ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶ್ರೇಯಸ್ ರಾಜ್ ರವರು ಸತತ ಎರಡುಘಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಎರಡು ತಲೆ ಹಾಗೂ ಆರು ಕಾಲುಗಳಿರುವ ಕರುವನ್ನು ಶಸ್ತ್ರ ಚಿಕಿತ್ಸೆ ನೆಡೆಸಿ ಹೊರತೆಗೆದಿದ್ದಾರೆ.


ಶಿವಮೊಗ್ಗ ಜಿಲ್ಲೆಯ ತಾಳಗುಪ್ಪದ ಮಡಿವಾಳಕೇರಿಯ ಅನಂತ್ ವೀರಭದ್ರ ಎಂಬುವವರು ಸಿದ್ದಾಪುರದ ಪಶುವೈದ್ಯಾಧಿಕಾರಿ ಬಳಿ ಮಲೆನಾಡು ಗಿಡ್ಡ ತಳಿಯ ಹಸುವನ್ನು ತಂದಿದ್ದು ಕರುವನ್ನು ಹೊರತೆಗೆದಾಗ ಈ ವಿಚಿತ್ರ ಕರು ಗರ್ಭದಲ್ಲೇ ಸಾವನ್ನಪ್ಪಿತ್ತು.ಆದರೇ ಬಲು ಅಪರೂಪಕ್ಕೆ ಈ ರೀತಿ ಜನಿಸುವ ಎರಡು ತಲೆ ಹಾಗೂ ಆರು ಕಾಲುಗಳಿರುವ ಅಪರೂಪದ ಕರುವನ್ನು ಜನ ಮುಗಿಬಿದ್ದು ವೀಕ್ಷಿಸಿದರು.