ಕಾರವಾರ:- ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಆಪ್ತ
ದ್ಯಾಮಣ್ಣ ದೊಡ್ಮಣಿ ಕಾರ್ಯಕರ್ತರಿಗೆ ಹಣ ಹಂಚುತ್ತಿರೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತರಕನ್ನಡದ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯಲ್ಲಿ ದ್ಯಾಮಣ್ಣ ದೊಡ್ಮಣಿ ದುಡ್ಡು ಹಂಚುವ ಮೂಲಕ ಕೆಲ ಮತದಾರರನ್ನು ಸಮಾಧಾನ ಪಡಿಸುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಈ ದೃಶ್ಯವನ್ನು ಸ್ವತಃ ಜತೆಗಿದ್ದ ಕಾರ್ಯಕರ್ತರೇ ರೆಕಾರ್ಡ್ ಮಾಡಿಕೊಂಡಿದ್ದು, ಬಿಜೆಪಿಗರಿಗೆ ಬಲವಾದ ಏಟು ನೀಡಿದಂತಾಗಿದೆ.
ವಿಶೇಷವೆಂದರೆ ಕಾರಿನಲ್ಲಿ ಬಂದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಅವರು ದ್ಯಾಮಣ್ಣ ದೊಡ್ಮಣಿ ಹಾಗೂ ಕಾರ್ಯಕರ್ತರ ಜತೆ ಮಾತುಕತೆ ನಡೆಸಿ ತೆರಳಿದ್ದು, ಬಳಿಕ ದ್ಯಾಮಣ್ಣ ದೊಡ್ಮಣಿ ಮಾತನಾಡುತ್ತಾ ಭರ್ಜರಿ ಹಣ ವಿತರಣೆ ಮಾಡಿದ್ದಾರೆ.
ಹಣ ನೀಡುತ್ತಿರುವ ವಿಡಿಯೋ ನೋಡಿ:-

ಈ ಹಿಂದೆ ಹೆಬ್ಬಾರ್ ಕಾಂಗ್ರೆಸ್ ನಲ್ಲಿದ್ದಾಗ ದ್ಯಾಮಣ್ಣ ದೊಡ್ಮಣಿ ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಹೆಬ್ಬಾರ್ ಬಿಜೆಪಿ ಸೇರಿದ ನಂತರ ಅವರೂ ಬಿಜೆಪಿ ಸೇರಿ ಬನವಾಸಿ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು, ಮತದಾನದ ಹಿಂದಿನ ದಿನ ಮತದಾರರಿಗೆ ಹಣ ಆಮಿಷ ಒಡ್ಡಿದ ಸಾಕ್ಷಾಧಾರ ದೊರೆತಿದೆ.
100 ಜನರ ಲಿಸ್ಟ್ನೊಂದಿಗೆ, ರವಿ ಎಂಬುವರಿಗೆ 50 ಸಾವಿರ ರೂ. ನೀಡಿ, ಸಾಹೇಬ ( ಹೆಬ್ಬಾರ್ ) ಹಾಗೂ ಅವರ ಮಗ ( ವಿವೇಕ್ ) ಈ ಕಡೆ ತಲೆ ಹಾಕಿಲ್ಲ ‘ ಎಂಬಿತ್ಯಾದಿ ಮಾತುಗಳು ದಾಖಲಾಗಿದೆ. ‘ ಪುತ್ತೂರಾಯ ‘ ಎಂಬ ವ್ಯಕ್ತಿಯ ಹೆಸರು ಹಲವು ಬಾರಿ ಉಲ್ಲೇಖವಾಗಿದ್ದು, ಅವರಿಂದ ಹಣ ಪಡೆಯಿರಿ ಎಂದೂ ಸಹ ದ್ಯಾಮಣ್ಣ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ನಾಳೆ ಮತದಾನವಿದ್ದು ಯಲ್ಲಾಪುರ ಕ್ಷೇತ್ರದಲ್ಲಿ ಎಲ್ಲಿ ಬಿಜೆಪಿ ಪ್ರಭಾವ ಕಮ್ಮಿ ಇದೆಯೋ ಅಲ್ಲಿ ತಲಾ ಒಂದು ಓಟಿಗೆ 300ರಿಂದ 500ರೂ.ನಂತೆ ಹಣ ಹಂಚಲಾಗುತ್ತಿದೆ ಎಂಬ ವಿಚಾರ ಈ ವಿಡಿಯೋದಿಂದ ಸಾಭೀತಾಗಿದ್ದು ಮತದಾರರನ್ನು ಓಲೈಸಲು ಹೆಬ್ಬಾರ್ ಹಣದ ಹೊಳೆ ಹರಿಸುತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
