BREAKING NEWS
Search

ಅತೃಪ್ತ ಶಾಸಕರು ಬಿಜೆಪಿಗೆ:ಶಿವಮೊಗ್ಗದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿಕೆ!

436

ಶಿವಮೊಗ್ಗ:-ಸಿದ್ದರಾಮಯ್ಯ ಬಿಜೆಪಿ ಆಪರೇಷನ್ ಫೇಲ್ ಅಂತಾ ಆರೋಪ ಮಾಡಿದ್ದರು.ಬಿಜೆಪಿ ಯಾವುದೇ ಆಪರೇಶನ್ ಕಮಲ ಮಾಡಿಲ್ಲ ಎನ್ನುವುದು ಈಗ ಸಾಬೀತಾಗಿದೆ.

ಅವರ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಯೋಗ್ಯತೆ ಅವರಿಗಿಲ್ಲ,ಬಿಜೆಪಿ ಮೇಲೆ ಆರೋಪ ಮಾಡುತ್ತಿರುವುದು ಎಷ್ಟೊಂದು ಸರಿ, ಸಿದ್ದರಾಮಯ್ಯಗೆ ನಾಚಿಗೆ ಆಗಬೇಕು ಎಂದು ಶಿವಮೊಗ್ಗ ದಲ್ಲಿ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಇಂದು ಶಿವಮೊಗ್ಗದ ಅವರ ನಿವಾಸದಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು ಅಲ್ಪಮತಕ್ಕೆ ಸರಕಾರ ಕುಸಿದಿದೆ,ಈ ಮೈತ್ರಿ ಸರ್ಕಾರ ಈ ಬಾರಿ ಮಾತ್ರ ಉಳಿಯುವುದಿಲ್ಲ ಶೀಘ್ರದಲ್ಲೇ ಪತನವಾಗಲಿದೆ,ಮೈತ್ರಿ ಸರ್ಕಾರದ ಅಸಮಾಧಾನ ದುರಾಡಳಿತಕ್ಕೆ ಕಾಂಗ್ರೆಸ್ ಜೆಡಿಎಸ್ ಶಾಸಕರು ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದರು.
ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿ ಸೇರುವ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು
ಲಕ್ಷ್ಮಿ ಹೆಬ್ಬಾಳ್ಕರ್ ಗೆ ಬಿಜೆಪಿ ಸೇರ್ಪಡೆಗೆ ಅವಕಾವಿಲ್ಲ ,
ಈ ಬಗ್ಗೆ ಯಡಿಯೂರಪ್ಪ ನವರು ಕೂಡಾ ಸ್ಪಷ್ಟನೆ ನೀಡಿದ್ದಾರೆ.

ದಿನವೂ ಒಂದೊಂದು ಸೃಷ್ಟಿ ಮಾಡಲಾಗುತ್ತಿದೆ ಎಂದು
ಕೆಲವು ಮಾದ್ಯಮಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಅತೃಪ್ತ ಶಾಸಕರು ಬಿಜೆಪಿಗೆ!

ಇನ್ನೂ ಅನೇಕ ಅತೃಪ್ತ ಶಾಸಕರು, ಕಾಂಗ್ರೆಸ್ ಜೆಡಿಎಸ್ ನಿಂದ ಹೊರ ಬರಲಿದ್ದಾರೆ,ಬಿಜೆಪಿ ಯಾವುದೇ ಶಾಸಕರು ಬೇರೆ ಪಕ್ಷಕ್ಕೆ ಸೇರ್ಪಡೆ ಇಲ್ಲ,ಬಿಜೆಪಿ ಶಾಸಕರು ಸಿಂಹದ ಮರಿಗಳು ಇದ್ದಹಾಗೆ,ನಮ್ಮವರು ಬೇರೆ ಪಕ್ಷಕ್ಕೆ ಹೋಗುವುದು ಇದು ಕೇವಲ ಊಹಾಪೋಹ ವಷ್ಟೇ ಎಂದರು.




One thought on “ಅತೃಪ್ತ ಶಾಸಕರು ಬಿಜೆಪಿಗೆ:ಶಿವಮೊಗ್ಗದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿಕೆ!

  1. Shankar B

    ಅತೃಪ್ತ ಶಾಸಕರು ಬಿಜೆಪಿಗೆ ಅಂತ ಟೈಟಲ್ ಏನು ಟಿ.ಆರ್.ಪಿ..ಗಾ? ನಾಯಕರು ಎಲ್ಲಿಯೂ ಹೇಳದ ಮಾತನ್ನು ನಿಮ್ಮ ಸುದ್ಧಿ ಮಾರ್ಕೆಟಿಂಗಿಗೆ ಬಳಸಿಕೊಳ್ಳೊದು ಎಷ್ಟು ಸರಿ? ಅನಗತ್ಯ ತಲೆಬರಹ/ತಲೆಹರಟೆ…

    Reply

Leave a Reply

Your email address will not be published. Required fields are marked *