BREAKING NEWS
Search

ಶಿವಮೊಗ್ಗ-1000 ಮೀಟರ್ ಅದ್ದೂರಿ ತಿರಂಗ ಮೆರವಣಿಗೆ

180

ಶಿವಮೊಗ್ಗ : 71ನೇ ಗಣರಾಜ್ಯೋತ್ಸವ ಅಂಗವಾಗಿ ಲಯನ್ಸ್ ಕ್ಲಬ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ತಾಲೂಕಿನ ಆನವಟ್ಟಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 1000ಮೀಟರ್ ಉದ್ದದ ತಿರಂಗ ಮೆರವಣಿಗೆ ಜನರ ಮೆಚ್ಚುಗೆ ಪಾತ್ರವಾಗುವ ಜೊತೆಗೆ ಭಾವೈಕ್ಯತೆಗೆ ಸಾಕ್ಷಿಯಾಯಿತು.

ಸೊರಬ ತಾಲೂಕಿನ ಆನವಟ್ಟಿ ಗ್ರಾಮದಲ್ಲಿ 71ನೇ ಗಣರಾಜ್ಯೋತ್ಸವ ಅಂಗವಾಗಿ ಲಯನ್ಸ್ ಕ್ಲಬ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ 1000ಮೀಟರ್ ಉದ್ದದ ತಿರಂಗ ರ್ಯಾಲಿ ನಡೆಸಲಾಯಿತು.

ಇಲ್ಲಿನ ರಾಜ್ಯ ಹೆದ್ದಾರಿ ಪಕ್ಕದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮೈದಾನದಿಂದ ಆರಂಭವಾದ ಮೆರವಣಿಗೆ ಬಸ್ ನಿಲ್ದಾಣ ಮಾರ್ಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪುನಃ, ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣಕ್ಕೆ ಕರೆ ತಂದು ಗೌರವ ವಂದನೆಗಳನ್ನು ಸಲ್ಲಿಸಲಾಯಿತು. ಮೆರವಣಿಗೆ ಆಗಮಿಸುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಸಾರ್ವಜನಿಕರು ಧ್ವಜಕ್ಕೆ ವಂದನೆ ಸಲ್ಲಿಸಿದರು.

ವಾಹನ ಸವಾರರು ಕೆಲ ಕಾಲ ಮೆರವಣಿಗೆ ಸಂಚರಿಸಲು ಅನುವು ಮಾಡಿಕೊಟ್ಟರು. ಪೊಲೀಸ್ ಇಲಾಖೆಯು ಸಹ ತಿರಂಗ ಆಗಮಿಸುವ ಮಾರ್ಗದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ 1000 ಮೀಟರ್ ಉದ್ದದ ತಿರಂಗ ಮೆರವಣಿಗೆಯನ್ನು ಆಯೋಜಿಸಿದ ಸಂಘ-ಸಂಸ್ಥೆಗಳ ಕಾರ್ಯ ವೈಖರಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು.

ಆನವಟ್ಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಜಿ. ಗಿರೀಶ್, ಕಾರ್ಯದರ್ಶಿ ಶಿಲ್ಪ ಅನೂಪ್, ಬಿ. ಮಲ್ಲಿಕಾರ್ಜುನಪ್ಪ, ಶಿವಪ್ರಸಾದ್, ಹರ್ಷಾ, ವಿ.ಪಿ. ಸುರೇಶ್, ಹರ್ಷವರ್ಧನ, ವಿಜಯ ಕುಮಾರ್, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಪ್ರಮುಖರಾದ ಎ.ಎಲ್. ಅರವಿಂದ್, ಗುರುಗೌಡ ಬಾಸೂರು, ಉಮೇಶ್ ಉಡುಗಣಿ, ಜೆ.ಎಸ್. ಚಿದಾನಂದಗೌಡ, ಎಂ.ಬಿ. ರಾಮಚಂದ್ರ ಶೆಟ್ಟಿ, ವೀರೇಶ್ ಮೇಸ್ತ್ರಿ, ಸಿ. ದಿನೇಶ್ ಗೌಡ, ಅಮೃತ್ ಗೌಡ ಮಳಲಗದ್ದೆ, ಶಿವಪ್ರಸಾದ್, ಸುಧಾ ಕುಬುಸದ್, ಗೋಪಾಲ ಕೃಷ್ಣ, ಶ್ರೀಕಾಂತ ಗೌಡ, ಗಜಾನನರಾವ್ ಉಳವಿ, ಯೋಗೇಶ್ ವಕೀಲ, ಪಿಎಸ್ಐ ಅರವಿಂದ್, ವಲಯ ಅರಣ್ಯಾಧಿಕಾರಿ ಜಾವದ್ ಭಾಷಾ ಸೇರಿದಂತೆ ಆಟೋ ಚಾಲಕರ ಸಂಘ, ಕರವೇ, ಶ್ರೀ ಬಾಲಾಜಿ ನೃತ್ಯ ಶಾಲೆ, ಶ್ರೀ ದ್ರೋಣ ಟ್ರಸ್ಟ್, ವಿಶ್ವ ಭಾರತಿ ಟ್ರಸ್ಟ್, ಹೋಪ್ ಫೌಂಡೇಶನ್, ಸುಮುಖ ಐಟಿಐ ಕಾಲೇಜ್, ವಾಸವಿ ಸಮಾಜ, ಪತ್ರಕರ್ತರ ಸಂಘ, ಗ್ರಾಮ ಪಂಚಾಯ್ತಿ, ವಾಹನ ಚಾಲಕರ ಸಂಘ, ಗ್ರಾಮೀಣ ಜನ ಸೇವಾ ಸಂಸ್ಥೆ, ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಡಿಯೋ ನೋಡಲು ಲಿಂಕ್ ಗೆ ಕ್ಲಿಕ್ ಮಾಡಿ:-

https://youtu.be/dr5Mg4FHR2Y
Leave a Reply

Your email address will not be published. Required fields are marked *