BREAKING NEWS
Search

ತನ್ನ ಸ್ನೇಹಿತನ್ನು ಬದುಕಿಸಿಕೊಳ್ಳಲು ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಮನವಿ ಮಾಡಿದ ಸಾಗರದ ಯುವಕ!

439

ಶಿವಮೊಗ್ಗ : ಸೌದಿ ಅರೇಬಿಯಾದಲ್ಲಿ ಕಳೆದ 6 ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯವಾಗಿ ಅಖ್ತರ್ ಅಹಮದ್ ಎಂಬ ಯುವಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಈ ಯುವಕನಿಗೆ ಸಹಾಯ ಮಾಡುವಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ಯುವಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಉತ್ತರ ಪ್ರದೇಶ ಲಖ್ನೋ ಮೂಲದ ಅಖ್ತರ್ ಅಹಮದ್ ಎಂಬ ಯುವಕ ಹಾಗು ಸಾಗರದ ಶಕೀಲ್ ಅಹಮದ್ ಎಂಬುವರು ಸೌದಿ ಅರೇಬಿಯಾದ ರಿಯಾದ್ ನಗರದಲ್ಲಿ ಹೋಟೆಲ್ ವೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಇಬ್ಬರು ಸ್ವದೇಶಕ್ಕೆ ಬಂದು ಮತ್ತೆ ವಾಪಸ್ಸಾಗಿದ್ದರು.

ಆದರೆ ಕಳೆದ 6 ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಲಖ್ನೋದ ಅಖ್ತರ್ ಅಹಮದ್ ತೀವ್ರ ಗಾಯದಿಂದ ನರಳುತ್ತಿದ್ದಾನೆ. ಈಗಾಗಿ ಈತನನ್ನು ಸ್ವದೇಶಕ್ಕೆ ಕರೆಯಿಸಿಕೊಳ್ಳಲು ಪ್ರಧಾನಿಯವರು ನೆರವು ನೀಡಲಿ ಎಂದು ಯುವಕ‌ ಟ್ವೀಟ್ ಮೂಲಕ ಮನವಿ‌ ಮಾಡಿದ್ದಾನೆ.




Leave a Reply

Your email address will not be published. Required fields are marked *