BREAKING NEWS
Search

ಮಡಸೂರು-ಕರ್ನಾಟಕ ಗ್ರಾಮೀಣ ಬ್ಯಾಂಕ್ ಹೊಸ ಕಚೇರಿ ಉದ್ಘಾಟನೆ.

190

ಶಿವಮೊಗ್ಗ :- ಸಾಗರ ತಾಲೂಕಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಡಸೂರು ಲಿಂಗದಹಳ್ಳಿ ಶಾಖೆಯನ್ನು ಶ್ರೀ ಗಂಗಾಧರ ರೈಸ್ ಮಿಲ್ ಎದುರುಭಾಗದ ನೂತನ ಕಟ್ಟಡಕ್ಕೆ ಇಂದು ಸ್ಥಳಾಂತರ ಮಾಡಲಾಯಿತು.

ನೂತನ ಕಟ್ಟಡ ಉದ್ಘಾಟನೆಯನ್ನು ಪ್ರಾದೇಶಿಕ ಕಚೇರಿಯ ಮುಖ್ಯ ವ್ಯವಸ್ಥಾಪಕರಾದ ವಿ.ಸತೀಶ್ ನೆರವೇರಿಸಿದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಬಂಗಾರಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧಿಕಾರಿಗಳಾದ ಬಿ. ಆರ್. ಶಂಕರಪ್ಪ , ಶ್ರೀನಾಥ್ , ಪರಸಪ್ಪ , ಸಸಿಕಾಂತ್ ಕಾಂಬಳೆ ಉಪಸ್ಥಿತಿತರಿದ್ದರು.

ಸಾಗರ ತಾಲೂಕು ಆರ್ಥಿಕ ಸಾಕ್ಷರತೆಯ (FLC) ಅಧಿಕಾರಿ ಪುಷ್ಪಾ ಶೆಟ್ಟಿರವರು ಬ್ಯಾಂಕ್ ಸೌಲಭ್ಯಗಳ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಖಾ ವ್ಯವಸ್ಥಾಪಕರಾದ ರವೀಂದ್ರ ಎಸ್ ನಾಯಕ್ ಎಲ್ಲರನ್ನು ಸ್ವಾಗತಿಸಿದರು ಹಾಗೂ ವಂದನಾರ್ಪಣೆಯನ್ನು ನಿತ್ಯಾನಂದ ಪ್ರಭು ನೆರವೇರಿಸಿದರು.
Leave a Reply

Your email address will not be published. Required fields are marked *