BREAKING NEWS
Search

ನನಗೆ ಯಾರ ಭಯವೂ ಇಲ್ಲ,ಮುಖ್ಯಮಂತ್ರಿಗಳು ಯಾವ ಖಾತೆ ಕೊಟ್ರು ಪ್ರಸಾದ ಎಂದು ಸ್ವೀಕರಿಸುತ್ತೇನೆ-ಶಿವರಾಮ್ ಹೆಬ್ಬಾರ್.

389

ಕಾರವಾರ :- ಮುಖ್ಯಮಂತ್ರಿಗಳು ಯಾವ ಖಾತೆಯನ್ನು ಕೊಟ್ರು ಪ್ರಸಾದ ಎಂದು ಸ್ವೀಕರಿಸುತ್ತೇನೆ.ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಗೌರವ ತರುವ ಕೆಲಸ ಮಾಡುತ್ತೇನೆ ಎಂದು ಹೊಸದಾಗಿ ಸಚಿವ ಸ್ಥಾನ ಅಲಂಕರಿಸಿದ ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು. ಸಚಿವರಾಗಿ ಮೊದಲಬಾರಿ ಸ್ವ ಕ್ಷೇತ್ರಕ್ಕೆ ಆಗಮಿಸಿ ಮಾತನಾಡಿದ ಅವರು ಪಕ್ಷದ್ರೋಹಿಗಳು ಎಲ್ಲೇ ಸಚಿವರಾದ್ರೂ ಅವರು ಅನರ್ಹರೇ ಎನ್ನುವ ಸಿದ್ದರಾಮಯ್ಯ ಹೇಳಿಕೆ ಗೆ ಕಿಡಿ ಕಾರಿದರು.

ಸಿದ್ದರಾಮಯ್ಯನವರು ಘನತೆಗೆ ತಕ್ಕ ಮಾತನ್ನು ಆಡಿದ್ರೆ ಒಳ್ಳೇದು.ಘನತೆ ಮೀರಿ ಮಾತನಾಡಿದ್ರೆ ಅವರ ಗೌರವಕ್ಕೆ ಶೋಭೆ ತರುವುದಿಲ್ಲ
ಸಿದ್ದರಾಮಯ್ಯ ಭಾಷೆಯಲ್ಲಿ ಉತ್ತರ ಕೊಡಲು ನಮಗೂ ಬರುತ್ತೆ ಆದ್ರೆ ನಾವೇಲ್ರು ಬಹಳ ತಾಳ್ಮೆಯಿಂದ ಶಬ್ದ ಬಳಸ್ತಾ ಇದ್ದೇವೆ.

ನಮಗೆ ಯಾರ ಭಯವೂ ಇಲ್ಲ ,ಸಿದ್ದರಾಮಯ್ಯನವರನ್ನು ಸಮಾಧಾನ ಪಡಿಸುವ ಅವಶ್ಯಕತೆ, ಅನಿವಾರ್ಯತೆ ನಮಗಿಲ್ಲ.ಅವರು ಘನತೆಗೆ ತಕ್ಕ ಮಾತನಾಡಿದ್ರೆ ಅವರಿಗೂ ಒಳ್ಳೆಯದು, ಅವರ ಆರೋಗ್ಯಕ್ಕೂ ಒಳ್ಳೆಯದು ಎಂದರು.ಇದೇ ವೇಳೆ ಶಿರಸಿಯ ಮಾರಿಕಾಂಬ ದೇವಿಗೆ ಹಾಗೂ ತಮ್ಮ ಗ್ರಾಮ ದೇವತೆಗೆ ಪೂಜೆ ಸಲ್ಲಿಸಿದರು.ಈ ವೇಳೆ ಮೊದಲಬಾರಿ ಸಚಿವರಾಗಿ ಕ್ಷೇತ್ರಕ್ಕೆ ಬಂದ ಹೆಬ್ಬಾರ್ ರವರನ್ನು ಪಕ್ಷದ ಕಾರ್ಯಕರ್ತರು ಸನ್ಮಾನಿಸಿದರು.
Leave a Reply

Your email address will not be published. Required fields are marked *