BREAKING NEWS
Search

ಮಾಸ್ಕ ಹಾಕಿಲ್ಲ ಎಂದು ದಂಡ ವಿಧಿಸಿದ ಪೊಲೀಸರ ಬೈಕ್ ಕದ್ದ ಕಳ್ಳ!ಆಮೇಲಾಗಿದ್ದೇನು ಗೊತ್ತಾ

510

ಶಿವಮೊಗ್ಗ :- ಮಾಸ್ಕ್ ಹಾಕಿಲ್ಲ ಎಂದು ದಂಡ ಹಾಕಿದ್ದಕ್ಕೆ ಪೊಲೀಸರ ಬೈಕನ್ನೆ ಕಳ್ಳತನ ಮಾಡಿ ಯುವಕನೊಬ್ಬ ಪರಾರಿಯಾಗಿ ಸಿಕ್ಕಿಬಿದ್ದ ಘಟನೆ ಹೊಸನಗರ ಪೊಲೀಸ್ ಠಾಣೆ ಮುಂಭಾಗ ನಡೆದಿದೆ.

ಜಿಲ್ಲೆಯಲ್ಲಿ ಮಾಸ್ಕ್ ಕಾರ್ಯಾಚರಣೆ.

ಜಿಲ್ಲೆಯಾದ್ಯಂತ ಪೊಲೀಸರು ಮಾಸ್ಕ್ ಕಾರ್ಯಾಚರಣೆ ನಡೆಯುತ್ತಿದೆ. ಮಾಸ್ಕ್ ಧರಿಸದೆ ಓಡಾಡುವವರನ್ನು ಹಿಡಿದು ಪೊಲೀಸರು ದಂಡ ಹಾಕುತ್ತಿದ್ದಾರೆ. ಈ ಕಾರ್ಯಾಚರಣೆ ವೇಳೆ ಹೊಸನಗರದಲ್ಲಿ ಯುವಕನೊಬ್ಬನ್ನು ಹಿಡಿದು ದಂಡ ವಿಧಿಸಿದ್ದರು. ದಂಡ ಕಟ್ಟಿ ಠಾಣೆಯಿಂದ ಹಿಂತಿರುಗುವ ವೇಳೆ ಪೊಲೀಸರ ಬೈಕನ್ನೇ ಎಗರಿಸಿದ್ದಾನೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಯುವಕನ ಕೈಚಳಕ!

ಪೊಲೀಸರ ಬೈಕ್‍ ಕಳ್ಳತನ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್‍ ನಿಲ್ಲಿಸಿ ಎಟಿಎಂಗೆ ತೆರಳಿದ್ದ ಪೊಲೀಸ್ ಸಿಬ್ಬಂದಿ ರಾಘವೇಂದ್ರ ಅವರ ಬೈಕ್‍ಗೆ ನಕಲಿ ಕೀ ಹಾಕಿ, ಕಳ್ಳತನ ಮಾಡಲಾಗಿದೆ. ಯುವಕನನ್ನು ಕುಂದಾಪುರದ ಚೇತನ್ ಎಂದು ಗುರುತಿಸಲಾಗಿದ್ದು ಈಗ ಪೊಲೀಸರ ಅಥಿತಿಯಾಗಿದ್ದಾನೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ