BREAKING NEWS
Search

ಮೈದಾನ ಕುಲ್ಲಾ ಬಿಟ್ಟಿರುವೆ: ಎರಡೂ ಪಕ್ಷದವರನ್ನು ಸೇರಿಸಿ ಯದ್ದಕ್ಕೆ ಸಿದ್ದನಾಗಿರುವೆ ಜಯ ನನ್ನದೇ-ಹೆಬ್ಬಾರ್!

1349

ಕಾರವಾರ :-ಕಾಂಗ್ರೆಸ್ ,ಬಿಜೆಪಿ ಪಕ್ಷದ ಎರಡೂ ಕಾರ್ಯಕರ್ತರನ್ನು ಸೇರಿಸಿ ಯುದ್ದಕ್ಕೆ ಸಿದ್ದವಾಗುತಿದ್ದೇನೆ,ವಿರೋಧಿಗಳು ಏನು ಬೇಕಾದ್ರು ಮಾತನಾಡಲಿ ಅವರಿಗೆ ಮೈದಾನ ಕುಲ್ಲಾ ಬಿಟ್ಟಿದ್ದೇನೆ,
ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಹಾಗೂ ವಿರೋಧಿ ಮುಖಂಡರಿಗೆ ಟಾಂಗ್ ನೀಡಿದರು.

ಮೊದಲಬಾರಿಗೆ ಬಿಜೆಪಿ ಸೇರ್ಪಡೆ ಗೊಂಡು ಸ್ವ ಕ್ಷೇತ್ರಕ್ಕೆ ಆಗಮಿಸಿದ ಹೆಬ್ಬಾರ್ ಮಾಧ್ಯಮಗಳೊಂದಿಗೆ ಮಾತನಾಡಿ 18 ನೇ ತಾರೀಕು ಭಾರತೀಯ ಜನತಾ ಪಾರ್ಟಿ ಯಿಂದ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತೇನೆ,ಒಂಬತ್ತನೇ ತಾರೀಕಿನ ನಂತರ ವಿರೋಧಿಗಳಿಗೆ ಉತ್ತರ ಕೊಡುತ್ತೇನೆ,
ನಾನು ಮಂತ್ರಿಗಿರಿ ಕೇಳಿಲ್ಲ ಅಥವಾ ನಿಗಮ ಕೇಳಿಲ್ಲ ಬೇರೆಯವರೆಲ್ಲಾ ಮಂತ್ರಿ ಗಿರಿ ಕೇಳಿದ್ದರು ತೊಗೊಂಡಿದ್ದಾರೆ,ನಾನು ನನ್ನ ಕ್ಷೇತ್ರದ ಅಭಿವೃದ್ಧಿ ಗಾಗಿ ಜೋಳಿಗೆ ಹಾಕಿ ಬೇಡಲು ಸಿದ್ಧ ,ಇಂದಿನ ಮುಖ್ಯಮಂತ್ರಿ ಗೂ ಕಾಡುತ್ತೇನೆ ಬೇಡುತ್ತೇನೆ ಕ್ಷೇತ್ರದ ಅಭಿವೃದ್ಧಿ ಗಾಗಿ ಜೋಳಿಗೆ ಹಿಡಿಯುತ್ತೇನೆ ಎಂದರು.

ಇನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಮೊದಲಬಾರಿ ಆಗಮಿಸಿದ ಹೆಬ್ಬಾರ್ ಗೆ ಹಾರಹಾಕಿ ಘೋಷಣೆ ಕೂಗಿ ಪಟಾಕಿ ಸಿಡಿಸಿ ಅಭಿಮಾನಿಗಳು ಬರಮಾಡಿಕೊಂಡರು.

18 ಕ್ಕೆ ನಾಮಪತ್ರ ಸಲ್ಲಿಕೆ

ಶಿವರಾಮ್ ಹೆಬ್ಬಾರ್ ಬಿಜೆಪಿ ಅಭ್ಯರ್ಥಿ ಯಾಗಿ 18 ನೇ ತಾರೀಕಿನಂದು ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

18 ನೇ ತಾರೀಕಿನ ಸೋಮವಾರ ದಂದು ಮಧ್ಯಾನ 1 ಘಂಟೆಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಅಂದು ಸಂಸದ ಅನಂತಕುಮಾರ್ ಹಗ್ಡೆ,ಜಗದೀಶ್ ಶಟ್ಟರ್,ಬಸವರಾಜ್ ಬೊಮ್ಮಾಯಿ,ಸಿ.ಎಂ ಉದಾಸಿ ಮುಂತಾದ ಪ್ರಮುಖ ನಾಯಕರ ಜೊತೆ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಭಾಗವಹಿಸುವರು.
Leave a Reply

Your email address will not be published. Required fields are marked *