BREAKING NEWS
Search

ಸಾಗರದ ಸಿಗಂದೂರು ಸೇತುವೆ ನಿರ್ಮಾಣಕ್ಕೆ 36 ತಿಂಗಳ ಗಡುವು! ಸಂಸದರು ಸೇತುವೆ ಕುರಿತು ಹೇಳಿದ್ದು ಹೀಗೆ.

901

ಶಿವಮೊಗ್ಗ : ಸಾಗರ ತಾಲೊಕಿನ ಅಂಬಾರಗೋಡ್ಲುವಿನಲ್ಲಿ ನಿರ್ಮಾಣವಾಗುತ್ತಿರುವ ತುಮರಿ ಸೇತುವೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಇಂದು ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಸಂಸದ ರಾಘವೇಂದ್ರ ಈ ಸೇತುವೆ ಸುಮಾರು 423.150 ಕೋಟಿ ವೆಚ್ಚದಲ್ಲಿ 2.425 ಕಿ.ಮೀ. ಉದ್ದ ಮತ್ತು 16 ಮೀ. ಅಗಲದಲ್ಲಿ ನಿರ್ಮಾಣವಾಗುತ್ತಿದೆ.

ಮಧ್ಯಪ್ರದೇಶ ಮೂಲದ ಕಂಪನಿ ಈ ಕಾಮಗಾರಿಯ ಟೆಂಡರ್ ಪಡೆದಿದ್ದು, ಮುಂದಿನ 10 ವರ್ಷ ಸೇತುವೆಯನ್ನು ನಿರ್ವಹಣೆ ಮಾಡಲಿದೆ ಎಂದರು.

ಇನ್ನು ಅಂಬಾರಗೋಡ್ಲುವಿನಿಂದ ಸೇತುವೆಯವರೆಗೆ 1.ಕಿ.ಮೀ. ಮತ್ತು ಕಳಸವಳ್ಳಿ ದಡದಲ್ಲಿ 4 ಕಿ.ಮೀ. ರಸ್ತೆಯನ್ನು ಸಂಬಂಧಪಟ್ಟ ಕಂಪನಿ ಅಭಿವೃದ್ಧಿ ಮಾಡಲಿದೆ, ಸೇತುವೆ ಕಾಮಗಾರಿ ನಿರ್ಮಾಣಕ್ಕೆ 36 ತಿಂಗಳ ಗಡುವು ನೀಡಲಾಗಿದೆ ಎಂದರು.
ಸದ್ಯ ಸೇತುವೆ ನಿರ್ಮಾಣ ಕಾಮಗಾರಿ ಬರದಿಂದ ಸಾಗುತಿದ್ದು ಹಲವು ದಶಕದ ಹೋರಾಟ ಕೂಡ ಈಭಾಗದ ಜನ ಮಾಡಿದ್ದರು.

ಶೀಘ್ರದಲ್ಲಿ ಸೇತುವೆ ನಿರ್ಮಾಣವಾದಲ್ಲಿ ತುಂಬರಿ ಸೇರಿದಂತೆ ಸುತ್ತಮುತ್ತಲ ಜನರಿಗೆ ಅನುಕೂಲವಾಗಲಿದ್ದು ಪ್ರವಾಸಿಗರಿಗೂ ಹೆಚ್ಚಿನ ಅನುಕೂಲ ಆಗಲಿದೆ.

ಇಂದು ಈ ಕುರಿತು ಸಂಸದರು ಸ್ಥಳ ವೀಕ್ಷಣೆ ನೆಡೆಸಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ತಾಂತ್ರಿಕ ಸಲಹೆಗಾರರಾದ ರಮೇಶ್, ಶ್ರೀ ನಾಗರಾಜಯ್ಯ, ಶ್ರೀ ಪೀರ್ ಪಾಷ, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್, ಮತ್ತಿತರರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *