ಎನ್ನುತ್ತಾರೆ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ.

ಪಿಳ್ಳಂಗಿರಿ ಸರ್ಕಾರಿ ಶಾಲೆಯಲ್ಲಿ ಶೇಕಡ 85% ಫಲಿತಾಂಶವಿದೆ. 1೦೦% ಮಾಡುವ ಸಲುವಾಗಿ ಎಲ್ಲಾ ಶಿಕ್ಷಕರು ಕಲಿಕೆಗೆ ಒತ್ತು ನೀಡುತಿದ್ದಾರೆ.ಇದಕ್ಕಾಗಿ ಪ್ರತಿ ಬಾರಿ ಪೊಷಕರ ಮೀಟಿಂಗ್ ಕರೆದು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಉತ್ತಮ ವಾತಾವರಣ ಕಲ್ಪಿಸುವಂತೆ ಪೊಷಕರಲ್ಲಿ ಮನವಿ ಮಾಡುತ್ತಾರೆ. ಯಾವ ವಿದ್ಯಾರ್ಥಿ ಓದಿನಲ್ಲಿ ಹಿಂದೆ ಬಿದ್ದಿದ್ದಾನೋ ಆ ವಿದ್ಯಾರ್ಥಿಗೆ ಪ್ರತ್ತೇಕ ಪಾಠ ಮಾಡುವ ಮೂಲಕ ಅವರಲ್ಲಿ ದೈರ್ಯ ತುಂಬುತ್ತಾರೆ. ಹೀಗಾಗಿ ಈ ಶಾಲೆ ರಾಜ್ಯದಲ್ಲೇ ಮಾದರಿಯಾಗಿದ್ದು ಖಾಸಗಿ ಶಾಲೆಗಳು ಈ ಊರಿನ ಸುತ್ತಮುತ್ತ ಇದ್ದರೂ ಮಕ್ಕಳನ್ನು ಪೊಷಕರು ಇಲ್ಲಿಯೇ ಸೇರಿಸುತಿದ್ದು ಸುತ್ತಮುತ್ತಲಿನ ಖಾಸಗಿ ಶಾಲೆಗೆ ಸೆಡ್ಡು ಹೊಡೆದಿದೆ.

ಇನ್ನಲಿನ ಶಿಕ್ಷಣದ ಮಟ್ಟನೋಡಿ ಪೋಷಕರು ಸಹ ಈ ಶಾಲೆಗೆ ಮಕ್ಕಳನ್ನು ಸೇರಿದುತಿದ್ದು ಸರ್ಕಾರಿ ಶಾಲೆಯ ದಾಖಲಾತಿ ಕಮ್ಮಿಎನ್ನುವ ಹಣೆಪಟ್ಟಿಯನ್ನು ಈ ಮಾದರಿ ಶಾಲೆ ತೆಗೆದುಹಾಕಿದ್ದು ಇಡೀ ರಾಜ್ಯಕ್ಕೆ ಮಾದರಿಯಾಗಿ ನಿಂತಿದೆ.
Leave a Reply

Your email address will not be published. Required fields are marked *