ಸತತ ಎರಡು ದಿನದ ಕಾರ್ಯಾಚರಣೆ-400 ಅಡಿ ಆಳದ ಗಾಟಿಯಲ್ಲಿ ಬಿದ್ದಿದ್ದ ಲಾರಿ ಮೇಲಕ್ಕೆ

821
ಕುಮಟಾ ನಗರಸಭೆ ಪ್ರಕಟಣೆ.

ಶಿವಮೊಗ್ಗ :- ನಗರ ಹುಲಿಕಲ್ ಘಾಟ್​ನಲ್ಲಿ 400 ಅಡಿ ಪ್ರಪಾತಕ್ಕೆ ಬಿದ್ದ ಲಾರಿಯನ್ನು ಸತತ ಕಾರ್ಯಾಚರಣೆ ಮೂಲಕ ಮೇಲಕ್ಕೆ ತರಲಾಯಿತು.

ಸೆ.30ರ ಬೆಳಗ್ಗೆ ಕುಂದಾಪುರದಿಂದ ಶಿವಮೊಗ್ಗದ ಮಾಚೇನಹಳ್ಳಿಗೆ ಹೋಗುತ್ತಿದ್ದ ಕೋಕ್ ತುಂಬಿದ ಲಾರಿ ಹುಲಿಕಲ್ ಘಾಟ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ 400 ಅಡಿ ಪ್ರಪಾತಕ್ಕೆ ಉರುಳಿತ್ತು. ಲಾರಿ ಚಾಲಕ ಯೋಗೇಶ್ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು.

ಪ್ರಪಾತಕ್ಕೆ ಬಿದ್ದ ಲಾರಿಯನ್ನು ಶನಿವಾರ ಕ್ರೇನ್ ತರಿಸಿ ಮೇಲೆತ್ತಲು ಕಾರ್ಯಾಚರಣೆ ನಡೆಸಲಾಯಿತು. ಸತತ 8 ಗಂಟೆ ಕಾರ್ಯಾಚರಣೆ ಯಶಸ್ವಿಯಾಗುತ್ತಿದ್ದಂತೆ ರೋಪ್ ಕಟ್ಟಾಗಿ ಲಾರಿ ಮತ್ತೆ ಅರ್ಧದಷ್ಟು ಕೆಳಗೆ ಜಾರಿತ್ತು. ಅಲ್ಲಿಗೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಭಾನುವಾರ ಮತ್ತೆ 8 ಗಂಟೆ ಕಾರ್ಯಾಚರಣೆ ನಡೆಸಿದ ನಂತರ ಮಧ್ಯಾಹ್ನದ ವೇಳೆಗೆ ಲಾರಿಯನ್ನು ಸಂಪೂರ್ಣವಾಗಿ ಮೇಲೆತ್ತಲಾಗಿದೆ.

ಸ್ಥಳದಲ್ಲಿ ಎಎಸ್​ಐ ಬಿ.ಎಸ್.ಪಾಟೀಲ್ 10 ಜನ ಕಾರ್ವಿುಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Leave a Reply

Your email address will not be published. Required fields are marked *