ಸಿದ್ದಾಪುರ-ಹಸು ಹುಡುಕಲು ಹೋದ ವ್ಯಕ್ತಿಗೆ ಗುಂಡು ತಗಲಿ ಗಂಭೀರ!

569

ಕಾರವಾರ :- ನಾಡ ಬಂದೂಕಿನಿಂದ ಗುಂಡು ಹಾರಿ ವ್ಯಕ್ತಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗವಿನ ಸರ ದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಮಹೇಶ್ ಪೂಜಾರಿ ಗುಂಡು ತಗುಲಿದ ವ್ಯಕ್ತಿಯಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿ ಪಂಡಿತ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹಸು ಹುಡುಕಲು ಕಾಡಿಗೆ ಹೋಗಿದ್ದ ಈತನಿಗೆ ಕಾಡಿನಲ್ಲಿ ಭೇಟೆ ಆಡಲು ಬಂದಿದ್ದ ಅಪರಿಚಿತರು ಪ್ರಾಣಿ ಎಂದು ಗುಂಡು ಹಾರಿಸಿದ್ದು ಕಾಲಿಗೆ ಗಾಯವಾಗಿದೆ.ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ