ಸಿದ್ದಾಪುರದಲ್ಲಿ 40 ಕೆಜಿ ಶ್ರೀಗಂಧ ಮರದ ತುಂಡುಗಳು ವಶ

1474

ಕಾರವಾರ :- ಶ್ರೀಗಂಧ ಕಳ್ಳಸಾಗಣೆ ಮಾಡುತ್ತಿದ್ದ ಕಳ್ಳರನ್ನು ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಿದ್ದಾಪುರದ ಕಾನಗೋಡು ಸಮೀಪದ ಅರಣ್ಯದಲ್ಲಿ ನಡೆದಿದೆ.

ಕಾನಗೋಡು ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಮರ ಕಳ್ಳತನ ಮಾಡುತಿದ್ದವ ಕೊನೆಗೂ ಬಂಧನ.

ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಶ್ರೀಗಂಧ ಮರವನ್ನು ಕತ್ತರಿಸಿ ಚಕ್ಕೆ ಮಾಡಿ ಸಾಗಿಸುವಾಗ ಸಿಕ್ಕಿಬಿದ್ದಿದ್ದಾನೆ.

ಶಿವಮೊಗ್ಗ ಜಿಲ್ಲೆಯ ತಾಳಗುಪ್ಪ ಮೂಲದ ಈರಪ್ಪ ನಾಯ್ಕ(52) ಸಿಕ್ಕಿಬಿದ್ದ ಶ್ರೀಗಂಧದ ಕಳ್ಳನಾಗಿದ್ದು ಈತನಿಂದ ಅರಣ್ಯ ಇಲಾಖೆಯವರು 40 ಕೆಜಿ ತೂಕದ ಸುಮಾರು ಎರಡೂವರೆ ಲಕ್ಷ ಮೌಲ್ಯದ ಶ್ರೀಗಂಧ ವನ್ನು ಸಿದ್ದಾಪುರ ಅರಣ್ಯ ವಿಭಾಗದ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದು ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Reply

Your email address will not be published. Required fields are marked *