BREAKING NEWS
Search

ಕುಂಸಿ ಠಾಣೆಯಲ್ಲಿ ಸೀಮಂತಮಾಡಿದ ಪೊಲೀಸ್ ಸಿಬ್ಬಂದಿ!ಲಾಠಿ ಹಿಡಿದ ಕೈ ಉಡಿ ತುಂಬಿತು

242

ಶಿವಮೊಗ್ಗ :- ಕುಂಸಿ ಪೊಲೀಸ್ ಠಾಣೆಯಲ್ಲಿ ಗರ್ಭಿಣಿಯಾಗಿರುವ ಮಹಿಳಾ ಸಿಬ್ಬಂದಿಗೆ ಇಂದು ಸಂಜೆ ಸೀಮಂತ ಕಾರ್ಯ ನಡೆದಿದೆ.

ಒಂಬತ್ತು ತಿಂಗಳ ಗರ್ಭಿಣಿಯಾಗಿರುವ ಮಹಿಳಾ ಪಿಸಿ ಕವಿತಾರವರಿಗೆ ಇದು ಎರಡನೇ ಮಗುವಿನ ಸೀಮಂತವಾಗಿದೆ.ಈ ಕಾರ್ಯಕ್ರಮದಲ್ಲಿ ಹೊರಗಡೆಯ ಮಹಿಳೆಯರನ್ನ ಕರೆಯಿಸಿ ಕವಿತಾರವರಿಗೆ ಮುಡಿ ತುಂಬಿಸಲಾಗಿದೆ. ಬಳೆ ಸೀರೆ ನೀಡಿ ಆಶೀರ್ವದಿಸಿದರು.

ಕವಿತಾರವರ ಪತಿ ಶಿವಕುಮಾರ್ ಹೊನ್ನಾಳಿ ತಾಲೂಕಿನ ಬೆಳಗುತ್ತಿಯಲ್ಲಿ ಶಿಕ್ಷಕರಾಗಿದ್ದಾರೆ. ನಿನ್ನೆಯವರೆಗೆ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕವಿತಾರಿಗೆ ಸದ್ಯದಲ್ಲಿಯೇ ಹೆರಿಗೆ ಆಗುವ ಸಂಭವ ಇದ್ದು ಈ ಸಂದರ್ಭದಲ್ಲಿ ಠಾಣೆಯ ಪಿಎಸ್ಐ ಜಗದೀಶ್ ಸೀಮಂತ ನಡೆಸಿರುವುದು ಕವಿತಾ ದಂಪತಿಗಳಲ್ಲಿ ಸಂತಸ ಮೂಡಿಸಿದೆ.

ಮನೆಯ ವಾತಾವರಣ ಮೂಡಿಸಲು ಪಿಎಸ್ಐ ಜಗದೀಶ್ ರವರು ಇಂತಹದ್ದೊಂದು ಕಾರ್ಯ ಕೈಗೊಂಡಿದ್ದಾರೆ. ದಿನಾ ಆಕ್ಸಿಡೆಂಟ್, ಕಳ್ಳತನ, ಊರಿನ ಪಂಚಾಯ್ತಿ ಇದೇ ಕಾರ್ಯದಲ್ಲಿ ಮುಳುಗಿಹೋಗುತ್ತಿದ್ದ ಪೊಲೀಸ್ ಠಾಣೆಯಲ್ಲಿ ಇಂತಹ ಕಾರ್ಯವೊಂದು ಸಿಬ್ಬಂದಿಗಳಲ್ಲಿ ಬದಲಾವಣೆ ಮತ್ತು ವಿಶ್ವಾಸ ಮೂಡಿಸುವ ಕೆಲಸ ಆಗಿದೆ.

ಶಿವಮೊಗ್ಗದ ತಹಶೀಲ್ದಾರ್ ಬಿ.ಎನ್ ಗಿರೀಶ್ ತಮ್ಮ ಮಹಿಳಾ ಸಿಬ್ಬಂದಿಯೊಬ್ಬರು ಗರ್ಭಿಣಿಯಾಗಿದ್ದಾಗ ಕಛೇರಿಯಲ್ಲಿ ಇದೇ ರೀತಿಯ ಸೀಮಂತ ಮಾಡಿಸಿದ್ದರು. ಇದು ಬಿಟ್ಟರೆ ಶಿವಮೊಗ್ಗ ಸರ್ಕಾರಿ ಕಚೇರಿಯಲ್ಲಿ ಇದು ಎರಡನೇ ಸೀಮಂತ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಠಾಣೆಯ 20 ಜನ ಸಿಬ್ಬಂದಿಗಳು ಭಾಗವಹಿಸಿ ಕವಿತಾರಿಗೆ ಆಶೀರ್ವದಿಸಿದರು.




Leave a Reply

Your email address will not be published. Required fields are marked *