BREAKING NEWS
Search

ವಠಾರ ಶಾಲೆ ಮೂಲಕ 1.13 ಲಕ್ಷ ಮಕ್ಕಳಿಗೆ ಪಾಠ- ಪಶು ಸಂಗೋಪನಾ ಸಚಿವ ಶ್ರೀ ಪ್ರಭು ಚವ್ಹಾಣ.

502

ಬೀದರ್ :- ಕೊರೊನಾ ಸಂಕಷ್ಟದ ನಡುವೆ ದೇಶದ ಶೈಕ್ಷಣಿಕ ವ್ಯವಸ್ಥೆ ಬುಡಮೇಲಾಗಿದ್ದು ಕಳೆದ ಆರು ತಿಂಗಳಿಂದ ವಿದ್ಯಾರ್ಥಿಗಳು ಶಾಲೆಯಿಂದ ದೂರವಿದ್ದು, ಆನ್​ಲೈನ್​ ಶಿಕ್ಷಣ ಪಡೆಯುತ್ತಿದ್ದು ವಿಧ್ಯಾರ್ಥಿಗಳ ಮನೆ ಬಾಗಿಲಿಗೆ ಶಿಕ್ಷಣ ಕಲ್ಪಿಸುವ ವಠಾರ ಶಾಲೆ ಆರಂಭಿಸಲಾಗಿದೆ ಎಂದು ಪಶು ಸಂಗೋಪನಾ, ವಕ್ಫ, ಹಜ್, ಬೀದರ್ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಠಾರ ಶಾಲೆಗಳ ಮೂಲಕ ಹೊಸ ದಾರಿ ಹುಡುಕಿಕೊಂಡಿದೆ. ಜಿಲ್ಲೆಯಲ್ಲಿನ ಒಟ್ಟು 1.68 ಲಕ್ಷ ವಿದ್ಯಾರ್ಥಿಗಳ ಪೈಕಿ 1,13,000 ವಿದ್ಯಾರ್ಥಿಗಳಿಗೆ ವಠಾರ ಶಾಲೆಯ ಮೂಲಕ ಶೈಕ್ಷಣಿಕ ವಾತಾವರಣ ಕಲ್ಪಿಸುವಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಯಶಸ್ವಿಯಾಗಿದ್ದು, 7,013 ಶಿಕ್ಷಕರು ವಠಾರ ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದಾರೆ.

ಶಾಲೆಯಿಂದ ಹೊರಬಂದು ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ 25 ವಿದ್ಯಾರ್ಥಿಗಳಿಗೊಬ್ಬ ಶಿಕ್ಷಕರಂತೆ, ಸಮುದಾಯ ಕೇಂದ್ರ, ಮಸೀದಿ, ಚರ್ಚ್, ಮಂದಿರ, ಆಲದ ಮರ ಇಂತಹ ಪ್ರದೇಶಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್​ ಹಾಗೂ ಸ್ಯಾನಿಟೈಸರ್ ಬಳಸಿ ಪಾಠ ಮಾಡಲಾಗುತ್ತಿದೆ. ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಸಚಿವರಿಂದ ಹೊಳ ಹಬ್ಬ ಆಚರಣೆ

ಇಂದು ಈ ದೇಶಕ್ಕೆ ಅನ್ನ ನೀಡುವ ರೈತರ ಪರಂಪರೆಯ ಹೊಳ ಹಬ್ಬದ ಅಂಗವಾಗಿ ಮಾನ್ಯ ಪಶು ಸಂಗೊಪನೆ ಹಾಗೂ ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ ಅವರು ಔರಾದ್ ತಾಲ್ಲೂಕಿನ ಸ್ವ ಗ್ರಾಮದಲ್ಲಿ ಹಬ್ಬ ಆಚರಿಸಿದರು.

ಇದೆ ಸಂದರ್ಭದಲ್ಲಿ ಗ್ರಾಮಸ್ಥರು ರೈತರ ಬೆನ್ನೆಲುಬಾದ ಎತ್ತುಗಳಿಗೆ ಪೂಜೆ ಮಾಡಿ ನಂತರ ಶೃಂಗಾರ ಮಾಡಿ ದೇವರ ಗುಡಿಗೆ ಪ್ರದಕ್ಷಿಣೆ ಹಾಕಿ ಮೆರವಣಿಗೆ ನಡೆಸುವ ಮೂಲಕ ತಮ್ಮ ಹಬ್ಬ ಅತಿ ವಿಜ್ರಂಭಣೆಯಿಂದ ಆಚರಣೆ ಮಾಡಿದರು. ಈ ಮೆರವಣಿಗೆಯಲ್ಲಿ ಸ್ವತಃ ಸಚಿವರು ಎದುರಿಗೆ ನಿಂತು ರೈತರಿಗೆ ಹುರಿದುಂಬಿಸಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ