ಕಾರವಾರ :- ಪ್ರತಿ ನಿತ್ಯ ಸಣ್ಣವಿಷಯಗಳಿಗೂ ಕಲಹ ಮಾಡುತಿದ್ದ ಪತ್ನಿಯನ್ನು ಮಚ್ಚಿನಿಂದ ಕೊಲೆಮಾಡಿ ಅಡವಿಯಲ್ಲಿ ಕುಳಿತಿದ್ದ ಪತಿಯನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗೋಡ್ಮನೆಯಲ್ಲಿ ಇಂದು ನಡೆದಿದೆ.
ಮಂಜುಳಾ ಚನ್ನಯ್ಯ (46) ಕೊಲೆಯಾದ ದುರ್ದೈವಿಯಾಗುದ್ದು ,ಮಂಜುನಾಥ ಚನ್ನಯ್ಯ ಕೊಲೆ ಮಾಡಿದವನಾಗಿದ್ದಾನೆ.

ಪ್ರತಿ ದಿನ ಗಂಡ ಹೆಂಡತಿ ಚಿಕ್ಕ ವಿಷಯಗಳಿಗೂ ಜಗಳವಾಡುತಿದ್ದರು.ಇಂದು ಸಹ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಪ್ರತಿ ದಿನ ಜಗಳದಿಂದ ರೋಸಿದ್ದ ಮಂಜುನಾಥ್ ಮನೆಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಸಿಟ್ಟಿನಿಂದ ಪತ್ನಿಯ ತಲೆಗೆ ಹೊಡೆದಿದ್ದಾನೆ. ಕತ್ತಿಯ ಹೊಡೆತಕ್ಕೆ ಮಂಜುಳಾಲ ತಲೆಗೆ ದೊಡ್ಡ ಹೊಡೆತ ಬಿದ್ದು ರಕ್ಕಸ್ರಾವವಾಗಿದೆ. ಈವೇಳೆ ಹೆದರಿದ ಮಂಜುನಾಥ್ ಮನೆಯಿಂದ ಓಡಿಹೋಗಿ ಕಾಡಿನಲ್ಲಿ ಅವಿತು ಕುಳಿತಿದ್ದ.
ತಲೆಗೆ ಗಂಭೀರ ಗಾಯವಾಗಿದ್ದ ಮಂಜುಳಾಲನ್ನು ಸಿದ್ದಾಪುರ ಆಸ್ಪತ್ರೆಗೆ ಸಾಗಿಸುವ ವೇಳೆ ತೀವ್ರ ರಕ್ತಸ್ರಾವದಿಂದ ಅಸುನೀಗಿದ್ದಾಳೆ.
ಘಟನೆ ನಡೆಯುತಿದ್ದಂತೆ ಸ್ಥಳೀಯರು ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದು ,ತಕ್ಷಣ ಕಾರ್ಯಪ್ರವೃತ್ತರಾದ ಆರಕ್ಷಕರು ತಂಡವನ್ನು ರಚಿಸಿ ಗ್ರಾಮದ ಕಾಡಿಗೆ ತೆರಳಿದ್ದರು. ಈವೇಳೆ ಮಳೆಯಿದ್ದರಿಂದ ಕಾಡಿನಲ್ಲಿ ಅವಿತಿದ್ದ ಮಂಜುನಾಥ್ ಬೇರೆಡೆ ತೆರಳಲು ಹೊರಡುವಾಗ ಪೊಲೀಸರ ಅಥಿತಿಯಾಗಿದ್ದು ಘಟನೆ ನಡೆದ ಕೆಲವೇ ತಾಸಿನಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.