ಸಾಗರದಲ್ಲಿ ಖಾಸಗಿ ಶಾಲೆಯಿಂದ ಪೊಷಕರಿಗೆ ಫೀಸ್ ಕಟ್ಟಲು ಒತ್ತಡ-ವೀಡಿಯೋ ಮಾಡಿ ಮಕ್ಕಳನ್ನು ಡ್ರಾಪ್ ಔಟ್ ಲೀಸ್ಟ್ ನಲ್ಲಿ ಸೇರಿಸುವ ಬೆದರಿಕೆ.

1331

ಶಿವಮೊಗ್ಗ:- ಕರೋನಾ ದಿಂದ ಇಡೀ ಸಮುದಾಯವೇ ಆರ್ಥಿಕ ನಷ್ಟದಿಂದ ತೊಂದರೆಗೊಳಗಾಗಿದೆ.ಸಾವಿರಾರು ಜನರು ಉದ್ಯೋಗ ಕೂಡ ಕಳೆದುಕೊಂಡು ಮುಂದಿನ ಜೀವನ ಏನೆಂಬ ಪ್ರಶ್ನೆಯಲ್ಲಿದ್ದಾರೆ.

ಇನ್ನು ರಾಜ್ಯ ಸರ್ಕಾರ ಕೂಡ ಶಾಲೆ ಪ್ರಾರಂಭಮಾಡಬೇಕಾ ಬೇಡವೇ ಎಂಬ ಗೊಂದಲದಲ್ಲಿ ಇದೆ. ಹೀಗಾಗಿ ಶಿಕ್ಷಣ ಸಚಿವರು ಕೂಡ ಹಲವು ಸೂಚನೆ ಮಾರ್ಗದರ್ಶನ ನೀಡುತಿದ್ದು ಕೆಲವೇ ದಿನದ ಹಿಂದ ಶಾಲೆ ಪ್ರಾರಂಭದ ಬಗ್ಗೆ ಶಾಸಕರ ಅಭಿಪ್ರಾಯ ಸಹ ಪಡೆದಿದ್ದು ನಿರ್ಧಾರ ಮಾಡವ ಇಕ್ಕಟ್ಟಿನಲ್ಲಿದ್ದಾರೆ.

ಇನ್ನು ಈ ತಿಂಗಳ ಕೊನೆಯಲ್ಲಿ ಪೊಷಕರಿಗೆ ಭಾರವಾಗದಂತೆ ಖಾಸಗಿ ಶಾಲೆಗಳು ಶುಲ್ಕ ತೆಗೆದುಕೊಂಡು ದಾಖಲಾತಿ ಮಾಡಿಸಿಕೊಳ್ಳಲು ಅವಕಾಶ ನೀಡಿದೆ. ಆದರೇ ಯಾವ ಪೊಷಕರಿಗೂ ಬಲವಂತ ಅಥವಾ ಒತ್ತಡ ಹೇರಿ ಹಣ ಸಂಗ್ರಹಿಸುವಂತಿಲ್ಲ.

ಪೊಷಕರಿಗೆ ವಿದ್ಯಾರಣ್ಯ ಶಾಲೆಯ ಮುಖ್ಯ ಶಿಕ್ಷಕಿ ವೀಡಿಯೋ ಮಾಡಿ ಆಡಿದ ಮಾತುಗಳ ವೀಡಿಯೋ ಇಲ್ಲಿದೆ:-

ಪೊಷಕರು ಕಂತುಗಳ ಪ್ರಕಾರ ಹಣ ಸಂಗ್ರಹಿಸಬಹುದಾಗಿದೆ.ಆದರೇ ಇದನ್ನೇ ಬಂಡವಾಳವಾಗಿಟ್ಟುಕೊಂಡ ಹಲವು ಖಾಸಗಿ ಶಾಲೆಗಳು ಪೊಷಕರ ಮೇಲೆ ಒತ್ತಡ ಹೇರುತ್ತಿದೆ. ಜೊತೆಗೆ ಈ ವರ್ಷದ ಶುಲ್ಕ ಕಟ್ಟದಿದ್ದಲ್ಲಿ ಡ್ರಾಪ್ ಔಟ್ ಲೀಸ್ಟ್ ನಲ್ಲಿ ಇಡುವ ಹಾಗೂ ಶಾಲೆಯಿಂದ ಹೊರಗೆ ಇಡುವ ದಮ್ಕಿ ಹಾಕುತ್ತಿದೆ.

ಸಾಗರದ ರಾಣಿ ಚನ್ನಮ್ಮ ವೃತ್ತದ ಬಳಿ ಇರುವ ವಿದ್ಯಾರಣ್ಯ ಪ್ರಾಥಮಿಕ ಶಾಲೆಯು ಯು.ಕೆ.ಜಿ ಇಂದ ಏಳನೇ ತರಗತಿ ವರೆಗೆ ಶಾಲೆ ನಡೆಸುತ್ತಿದೆ. ಪ್ರತಿ ತರಗತಿಯಲ್ಲಿ 35 ರಿಂದ 40 ವಿದ್ಯಾರ್ಥಿಗಳು ಓದುತಿದ್ದು 11 ಜನ ಶಿಕ್ಷರಿದ್ದಾರೆ. ಲಾಕ್ ಡೌನ್ ನಿಂದ ಈವರೆಗೂ ಶಾಲೆ ಪ್ರಾರಂಭವಾಗಿಲ್ಲ. ಆದರೇ ವಾಟ್ಸ್ ಅಪ್ ಮೂಲಕ ದಿನಕ್ಕೆ ಎರಡು ಭಾರಿ ಮಕ್ಕಳಿಗೆ ಮೆಸೇಜ್ ಕಳುಹಿಸಿ ಹೋಮ್ ವರ್ಕ ಮಾತ್ರ ಮಾಡಿಸುತಿದ್ದು ಆನ್ ಲೈನ್ ಕ್ಲಾಸ್ ಸಹ ಮಾಡುತಿಲ್ಲ.

ಈ ನಡುವೆ ಸರ್ಕಾರ ಖಾಸಗಿ ಶಾಲೆಗಳಿಗೆ ಫೀಸ್ ಪಡೆಯಲು ಸೂಚನೆ ನೀಡುತಿದ್ದಂತೆ ಇದನ್ನೇ ಬಂಡವಾಳವಾಗಿಸಿಕೊಂಡಿರುವ ಈ ಶಾಲೆ ಪೊಷಕರಿಗೆ ಫೀಸ್ ಕಟ್ಟುವಂತೆ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಶಾಲೆಯ ಮಾಲೀಕರ ಪತ್ನಿಯಾಗಿರುವ
ರತ್ನಾವತಿ ಯವರು ವೀಡಿಯೋ ಮಾಡಿ ಪೊಷಕರಲ್ಲಿ ಫೀಸ್ ಕಟ್ಟುವಂತೆ ವಿನಂತಿಸಿದ್ದಾರೆ. ಈ ವಿನಂತಿಯಲ್ಲಿ ಸಂಪೂರ್ಣ ಶುಲ್ಕ ಕಟ್ಟದಿದ್ದಲ್ಲಿ ಅಂತಹ ಪೊಷಕರ ಮಕ್ಕಳನ್ನು ಡ್ರಾಪ್ ಔಟ್ ಲೀಸ್ಟ್ ನ ಪಟ್ಟಿಯಲ್ಲಿ ಸೇರಿಸುವ ಬೆದರಿಕೆ ಹಾಕಿ ಎಲ್ಲಾ ಪೊಷಕರಿಗೆ ವಾಟ್ಸ್ ಅಪ್ ನಲ್ಲಿ ಕಳುಹಿಸಿದ್ದಾರೆ.

ಇನ್ನು ಕೆಲವು ಪೊಷಕರನ್ನು ಶಾಲೆಗೆ ಕರೆಸಿ ಶುಲ್ಕವನ್ನು ಸಂಪೂರ್ಣ ಕಟ್ಟಬೇಕು ಇಲ್ಲವಾದರೇ ಶಾಲೆ ಬಿಟ್ಟ ಮಕ್ಕಳ ಪಟ್ಟಿಯಲ್ಲಿ ನಿಮ್ಮ ಮಕ್ಕಳ ಹೆಸರನ್ನು ಸೇರಿಸುತ್ತೇವೆ,ಇದರಿಂದ ನಿಮ್ಮ ಮಕ್ಕಳ ಭವಿಷ್ಯ ಹಾಳಾಗಲಿದೆ ಎಂದು ಹೆದರಿಸಿದ್ದಾರೆ.

ಇನ್ನು ಈ ಶಾಲೆಯಲ್ಲಿ ಎಲ್.ಕೆಜಿ, ಯು.ಕೆಜಿ ಗೆ ಪ್ರತಿ ವರ್ಷ ಎಂಟು ಸಾವಿರ ಶುಲ್ಕವಿದೆ. ಒಂದರಿಂದ ಏಳನೇ ತರಗತಿ ಮಕ್ಕಳಿಗೆ ಹತ್ತು ಸಾವಿರ ಶುಲ್ಕ ವಿದೆ.

ಶಾಲೆಯ ಆಡಳಿತ ಕಡ್ಡಾಯವಾಗಿ ಶುಲ್ಕ ಕಟ್ಟುವ ಬೆದರಿಕೆ ಒಡ್ಡಿದ್ದರಿಂದ ಪೊಷಕರು ಹಣ ಕಟ್ಟಲು ಮುಂದಾಗುತಿದ್ದಾರೆ. ಇನ್ನು ಕೆಲವರು ಅರ್ಧ ಹಣ ಕಟ್ಟಲು ಅವಕಾಶ ಮಾಡಿಕೊಡುವಂತೆ ಕೇಳಿದರೂ ಮಕ್ಕಳ ಭವಿಷ್ಯಕ್ಕಿಂತ ಇವರಿಗೆ ಹಣ ಮುಖ್ಯವಾಗಿದ್ದು ಮಕ್ಕಳ ಭವಿಷ್ಯದ ಮೇಲೆ ಕೊಡಲಿ ಪೆಟ್ಟು ಕೊಡಲು ಹೊರಟಿದೆ.

ಈ ಕುರಿತು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮೌಕಿಕ ದೂರು ನೀಡಲಾಗಿದ್ದು ಇದರ ಜೊತೆ ಶಿಕ್ಷಣ ಸಚಿವರಿಗೂ ಇವರು ಪೊಷಕರಿಗೆ ಶುಲ್ಕ ಕಟ್ಟುಲು ಬೆದರಿಕೆ ಹಾಕಿರುವ ವೀಡಿಯೋ ಕಳುಹಿಸಿಕೊಡಲಾಗಿದೆ.

ಇಂತಹ ಹಣಬಾಕ ಶಿಕ್ಷಣ ಸಂಸ್ಥೆ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಾಗಿದೆ.ಜನ ಕರೋನಾ ದಿಂದ ಸಂಕಷ್ಟದಲ್ಲಿದ್ದರೂ ಇಂತಹ ಶಿಕ್ಷಣ ಸಂಸ್ಥೆಗಳಿಂದ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಸಾಗರದ ಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದ್ದು ಕಾದುನೋಡಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ