BREAKING NEWS
Search

ಶಿವಮೊಗ್ಗ- ಬಾರ್ ಗಳಿಗೆ ಇಡಲಾಗಿರುವ ದೇವರುಗಳ ಹೆಸರುಗಳನ್ನು ಕೈ ಬಿಡಿ ಅಂದ್ರು ಮುಜರಾಯಿ ಸಚಿವ!

90

ಶಿವಮೊಗ್ಗ : ವೈನ್ ಸ್ಟೋರ್, ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ಇಡಲಾಗಿರುವ ದೇವರ ಹೆಸರುಗಳನ್ನು ಬದಲಾಯಿಸಿ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮನವಿ ಮಾಲೀಕರಲ್ಲಿ ಮಾಡಿಕೊಂಡಿದ್ದಾರೆ.

ಶಿವಮೊಗ್ಗದ ಊರಗಡೂರಿನ ಗುಡ್ಡೇಮರಡಿ ದೇವಾಲಯದ ಸಭಾಂಗಣದಲ್ಲಿ ಇಂದು ನಡೆದ ತಾಲೂಕು ದೇವಾಲಯ ಸಮಿತಿಯ ಸಮಾವೇಶಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು
ವೈನ್ ಸ್ಟೋರ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ಇಟ್ಟಿರುವ ದೇವರುಗಳ ಹೆಸರುಗಳನ್ನು ಬದಲಾಯಿಸಲು, ಸರ್ಕಾರ ಕಾನೂನನ್ನು ರೂಪಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದು ಕೆಲವರ ನಂಬಿಕೆ, ಭಾವನೆಗಳಿಗೆ ಸಂಬಂಧಪಟ್ಟ ವಿಚಾರವಾಗಿದೆ. ಆದರೂ ಈ ಹೆಸರುಗಳನ್ನು ಬದಲಾಯಿಸಿದರೆ ಒಳಿತು ಎಂದು ಅವರು, ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಬಗ್ಗೆ ನಾನು ಈ ಹಿಂದೆಯೇ ಪ್ರಸ್ತಾಪಿಸಿದ್ದೆ. ಹೆಸರುಗಳನ್ನು ಬದಲಾಯಿಸುವ ಬಗ್ಗೆ ಯೋಚಿಸಬಾರದು ಎಂದೇನಿಲ್ಲ. ಸಚಿವನಾಗಿ ಕೇವಲ ಮನವಿ ಮಾಡಿದ್ದೇನೆ ಅಷ್ಟೇ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.




Leave a Reply

Your email address will not be published. Required fields are marked *