ಶಿವಮೊಗ್ಗ-ಬೆಂಗಳೂರು ರೈಲು ಓಡಾಟ ಬಂದ್! ಬದಲಿ ಓಡಾಟದ ಸಮಯವೇನು?ಇಲ್ಲಿದೆ ಮಾಹಿತಿ

639

ಬೆಂಗಳೂರು/ಶಿವಮೊಗ್ಗ:-ತುಮಕೂರಿನಲ್ಲಿ ರೈಲ್ವೆ ಹಳಿ ಡಬ್ಲಿಂಗ್ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆ ಶಿವಮೊಗ್ಗ-ಬೆಂಗಳೂರು ಮಧ್ಯೆ ಒಂದು ವಾರ ರೈಲು ಓಡಾಟ ಸ್ಥಗಿತಗೊಳಿಸುತ್ತಿರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮೇ 22ರಿಂದ 29ರವರೆಗೆ ತುಮಕೂರು-ಗುಬ್ಬಿ ಮಾರ್ಗದಲ್ಲಿ ಡಬ್ಲಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆ ರೈಲು ಓಡಾಟ ಸ್ಥಗಿತಗೊಳಿಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡಬ್ಲಿಂಗ್ನಿಂದಾಗಿ ಶಿವಮೊಗ್ಗದಿಂದ ಬೆಂಗಳೂರಿಗೆ ಸಂಚರಿಸುವ ರೈಲುಗಳು ಮತ್ತು ತಾಳಗುಪ್ಪಾದಿಂದ ಬೆಂಗಳೂರಿಗೆ ಪ್ರಯಾಣಿಸುವ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಯಾವ ರೈಲುಗಳು ಬಂದ್ ಬದಲಿ ಸಮಯವೇನು ಇಲ್ಲಿದೆ ಮಾಹಿತಿ:-

ಗಾಡಿ ನಂ. 56227 – ಬೆಂಗಳೂರು – ಶಿವಮೊಗ್ಗ ಟೌನ್ ಪ್ಯಾಸೇಂಜರ್ ರೈಲು – ಮೇ 23 ರಿಂದ 29 ರವರೆಗೆ ರದ್ದುಗೊಳಿಸಲಾಗಿದೆ.
ಗಾಡಿ ನಂ. 56228 – ಶಿವಮೊಗ್ಗ – ಬೆಂಗಳೂರು ಪ್ಯಾಸೆಂಜರ್ ರೈಲು – ಮೇ 23 ರಿಂದ 29 ರವರೆಗೆ ರದ್ದುಗೊಳಿಸಲಾಗಿದೆ.
ಗಾಡಿ ನಂ. 20651 – ಬೆಂಗಳೂರು – ತಾಳಗುಪ್ಪ ಎಕ್ಸ್ ಪ್ರೆಸ್ ರೈಲು – ಮೇ 23 ರಿಂದ 29 ರವರೆಗೆ ರದ್ದುಗೊಳಿಸಲಾಗಿದೆ.

ಗಾಡಿ ನಂ. 20652 ತಾಳಗುಪ್ಪ – ಬೆಂಗಳೂರು ಎಕ್ಸ್ ಪ್ರೆಸ್ ರೈಲು – ಮೇ 23 ರಿಂದ 29 ರವರೆಗೆ ರದ್ದುಗೊಳಿಸಲಾಗಿದೆ.

ಗಾಡಿ ನಂ. 16579 ಯಶವಂತಪುರ – ಶಿವಮೊಗ್ಗ ಟೌನ್ ರೈಲು – ಮೇ 25 ರಿಂದ 27 ರವರೆಗೆ ರದ್ದುಗೊಳಿಸಲಾಗಿದೆ.

ಗಾಡಿ ನಂ. 16580 ಶಿವಮೊಗ್ಗ ಟೌನ್ – ಯಶವಂತಪುರ ರೈಲು – ಮೇ 25 ರಿಂದ 27 ರವರೆಗೆ ರದ್ದುಗೊಳಿಸಲಾಗಿದೆ.

ಇನ್ನು ಬೆಂಗಳೂರು-ಶಿವಮೊಗ್ಗ ರೈಲು ಮಾರ್ಗ ಅಭಿವೃದ್ಧಿ ಹಿನ್ನೆಲೆಯಲ್ಲಿ, ತಾಳಗುಪ್ಪ – ಬೆಂಗಳೂರು ಇಂಟರ್ ಸಿಟಿ ರೈಲು ಸಮಯವನ್ನು ಬದಲಾಯಿಸಿ, 7.40 ಕ್ಕೆ ಹೊರಡುವಂತೆ, ಆದೇಶ ನೀಡಲಾಗಿತ್ತು. ಆದರೆ, ಈ ಆದೇಶ ಇದೀಗ ಹಿಂಪಡೆಯಲಾಗಿದೆ.

ಈಗ ಈ ರೈಲು ಎಂದಿನಂತೆ, 6.40 ಕ್ಕೆ ಹೊರಡಲಿದ್ದು, ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ.




Leave a Reply

Your email address will not be published. Required fields are marked *

error: Content is protected !!