BREAKING NEWS
Search

ಸೊರಬ ಶಿಗ್ಗಾದಲ್ಲಿ ಹೋರಿ ಬೆದರಿಸುವ ಹಬ್ಬ ಹೇಗಿತ್ತು ಗೊತ್ತಾ? ವಿಡಿಯೋ ಸಹಿತ ಸುದ್ದಿ ನೋಡಿ

812

ಸೊರಬ: ತಾಲೂಕಿನ ಶಿಗ್ಗಾ ಗ್ರಾಮದಲ್ಲಿ ಶ್ರೀ ಹವಳಾಂಬಿಕಾ ಯುವಕ ಸಮಿತಿಯಿಂದ ಗುರುವಾರ ದಂದು ಜನಪದ ಕ್ರೀಡೆ ಭಾರಿ ಹೋರಿ ಬೆದರಿಸುವ ಹಬ್ಬ ನೋಡುಗರ ಕಣ್ಮನ ಸೆಳೆಯಿತು.
ಗ್ರಾಮದಲ್ಲಿ ಬೆಳಗ್ಗೆ ೯ ರಿಂದ ಸಂಜೆ ೪ರವರೆಗೆ ಹೋರಿ ಬೆದರಿಸುವ ಹಬ್ಬ ನಡೆಯಿತು.

ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು, ವಿವಿಧ ಜಿಲ್ಲೆಗಳಿಂದ ಸುಮಾರು ೨೫ ಸಾವಿರ ಮಂದಿ ಹೋರಿ ಪ್ರಿಯರು ಆಗಮಿಸಿದ್ದರು.

ಹೊರಿ ಬೆದರಿಸುವ ವಿಡಿಯೋ ನೋಡಿ:-

ಇತ್ತ ಹೋರಿಗಳು ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಓಡುತ್ತಿದ್ದರೆ, ಮತ್ತೊಂದಡೆ ಪೈಲ್ವಾನರು ಹೋರಿಗಳನ್ನು ಹಿಡಿಯಲು ಸೆಣಸುತ್ತಿದ್ದ ದೃಶ್ಯ ರೋಮಾಂಚನಗೊಳಿಸಿತು.

ಪ್ರೇಕ್ಷಕರಿಂದ ಕೇಕೇ, ಶಿಳ್ಳೆಗಳು ಜೋರಾಗಿಯೇ ಕೇಳಿ ಬರುತ್ತಿತ್ತು.
ಹೋರಿಗಳ ಮಾಲೀಕರು ಹೋರಿಗಳಿಗೆ ಬಗೆ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಬಲೂನುಗಳು ಹಾಗೂ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಚಿನ್ನಾಟದ ಚಲುವ, ಶಾಂತಗೇರಿ ಡೇಂಜರ್ ಗೂಳಿ, ಮಂಚಿಕೊಪ್ಪದ ಪೀಪಿ ಬಾಯ್ಸ್, ತಡಸನಹಳ್ಳಿಯ ಕೊಲೆಗಾರ, ಹರಗಿ ಚಿನ್ನಾಟದ ಗೂಳಿ, ತಡಸನಹಳ್ಳಿ ಸುನಾಮಿ, ಈಸೂರು ಧಂಗೆ, ಹುಣಸೆಕಟ್ಟೆ ಜೈಹನುಮ, ಹಂಸಭಾವಿ ಐರಾವತ, ಹಾವೇರಿಕಾ ರಾಜ, ಯಲವಳ್ಳಿ ಕಂಸ, ಸೊರಬದ ರಾವಣ, ಕುಪ್ಪಗಡ್ಡೆ ಕಿಂಗ್, ನರಸಾಪುರ ಕಿಂಗ್, ಬಳ್ಳಿಗಾವಿ ಗುಜ್ಜರ್, ಮಲ್ಲಾಪುರದ ಏಳುಕೋಟಿ ಎಕ್ಸ್‌ಪ್ರೆಸ್, ಕಲ್ಲಕೊಪ್ಪದ ಬಡವ ಸಾಕಿದ ಬಹುದ್ದೂರ್ ಹುಲಿ, ಶಿಗ್ಗಾದ ರಣಬೇಟೆಗಾರ, ಗಿಣಿವಾಲದ ಉಗ್ರನರಸಿಂಹ ಸೇರಿ ವಿವಿಧ ಹೆಸರಿನ ಸುಮಾರು ೩೦೦ ಹೋರಿಗಳು ಅಖಾಡದಲ್ಲಿ ಓಡಿದವು.

ಶ್ರೀ ಹವಳಾಂಬಿಕಾ ಯುವಕ ಸಮಿತಿಯವರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡಿದ್ದರು.

ಅಖಾಡದಲ್ಲಿ ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ.

ಸಮಿತಿಯವರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಆಧ್ಯತೆ ನೀಡಿದ್ದರು. ಜೊತೆಗೆ ಪ್ರೇಕ್ಷಕರಿಗೆ ಹಬ್ಬ ವೀಕ್ಷಿಸಲು ಟ್ರಾಕ್ಟರ್‌ಗಳ ಟ್ರ್ಯಾಲಿಯನ್ನು ಬೇಲಿಯ ಪಕ್ಕದಲ್ಲಿ ಜೋಡಿಸಿದ್ದರು.

ಸೊರಬ ತಾಲೂಕಿನ ಶಿಗ್ಗಾ ಗ್ರಾಮದಲ್ಲಿ ಏರ್ಪಡಿಸಿದ್ದ ಜನಪದ ಕ್ರೀಡೆ ಸಾಂಪ್ರಾದಯಿಕ ಹೋರಿ ಬೆದರಿಸುವ ಹಬ್ಬದಲ್ಲಿ ಅಖಾಡದಲ್ಲಿ ಓಡುತ್ತಿರುವ ಹೋರಿಯನ್ನು ಹಿಡಿಯಲು ಸೆಣಸುತ್ತಿರುವ ಪೈಲ್ವಾನರು.

ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.




Leave a Reply

Your email address will not be published. Required fields are marked *